ಬೀದರ್:ನಿಟ್ಟೂರ್ ಬಿ ಗ್ರಾಮದಲ್ಲಿರುವ ಶ್ರೀ ವೀರಭದ್ರೇಶ್ವರ ಶಾಲೆಯಲ್ಲಿ ಲರ್ನಿಂಗ್ ಲಿಂಕ್ಸ್ ಫೌಂಡೇಶನ್ ಮತ್ತು ಡೆಲ್ ಟೆಕ್ನಾಲಜೀಸ್ ಆಯೋಜಿಸಿದ ಸಾಧಕ ನಿಟ್ಟೂರ್ ಬಿ ಗ್ರಾಮದಲ್ಲಿರುವ ಶ್ರೀ ವೀರಭದ್ರೇಶ್ವರ ಶಾಲೆಯಲ್ಲಿ ಲರ್ನಿಂಗ್ ಲಿಂಕ್ಸ್ ಫೌಂಡೇಶನ್ ಮತ್ತು ಫೌಂಡೇಶನ್ ಟೆಕ್ನಾಲಜೀಸ್ ಆಯೋಜಿಸಿದ ಸಾಧಕ ಮಕ್ಕಳಿಗೆ ಸೈಬರ್ ಸೆಕ್ಯೂರಿಟಿ ಜಾಗೃತಿ ಅವಶ್ಯಕ ಎಂದು ದಯಾನಂದ್ ಹಿರೇಮಠ್ ತಿಳಿಸಿದರು.
ಇತ್ತೀಚೆಗೆ ಹೆಚ್ಚುತ್ತಿರುವ ಸೈಬರ್ ಅಪರಾಧಗಳ ಹಿನ್ನೆಲೆಯಲ್ಲಿ ಈ ಕುರಿತು ಸೈಬರ್ ಸುರಕ್ಷತೆ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮತ್ತು ಮೊಬೈಲ್ ನ ಅಸುರಕ್ಷಿತ ಬಳಕೆಯಿಂದಾಗಿ ಅದೆಷ್ಟೋ ಮುಗ್ಧ ಜನರು ವಿದ್ಯಾವಂತರು ಸಹ ಮೋಸದ ಜಾಲಕ್ಕೆ ಗುರಿಯಾಗುತ್ತಿದ್ದಾರೆ ಇದನ್ನು ನಿಯಂತ್ರಿಸಲು ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು ಎಂದು ಲರ್ನಿಂಗ್ ಲಿಂಕ್ ಫೌಂಡೇಶನ್ ಹಾಗೂ ಡೆಲ್ ಟೆಕ್ನಾಲಜಿಸ್ ಸಹಾಯಕ ವ್ಯವಸ್ಥಾಪಕ ದಯಾನಂದ್ ಹಿರೇಮಠ ಹೇಳಿದರು.
ಅಧ್ಯಕ್ಷ ವಹಿಸಿದ್ದ ಮುಖ್ಯೋಪಾಧ್ಯಾಯರಾದ ದಿಲೀಪ್ ಕುಮಾರ್ ದವನಪುರೆಗೆ ಮಾತನಾಡಿ ಇಂದಿನ ಆನ್ಲೈನ್ ವ್ಯವಸ್ಥೆಯಲ್ಲಿ ಮಕ್ಕಳು ಯಾವ ರೀತಿಯಲ್ಲಿ ಬಳಕೆ ಮಾಡಬೇಕು ಎನ್ನುವ ಬಗ್ಗೆ ಹಾಗೂ ಇಂದಿನ ಡಿಜಿಟಲ್ ವ್ಯವಸ್ಥೆಯ ಬಗ್ಗೆ ಮನವರಿಕೆ ಮಾಡಿಕೊಳ್ಳಬೇಕು ಮಕ್ಕಳು ಆಟ ಆಡುವ ಆಪ್ ಬಳಸಿ ಮೋಸ ಹೋಗುತ್ತಿದ್ದಾರೆ ಆದ್ದರಿಂದ ಯಾವುದೇ ವಿಷಯವನ್ನು ಪರಿಚಯ ಇಲ್ಲದವರ ಜೊತೆ ಹಂಚಿಕೊಳ್ಳಬಾರದೆಂದು ಸಲಹೆ ನೀಡಿದರು.
ಸೈಬರ್ ಸೆಕ್ಯೂರಿಟಿ ಒಲಂಪಿಯಾಡ್ ಪರೀಕ್ಷೆಯಲ್ಲಿ ಉತ್ತಮ ಸ್ಥಾನ ಪಡೆದವರಿಗೆ ಪ್ರಥಮ ಪತ್ರ ಮತ್ತು ಬಹುಮಾನ ವಿತರಿಸಲಾಯಿತು ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.