ಭದ್ರಾವತಿ:ರಸ್ತೆ ಸುರಕ್ಷಾ ಸಪ್ತಾಹದ ಅಂಗವಾಗಿ ಉಪವಿಭಾಗದ ಪೋಲೀಸ್ ಹಾಗೂ ದ್ವಿಚಕ್ರ ವಾಹನ ಮೆಕ್ಯಾನಿಕ್ ಸಂಘದ ಸಹಯೋಗದೊಂದಿಗೆ ಅಂಡರ್ ಬ್ರಿಡ್ಜ್ ನಿಂದ ರಂಗಪ್ಪ ವ್ರತ್ತದವರೆಗೆ “ಹೆಲ್ಮೆಟ್ ಧರಿಸಿ, ಜೀವ ಉಳಿಸಿ” ಎಂಬ ಘೋಷದೊಂದಿಗೆ ಬೈಕ್ ಜಾಥಾ ಹಮ್ಮಿಕೊಳ್ಳಲಾಯಿತು.
ನಗರ ವೃತ್ತ ನಿರೀಕ್ಷಕ ಶ್ರೀಶೈಲಕುಮಾರ್ ಬೈಕ್ ಜಾಥಾಗೆ ಹಸಿರು ನಿಶಾನೆ ತೋರಿದರು.ಸಂಚಾರಿ ಠಾಣೆಯ ಠಾಣಾಧಿಕಾರಿ ಶಾಂತಲಾ ರವರ ನೇತೃತ್ವದಲ್ಲಿ ಹಳೇನಗರ ಠಾಣೆಯ ಕಾನೂನು ಸುವ್ಯವಸ್ಥೆ ಮತ್ತು ಅಪರಾಧ ವಿಭಾಗದ ಠಾಣಾಧಿಕಾರಿಗಳು,ಸಂಚಾರಿ ಹಾಗೂ ಹಳೇನಗರ ಠಾಣೆಯ ಸಹಾಯಕ ಠಾಣಾಧಿಕಾರಿಗಳು ಹಾಗೂ ಸಿಬ್ಬಂದಿಗಳ ಜೊತೆಗೆ ಅಂಡರ್ ಬ್ರಿಡ್ಜ್ ನಿಂದ ಬಿ ಹೆಚ್ ರಸ್ತೆಯ ಹಾಲಪ್ಪ ವೃತ್ತ,ಮಾಧಾವಾಚಾರ್ ವೃತ್ತದ ಮೂಲಕ ಸಿ ಎನ್ ರಸ್ತೆ ರಂಗಪ್ಪ ವೃತ್ತದವರೆಗೆ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನದಲ್ಲಿ ಜಾಥಾ ನಡೆಸಿದರು.
ಸಿ ಪಿ ಐ ಶ್ರೀಶೈಲ ಕುಮಾರ್ ರವರು ಧರಿಸಿದ್ದ ಹೆಲ್ಮೆಟ್ ನಲ್ಲಿ “ನಿನಗಲ್ಲದಿದ್ದರೂ ನಿನ್ನ ಕುಟುಂಬಕ್ಕಾಗಿ ಹೆಲ್ಮೆಟ್ ಧರಿಸು” ಎಂಬ ವಾಕ್ಯ ಜಾಗೃತಿ ಜಾಥಾದ ಉದ್ದೇಶವನ್ನು ತಿಳಿಸಿದೆ.
ವರದಿ:ಕೆ ಆರ್ ಶಂಕರ್ ಭದ್ರಾವತಿ