ವಡಗೇರಾ ಪಟ್ಟಣದ ವಾರ್ಡ್ ಸಂಖ್ಯೆ 2 ರ ದಾಸರ ಓಣಿಯಲ್ಲಿರುವ ಐದನೇ ಅಂಗನವಾಡಿ ಕೇಂದ್ರವು ಅವ್ಯವಸ್ಥೆಯನ್ನು ಹೊಂದಿದ್ದು ಹಂದಿಗಳ ತಾಣವಾಗಿದೆ ಎಂದು ರಾಜ್ಯ ರೈತ ಸಂಘ ಹಸಿರು ಸೇನೆ ವಾಸುದೇವ ಮೇಟಿ ಬಣದ ವಡಗೇರಾ ತಾಲೂಕು ಗೌರವಾಧ್ಯಕ್ಷ ಶರಣು ಜಡಿ ಆರೋಪಿಸಿದ್ದಾರೆ.ಅಂಗನವಾಡಿಯ ಸುತ್ತಮುತ್ತಲೂ ಕಸ ಕಡ್ಡಿ ಚರಂಡಿ ನೀರುಗಳಿಂದ ತುಂಬಿದೆ ಇಲ್ಲಿನ ಅಂಗನವಾಡಿ ಕೇಂದ್ರಕ್ಕೆ ಕಂಪೌಂಡ್ ಇಲ್ಲದ ಕಾರಣ ಹಂದಿಗಳ ತಾಣವಾಗಿ ಮಾರ್ಪಟ್ಟಿದೆ ಮತ್ತು ದಿನನಿತ್ಯ ಮಕ್ಕಳು ಇಲ್ಲಿನ ಅಂಗನವಾಡಿ ಶಾಲೆಗೆ ಬರಬೇಕಾದರೆ ಭಯದ ವಾತಾವರಣದಿಂದ ಬರುತ್ತಾರೆ ಏಕೆಂದರೆ ಹಂದಿಗಳು ಕಚ್ಚುತ್ತವೆ ಎಂಬ ಭಯ ಮಕ್ಕಳಲ್ಲಿದೆ ಇಲ್ಲಿ ಸರಿಯಾದ ಶುದ್ಧ ಕುಡಿಯುವ ನೀರು ಶೌಚಾಲಯ ಆಟದ ಮೈದಾನದ ವ್ಯವಸ್ಥೆ ಇಲ್ಲ ಚರಂಡಿಯ ಹೊಲಸು ನೀರು ಮತ್ತು ದುರುನಾಥದಿಂದ ಮಕ್ಕಳಿಗೆ ಹಲವಾರು ರೋಗ ರುಜಿನಗಳು ಹರಡುತ್ತಿವೆ ಈ ಕಾರಣದಿಂದ ಪಾಲಕರು ತಮ್ಮ ಮಕ್ಕಳನ್ನು ಅಂಗನವಾಡಿ ಶಾಲೆಗೆ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ ಆದರೆ ಸಂಬಂಧಿಸಿದ ಅಧಿಕಾರಿಗಳು ಮಾತ್ರ ತೀವ್ರ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ ಮತ್ತು ಈ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಅಂಗನವಾಡಿ ಕೇಂದ್ರ ಸುತ್ತಮುತ್ತ ಸ್ವಚ್ಛಗೊಳಿಸಿ ತಡೆಗೋಡೆ ನಿರ್ಮಾಣ ಶುದ್ಧ ಕುಡಿಯುವ ನೀರು ಶೌಚಾಲಯ ಆಟದ ಮೈದಾನದ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ರಾಜ್ಯ ರೈತ ಸಂಘದ ವಡಗೇರಾ ತಾಲೂಕು ಗೌರವಾಧ್ಯಕ್ಷ ಶರಣು ಜಡಿ ಒತ್ತಾಯಿಸಿದ್ದಾರೆ.
ವರದಿ:ಶಿವರಾಜ್ ಸಾಹುಕಾರ್,ವಡಗೇರಾ