ಕಲಬುರಗಿ:ಯಡ್ರಾಮಿ ಪಟ್ಟಣದಲ್ಲಿ ಕರ್ನಾಟಕ 50ರ ಸಂಭ್ರಮ ರಥಯಾತ್ರೆಗೆ ಯಡ್ರಾಮಿ ತಾಲೂಕಿನ ಸಾರ್ವಜನಿಕರು ಸ್ಥಳೀಯರು ಹಾಗೂ ರಾಜಕೀಯ ಮುಖಂಡರು ಅಧಿಕಾರಿಗಳು ಕನ್ನಡಪರ
ಸಂಘಟನೆಗಳು ಅದ್ದೂರಿಯಾಗಿ ಕನ್ನಡಾಂಬೆ ತಾಯಿ ಭುವನೇಶ್ವರಿ ಕರ್ನಾಟಕ 50 ರ ಸಂಭ್ರಮ ರಥಯಾತ್ರೆ ಅದ್ದೂರಿಯಾಗಿ ಬರಮಾಡಿಕೊಂಡು ಸ್ವಾಗತ ಕೋರಿದರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಸರ್ದಾರ್ ಶರಣಗೌಡ ವೃತ್ತದವರೆಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ
ಕನ್ನಡಾಂಬೆ ಬಾವುಟ ಕೈಯಲ್ಲಿ ಹಿಡಿದುಕೊಂಡು ಕನ್ನಡ ಗೀತೆಯ ನೃತ್ಯ ಮಾಡುವ ಮೂಲಕ ಡೊಳ್ಳು ಕುಣಿತ ಯಡ್ರಾಮಿ ಸುತ್ತಮುತ್ತಲಿನ ಹಳ್ಳಿಯಿಂದ ಆಗಮಿಸಿದ
ಯುವಕರು ರೈತರು ಯಡ್ರಾಮಿ ಪಟ್ಟಣದ ಸ್ಥಳೀಯರು ಉತ್ಸಾಹದಿಂದ ವಿಜೃಂಭಣೆಯಿಂದ ಸರ್ದಾರ್ ಶರಣಗೌಡ ವೃತ್ತದ ವರೆಗೆ ಕರ್ನಾಟಕ 50 ರ ಸಂಭ್ರಮ ರಥಯಾತ್ರೆಗೆ ಮೆರಗು ತಂದು ಕೊಟ್ಟರು ಮತ್ತು
ರಥ ಯಾತ್ರೆಯ ಭವ್ಯವಾದ ಉತ್ಸವವು ನೋಡುಗರ ಕಣ್ಮನ ಸೆಳೆದು ಮನಸೂರೆಗೊಂಡವು
ಈ ಸಂದರ್ಭದಲ್ಲಿ ಯಡ್ರಾಮಿ ತಹಶೀಲ್ದಾರ ನಾಗನಾಥ ಸೇಡಂ ಪಟ್ಟಣ ಪಂಚಾಯತಿ ಮುಖ್ಯಧಿಕಾರಿ ಸಂತೋಷ್ ಕುಮಾರ್ ರೆಡ್ಡಿ ಹಾಗೂ ಪಶು ವೈದ್ಯಕೀಯ ಅಧಿಕಾರಿ ಡಾ.ಪ್ರಭು ಕಲ್ಲೂರ್ ಹಾಗೂ ಶಿರಸ್ತೆದಾರರಾದ ಮಾಲಿಂಗಯ್ಯ ನಾಗೇಂದ್ರ ಪಾಟೀಲ್,ಕಂದಾಯ ನಿರೀಕ್ಷಕ ಈರಣ್ಣ,ರಾಜಕೀಯ ಮುಖಂಡರಾದ ಚಂದ್ರು ಪುರಾಣಿಕ್,ಗುರಣ್ಣ ಕಾಚಾಪುರ್ ಹಾಗೂ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಅಧ್ಯಕ್ಷರು,ಉಪಾಧ್ಯಕ್ಷರು,ಸದಸ್ಯರು ಯಡ್ರಾಮಿ ತಾಲೂಕಿನ ಸುತ್ತಮುತ್ತ ಹಳ್ಳಿಯ ರೈತರು ಸ್ಥಳೀಯರು ಭಾಗವಹಿಸಿದ್ದರು.
