ವಡಗೇರಾ:ಕನಾ೯ಟಕ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘ(ರಿ.) ವಡಗೇರಾ ತಾಲೂಕು ವತಿಯಿಂದ ಜನವರಿ ತಿಂಗಳು ಯಾದಗಿರಿ ಜಿಲ್ಲಾ ಸಮಾವೇಶ ಮಾಡುವ ಕುರಿತು ಚರ್ಚೆ ಮಾಡಲು ವಡಗೇರಾ ಪಟ್ಟಣದ ಶ್ರೀ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಇಂದು 1 ಗಂಟೆಗೆ ವಡಗೇರಾ ತಾಲೂಕು ಅಧ್ಯಕ್ಷರಾದ ಶ್ರೀ ವಿರೇಶ ಕೊಂಕಲ್ ಅವರ ನೇತೃತ್ವದಲ್ಲಿ ಅತಿಥಿ ಶಿಕ್ಷಕರ ಸಭೆ ಕರೆದು ಯಾದಗಿರಿ ಜಿಲ್ಲಾ ಸಮಾವೇಶ ಕುರಿತು ಮಾಹಿತಿ ನೀಡಿದರು ನಮ್ಮ ಬೇಡಿಕೆಗಳಾದ 25 ಸಾವಿರ ವೇತನ,ಪ್ರತಿ ವರ್ಷ 5 ಕೃಪಾಂಕ,ಸೇವಾ ಭದ್ರತೆ,ಪ್ರತಿ ತಿಂಗಳು ವೇತನ ನೀಡಬೇಕು ಎಂದು ನಮ್ಮ ವಿವಿಧ ಬೇಡಿಕೆಗಳು ಇಡೆರಿಸುವಂತೆ ನಮ್ಮ ಜೀಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಮೂರು ಜನ ಶಾಸಕರಿಗೆ ಸಮಾವೇಶಕ್ಕೆ ಆಹ್ವಾನ ನೀಡಿ ಅವರಿಗೆ ಅತಿಥಿ ಶಿಕ್ಷಕರ ಸಮಸ್ಯೆಗಳು ಹಾಗೂ ನಿತ್ಯ ಕಷ್ಟದ ಜೀವನ ಕುರಿತು ಮಾಹಿತಿ ನೀಡಿ ಅವರಿಗೆ ಸಮಾವೇಶದಲ್ಲಿ ಮನವಿ ನೀಡಬೇಕು ಎಂದು ಹೇಳಿದರು.
ನಮ್ಮ ಸಮಸ್ಯೆಗಳು ಮನವರಿಕೆ ಮಾಡಿಕೊಡಬೇಕು ಹಾಗಾಗಿ ವಡಗೇರಾ ತಾಲೂಕಿನ ಎಲ್ಲಾ ಪದಾಧಿಕಾರಿಗಳು ಹಾಗೂ ಅತಿಥಿ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಬೆಂಬಲ ಸೂಚಿಸಬೇಕು ಎಂದು ಮನವಿ ಮಾಡಿದರು ಈ ಮೂಲಕ ವಡಗೇರಾ ತಾಲೂಕು ಮಟ್ಟದ ಎಲ್ಲಾ ಅತಿಥಿ ಶಿಕ್ಷಕರು ಯಾದಗಿರಿ ಜಿಲ್ಲಾ ಸಮಾವೇಶಕ್ಕೆ ಬೆಂಬಲ ನೀಡುವುದಾಗಿ ಒಗ್ಗಟ್ಟಿನಿಂದ ಹೇಳಿದರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು ತಾಲೂಕು ಗೌರವಾಧ್ಯಕ್ಷರಾದ ಶ್ರೀಮತಿ ಶಾಂತಾಬಾಯಿ,ಉಪಾಧ್ಯಕ್ಷರಾದ ಶ್ರೀ ಈರಣ್ಣ ಮಾಲಹಳ್ಳಿ,ಕಾಯ೯ದಶಿ೯ಗಳಾದ ಶ್ರೀ ಹುಸೇನ್ ಸಾಬ್,ಖಂಜಾಚಿ ಕಾಳಪ್ಪ ಬಡಿಗೇರ್, ಸಂ.ಸಂಚಾಲಕರಾದ ಶ್ರೀ ವಿದ್ಯಾಧರ ಜಾಕಾ,ಮೌನೇಶ್ ಶಿವಪೂರ,ವಿಶ್ವನಾಥ ರೆಡ್ಡಿ ಯಾದಗಿರಿ,ಸುರೇಖಾ ಯಾದಗಿರಿ,ತಾಯಪ್ಪ ಖಾನಾಪೂರ ಅತಿಥಿ ಶಿಕ್ಷಕರಾದ ಪರಶುರಾಮ್ ತುಮಕೂರು,ದೇವಿಂದ್ರಪ್ಪ ಕೊಂಕಲ್,ಬಸಪ್ಪ ಕ್ಯಾತನಾಳ, ಶಿಕ್ಷಕಿಯರಾದ ಈಶ್ವರಿ,ನೂರಜಹಾಬೇಗಂ,ಶ್ರೀದೇವಿ,ಮಂಜುಳಾ,
ಸೈದಾವತಿ, ಸುಮಂಗಲಾ ಮುಂತಾದವರು ಭಾಗವಹಿಸಿದ್ದರು.
ವರದಿ:ಶಿವರಾಜ್ ಸಾಹುಕಾರ್