ವಿಜಯನಗರ/ಕೊಟ್ಟೂರು:ಪ್ರಚಲಿತ ವಿದ್ಯಾಮಾನದಲ್ಲಿ ಮಕ್ಕಳಿಗೆ ಮಾತೃಭಾಷೆ ಕಲಿಕೆ ಬಹಳ ಅತ್ಯವಶ್ಯಕವಾಗಿದೆ,ಕನ್ನಡ ಶಾಲೆಗೆ ಮಕ್ಕಳನ್ನು ನೋಂದಣಿ ಮಾಡಿಸುವಲ್ಲಿ ಪೋಷಕರ ಆಸಕ್ತಿ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿರುವುದು ಆತಂಕದ ವಿಷಯವಾಗಿದೆ.ಕನ್ನಡ ಭಾಷಾ ಶಾಲೆಗಳು,ನಾವು ಕಲಿತ ಶಾಲೆಗಳು ಇಂದಿನ ದಿನಗಳಲ್ಲಿ ಅಳಿವಿನ ಅಂಚಿನಲ್ಲಿರುವುದನ್ನು ನಾವು ನೋಡುತಿದ್ದೇವೆ,ಸರ್ಕಾರಗಳು ಶಿಕ್ಷಕರನ್ನು ಬೋಧನೆ ಮಾತ್ರ ಸೀಮಿತಗೊಳಿಸಬೇಕು,ಸರ್ಕಾರ ಶಿಕ್ಷಕರನ್ನು ಬೇರೆ ಬೇರೆ ಯೋಜನೆಗಳಿಗೆ,ಬಿಸಿಊಟದ ಕೆಲಸಗಳಿಗೆ ಬಳಸಿಕೊಳ್ಳದೇ ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು ಆಗ ಕನ್ನಡ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಶಿಕ್ಷಕರಿಂದ ಸಾಧ್ಯ ಎಂದು ದತ್ತಿ ಉಪನ್ಯಾಸದಲ್ಲಿ ಶ್ರೀ ಎಸ್.ಎಂ.ಗುರು ಪ್ರಸಾದ್ ತಿಳಿಸಿದರು.
ಕರ್ನಾಟಕ 50 ರ ಸಂಭ್ರಮಾಚರಣೆ ಕಾರ್ಯಕ್ರಮದ ನಿಮಿತ್ತ ಮಾತೃಭಾಷೆ ಹಾಗೂ ಪ್ರಚಲಿತ ಶೈಕ್ಷಣಿಕ ಸಮಸ್ಯೆಗಳು ದತ್ತಿ ಉಪನ್ಯಾಸ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ಕಸಾಪ ಕೊಟ್ಟೂರು ತಾಲೂಕು ಘಟಕ ಕೋಲಶಾಂತೇಶ್ವರ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕವಿಗೋಷ್ಠಿ ಅಧ್ಯಕ್ಷತೆ ಎಸ್.ಡಿ.ಈರಗಾರ್ ವಹಿಸಿಕೊಂಡಿದ್ದರು ಕವಿಗೋಷ್ಠಿಯಲ್ಲಿ ಗುರುಬಸವರಾಜ,ಪದ್ಮಾವತಿ ಹೆಚ್.ಎನ್.ವಿರೇಶ ಎಂ.ಎಸ್.ನಾಗರಾಜ್ ಹಿಂದಿ ಶಿಕ್ಷಕರು ಸೇರಿ 25 ಕವಿಗಳು ಭಾಗವಹಿಸಿ ಕವಿವಾಚನ ಮಾಡಿದರು.ಕವನ ವಾಚನ ಮಾಡಿದ ಕವಿಗಳಿಗೆ ಕಸಾಪ ತಾಲೂಕು ಘಟಕದಿಂದ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಶ್ರೀ ಎಂ.ಎಂ.ಜೆ ಶರತ್ಚಂದ್ರ ವಕೀಲರು ಹಾಗೂ ಶ್ರೀ ಹೆಚ್.ಎಂ.ದಾರುಕೇಶ್ ಬಿ.ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷರು ಮತ್ತು ಕೊಟ್ಟೂರಿನ ವರ್ತಕರಾದ ಅಂಗಡಿ ಪಂಪಾಪತಿ ಸಭೆ ಆಗಮಿಸಿದ ಮುಖ್ಯ ಅತಿಥಿಗಳಿಗೆ ಕಸಾಪ ಕೊಟ್ಟೂರು ತಾಲೂಕು ಘಟಕದಿಂದ ಸನ್ಮಾನಿಸಲಾಯಿತು.
ಕಸಾಪ ತಾಲೂಕು ಘಟಕದ ಗೌರವ ಕಾರ್ಯದರ್ಶಿಯಾದ ಅರವಿಂದ್ ಬಸಾಪುರ ಹಾಗೂ ಸಾಹಿತ್ಯಾಸಕ್ತರಾದ ಶಿವಮೂರ್ತಿ ಸ್ವಾಮಿ,ಕೊಟ್ರೇಶಪ್ಪ ಅಳವಂಡಿ ಮತ್ತು ಶಿಕ್ಷಕ ಶಿಕ್ಷಕಿಯರು,ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕಸಾಪ ತಾಲೂಕು ಅಧ್ಯಕ್ಷರಾದ ದೇವರಮನೆ ಕೊಟ್ರೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಶ್ರೀ ಎಂ.ಎಂ.ಜೆ ಶರತ್ಚಂದ್ರ ವಕೀಲರು ಉದ್ಘಾಟಿಸಿದರು ಶಿಕ್ಷಕರು ನಿರೂಪಿಸಿದರು.
ವರದಿ:ವೈ.ಮಹೇಶ್ ಕುಮಾರ್