ಬೀದರ:ಕಲ್ಯಾಣ ಕರ್ನಾಟಕದ ಹೆಮ್ಮೆಯ ಸಾಹಿತಿಗಳು,ಸಂವೇದನಾಶೀಲ ಬರಹಗಾರರು , ವೈಚಾರಿಕ ಚಿಂತಕರು,ಅಂಕಣಕಾರರು,ಪತ್ರಕರ್ತರು, ಸಂಘಟಕರು,ಪರಿಸರ ಸಂರಕ್ಷಕರು, ಹೋರಾಟಗಾರರು,ಸಾಂಸ್ಕೃತಿಕ ಸಂಘಟಕರಾದ ಶರಣ ಶ್ರೀ ಸಂಗಮೇಶ ಎನ್ ಜವಾದಿ ಅವರಿಗೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ
ಕೊಡಮಾಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಗೊಂಡಿರುವುದಕ್ಕೆ ಬಹಳ ಸಂತಸವಾಗಿದೆ ಎಂದು ಜವಾದಿಯವರ ಅಭಿಮಾನಿ ಬಳಗದ ಅಧ್ಯಕ್ಷ ಬಸವರಾಜ ಮಂಕಲ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು
ಜವಾದಿಯವರ ವಿಶಿಷ್ಟ ಪ್ರಗತಿಪರ ವಿಚಾರಧಾರೆಗಳ ಸಂವೇದನ ಶೀಲತೆಯಿಂದ ಈ ನಾಡಿನಲ್ಲಿ ತಮ್ಮದೇ ಆದಂತ ವೈಚಾರಿಕ ಛಾಪು ಮೂಡಿಸಿದ ಹೊಸ ತಲೆಮಾರಿನ ಬರಹಗಾರರು.
ಮೂಲತ ಸಾಮಾಜಿಕ ಸೇವಕರು, ಪರಿಸರ ಸಂರಕ್ಷಕರು,ಹೋರಾಟಗಾರರಾಗಿ ಗುರುತಿಸಿಕೊಂಡರೂ ಅದರಾಚೆಗೆ ವೈಜ್ಞಾನಿಕ ಲೇಖನಗಳನ್ನು,ಜೀವನಚರಿತ್ರೆ ವಿಮರ್ಶೆ ಸಂಶೋಧನೆಗಳಲ್ಲೂ ಕಾರ್ಯನಿರ್ವಹಿಸಿ ಬಹುಶ್ರುತ ಬರಹಗಾರರು ಎನಿಸಿದ್ದಾರೆ.ಸತ್ಯ ತತ್ವ ಪರ ನೆಲೆಗಳಲ್ಲಿ ವ್ಯಾಖ್ಯಾನ ಮಾಡುವ ಮೂಲಕ ಪ್ರಖರ ವಿಚಾರವಾದಿ ಎನಿಸಿದ್ದಾರೆ ಒಂದು ದಶಕಗಳಿಂದ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡ ಅವರಿಗೆ ಸಂದ ಪ್ರಶಸ್ತಿ ಪುರಸ್ಕಾರ ಬಹುಮಾನಗಳು ಅನೇಕ ಶ್ರೀಯುತ ಸಂಗಮೇಶ ಎನ್ ಜವಾದಿ ಅವರು ಅನೇಕ ಸಾಹಿತ್ಯ,ಸಾಂಸ್ಕೃತಿಕ,ಶೈಕ್ಷಣಿಕ ಕ್ಷೇತ್ರಗಳ ಪದಾಧಿಕಾರಿಗಳಾಗಿ ಕಾರ್ಯ ಪ್ರಸ್ತುತ ನಿರ್ವಹಣೆ ಮಾಡುತ್ತಿದ್ದಾರೆ.ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಬೀದರ್ ಜಿಲ್ಲಾಧ್ಯಕ್ಷ,ರಾಷ್ಟ್ರೀಯ ದೇಹಾಂಗದಾನ ಜಾಗೃತಿ ಸಮಿತಿ ಬೀದರ ಜಿಲ್ಲೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕವಿತೆ,ಲೇಖನ,ಅಂಕಣ,ವೈಜ್ಞಾನಿಕ ವಿಮರ್ಶೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಂಗಮೇಶ ಎನ್ ಜವಾದಿ ಅವರು ವೈಚಾರಿಕ ಲೇಖನಗಳನ್ನು ಬರೆಯುವ ಮೂಲಕ ತಮ್ಮ ಛಾಪನ್ನು ಮೂಡಿಸಿದ್ದಾರೆ.ಇದೀಗ ಇವರು ಬರೆದ ‘ನಾ ಕಂಡ ಸಾಂಸ್ಕೃತಿಕ ಚಿಂತಕರು’ ಎಂಬ ಕೃತಿಗೆ ಗುಲ್ಬರ್ಗ ವಿಶ್ವವಿದ್ಯಾಲಯ ವತಿಯಿಂದ ನೀಡಲಾಗುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಬಹಳ ಖುಷಿ ತಂದಿದೆ ಶ್ರೀಯುತ ಸಂಗಮೇಶ ಎನ್ ಜವಾದಿ ರವರಿಗೆ ಆದರಪೂರ್ವಕವಾಗಿ ಅಭಿನಂದನೆಗಳು ಸಲ್ಲಿಸುತ್ತೇವೆ ಎಂದು ಹೇಳಿದರು.