ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಭಾವೈಕ್ಯತೆಯ ಸಂತ ಸ್ವಾಮಿ ವಿವೇಕಾನಂದರು:(ಸ್ವಾಮಿ ವಿವೇಕಾನಂದರ ಜನ್ಮದಿನದ ನಿಮಿತ್ತ ಬರೆದ ಲೇಖನ)

1893 ಸೆಪ್ಟೆಂಬರ್ 11ರಂದು ಚಿಕಾಗೊ ಸರ್ವಧರ್ಮ ಸಮ್ಮೇಳನದಲ್ಲಿ ನಡೆದ ಐತಿಹಾಸಿಕ ಉಪನ್ಯಾಸ ಸಮಾರಂಭದಲ್ಲಿ ಅಮೆರಿಕದ ಸಹೋದರಿಯರೆ ಮತ್ತು ಸಹೋದರರೆ,ನಮಗೆ ನೀವು ನೀಡಿರುವ ಆತ್ಮೀಯವಾದ ಆಮಂತ್ರಣಕ್ಕೆ ವಂದನೆಗಳನ್ನು ಸಲ್ಲಿಸಲು ಬಂದಿರುವೆ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಿದ್ದಂತೆ ಇಡೀ ಸಮಾರಂಭದಲ್ಲಿ ಚಪ್ಪಾಳೆ-ಚಪ್ಪಾಳೆ.
ಶ್ರೀಗಳು ಮುಂದುವರಿದು ಹೇಳುತ್ತಾರೆ…
ಈ ಸಮಯದಲ್ಲಿ ನನ್ನ ಹೃದಯ ಅವರ್ಣನೀಯ ಆನಂದದಿಂದ ತುಂಬಿ ತುಳುಕುತ್ತಿದೆ ಕೇವಲ ಸಮನ್ವಯವೊಂದೇ ಅಲ್ಲ,ಸ್ವೀಕಾರದ ಪಾಠವನ್ನೂ ವಿಶ್ವಕ್ಕೆ ಸಾರಿದ ದೇಶಕ್ಕೆ ನಾನು ಸೇರಿದವನು. ಸರ್ವಧರ್ಮಗಳನ್ನೂ ಸಮಭಾವದಿಂದ ನೋಡುವುದು ಮಾತ್ರವಲ್ಲ,ಎಲ್ಲಾ ಧರ್ಮಗಳೂ ನಿಜವೆಂದು ನಾವು ಸ್ವೀಕರಿಸಿ,ಜಾಗತಿಕ ಪ್ರಪಂಚಕ್ಕೆ ಪರಿಚಯಿಸಿದೇವೆ.ಜಗತ್ತಿನ ಸಂತರ ಸಮುದಾಯದ ಪರವಾಗಿ,ಎಲ್ಲಾ ಧರ್ಮಗಳ ಪರವಾಗಿ ನಾನು ನಿಮಗೆ ಧನ್ಯವಾದ ಅರ್ಪಿಸುತ್ತೇನೆ‌.ಅನೇಕ ದೇಶಗಳಲ್ಲಿ ಹಂಚಿಹೋಗಿರುವ ಕೋಟ್ಯಾಂತರ ಭಾರತೀಯರ ಜನತೆಯ ಪರವಾಗಿ ನಾನು ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ವೇದಿಕೆ ಮೇಲೆ ಸಿಡಿಲಬ್ಬರದ ನುಡಿಗಳನ್ನಾಡಿ ವಿಶ್ವ ಸಮುದಾಯದ ಹೃದಯ ಗೆದ್ದ,ಹೃದಯ ವೈಶಾಲ್ಯತೆ ಮೆರೆದ, ಹೃದಯ ಶ್ರೀಮಂತಿಕೆ ಪ್ರಚುರಪಡಿಸಿದ ಧೀಮಂತ ಭಾವೈಕ್ಯತೆಯ ಸಂತ ಸ್ವಾಮಿ ವಿವೇಕಾನಂದರು.
ಅಂದು ಅಮೆರಿಕಾದ ಶಿಕಾಗೋದಲ್ಲಿ ಸ್ವಾಮಿ ವಿವೇಕಾನಂದ ಶ್ರೀಗಳು ಮಾಡಿದ ಐತಿಹಾಸಿಕ ಭಾಷಣ ಭಾರತದ ಇತಿಹಾಸದ ಪುಟಗಳಲ್ಲಿ ಮರೆಯಲಾಗದ ಕ್ಷಣ.ಚಿಕಾಗೋದ ಕೊಲಂಬಿಯನ್ ಜಾಗತಿಕ ಮೇಳದ ಅಂಗವಾಗಿ ನಡೆದ ವಿಶ್ವಧರ್ಮ ಸಮ್ಮೇಳನ ಪ್ರಪಂಚದ ಇತಿಹಾಸದಲ್ಲೇ ಮಹತ್ವಪೂರ್ಣ ಚಾರಿತ್ರಿಕ ಘಟನೆಯಾಗಿದೆ.ಭಾರತದ ಚರಿತ್ರೆಯಲ್ಲಿ ಇದೊಂದು ಹೊಸ ಅಧ್ಯಾಯವೊಂದಕ್ಕೆ ಮುನ್ನುಡಿ ಬರೆದು, ನಾಂದಿ ಹಾಡಿದ ಭಾಷಣ ಎಂದರೆ ತಪ್ಪಾಗಲಾರದು. ಪ್ರಪಂಚದ ಸಕಲ ಮತಧರ್ಮಗಳ ಪ್ರತಿನಿಧಿಗಳು ಇದರಲ್ಲಿ ಭಾಗಿಗಳಾಗಿದ್ದರು.ಇದೊಂದು ಮಾನವತೆಯ ಆದರ್ಶಗಳ ಒಗ್ಗೂಡಿಸುವಿಕೆಯ ಸಮ್ಮೇಳನವಾಗಿತ್ತು.
ಮನುಷ್ಯನಿಗೆ ಶಾಂತಿ,ನೆಮ್ಮದಿಯನ್ನು ತರುವುದೇ ನಿಜವಾದ ಮನುಷ್ಯತ್ವದ ಧರ್ಮವಾಗಿದೆ.ಪರಧರ್ಮ ಸಹಿಷ್ಣುತೆಯಲ್ಲಿ ನಮಗೆ ನಂಬಿಕೆಯುಂಟು,ಅಷ್ಟೇ ಅಲ್ಲ,ಎಲ್ಲಾ ಧರ್ಮಗಳೂ ಸತ್ಯವನ್ನು ಪ್ರತಿಪಾದಿಸುತ್ತವೆ ಎಂಬುದನ್ನು ನಾವು ಒಪುತ್ತೇವೆ. ಜಗತ್ತಿಗೆ ಸಾರುತ್ತೇವೆ.ಸರ್ವರನ್ನು ಪ್ರೀತಿ,ಗೌರವ, ಸ್ನೇಹ,ಸೌಹಾರ್ದ ಸಹೋದರತೆಯಿಂದ ಕಾಣುತ್ತೇವೆ.ಎಲ್ಲಾ ಧರ್ಮಗಳ ಘೋಷಣೆಗಳ ಅಂತರಾಳ ಒಂದೇ ಮಾನವೀಯತೆಯಿಂದ ಬದುಕುವುದು.ಇನ್ನೊಬ್ಬರನ್ನು ಸ್ವಚ್ಛಂದವಾಗಿ ಬದುಕುವಂತೆ ನೋಡಿಕೊಳ್ಳುವುದು.ಸಾಮರಸ್ಯ ಮತ್ತು ಶಾಂತಿಯೇ ಹೊರತು ಅಂತಃಕಲಹ ಬೇಡವೇ ಬೇಡ ಎಂಬ ನೀತಿಗಳನ್ನು ಅಳವಡಿಸಿಕೊಂಡು ಸಾಗುವುದೇ ನಿಜವಾದ ಧರ್ಮ ಎಂದು ನಂಬಿದವರು ನಾವು ಭಾರತೀಯರು ಎಂದರು.
ಅಲ್ಲದೇ ಭೂಮಿಯ ಮೇಲಿನ ಎಲ್ಲಾ ಧರ್ಮಗಳ,ಎಲ್ಲಾ ದೇಶಗಳ ಪೀಡಿತರು ಹಾಗೂ ಅನಾಥರಿಗೆ ಆಶ್ರಯ ನೀಡಿದ ದೇಶ ನನ್ನದು ಎಂಬುದು ನನಗೆ ಹೆಮ್ಮೆಯಿದೆ.ಮತಭೇದಗಳು,ಅಂಧಶ್ರದ್ಧೆ ಹಾಗೂ ಅದರ ಭಯಾನಕ ಉತ್ಪನ್ನವಾದ ಮೂಲಭೂತವಾದಗಳು ಈ ಸುಂದರ ಪೃಥ್ವಿಯನ್ನು ತುಂಬ ಹಿಂದಿನಿಂದಲೇ ಆಕ್ರಮಿಸಿಕೊಂಡಿವೆ.ಅವು ಧರೆಯನ್ನು ಹಿಂಸಾಚಾರದ ವಿಷದಿಂದ ತುಂಬಿಸಿವೆ, ಮಾನವ ರಕ್ತದಿಂದ ಪದೇ ಪದೆ ತೋಯಿಸಿವೆ, ನಾಗರಿಕತೆಗಳನ್ನು ನಾಶಗೊಳಿಸಿವೆ,ಇಡೀ ದೇಶಗಳನ್ನೇ ಸರ್ವನಾಶಕ್ಕೆ ದೂಡಿವೆ ಇಂಥ ಭಯಾನಕ ಹಂತಕರ ಕಿರುಕುಳ ಇಲ್ಲದೆ ಹೋಗಿದ್ದರೆ ಆಧುನಿಕ ಸಮಾಜ ಬಹಳ ಮುಂದೆ ಇರಬೇಕಾಗಿತ್ತು ಮತ್ತು ಬೆಳಗಬೇಕಾಗಿತ್ತು.ದುರ್ದೈವವೆಂದರೆ ನಮ್ಮ ಧರ್ಮವೇ ಶ್ರೇಷ್ಠ ಎಂಬ ಅಹಂಕಾರದ ಭಾವನೆಯಲ್ಲಿ ಮುಳುಗಿ ಹೋದ ಕೆಲವರ ಕಾರಣದಿಂದ ಇನ್ನು ವಿಶ್ವ ಸಮೃದ್ಧಿಯಾಗಿ ಬೆಳೆದೆ ಇರುವುದಕ್ಕೆ ಪ್ರಮುಖ ಕಾರಣವಾಗಿದೆ.ಈ ದಿಶೆಯಲ್ಲಿ ಈಗಲಾದರೂ ಎಚ್ಚೆತ್ತುಕೊಂಡು,ಮಾನವರೆಲ್ಲರೂ ಒಂದೇ,ವಿಶ್ವವೇ ಒಂದು ಕುಟುಂಬ ಎಂಬ ಭಾವನೆಯ ಅಡಿಯಲ್ಲಿ ಹೆಜ್ಜೆ ಇಟ್ಟಾಗ ಮಾತ್ರ,ವಿಶ್ವ ಸಮೃದ್ಧಿ ಮತ್ತು ಸುಖಮಯದಲ್ಲಿ ತೇಲಾಡುತ್ತದೆ.ಶಾಂತಿ ಸರ್ವರ ಮನದಲ್ಲಿ ಮೂಡುತ್ತದೆ.ದ್ವೇಷ,ಮದ,ಮತ್ಸರ,ಹಗೆತನ ಕೊನೆಯಾಗಿ ಭಾವೈಕ್ಯತೆಯ ಜಗವ ಕಾಣುತ್ತೇವೆ ಎಂದಿದ್ದರು.ಅಂತೆಯೇ ವಿಭಿನ್ನ ಜಾತಿ,ಮತಗಳ ಮಾನವ ಸಂಕುಲವನ್ನು ಒಂದೇ ಗೂಡಿನಲ್ಲಿ ಪೋಷಿಸುತ್ತಿರುವ ಭಾರತವನ್ನು ಪ್ರತಿನಿಧಿಸಿ ವಿವೇಕಾನಂದರು ಮಾಡಿದ ಮಾತುಗಳು ಭಾರತೀಯರಲ್ಲಿ ಸ್ವಾಭಿಮಾನವನ್ನು ಬಡಿದೆಬ್ಬಿಸುವಂತಹದಿತ್ತು.
ಇಂತಹ ಮಾಹಾನ ಸ್ವಾಮಿ ವಿವೇಕಾನಂದರ ಈ ಜೈತ್ರಯಾತ್ರೆ ನಿಜಕ್ಕೂ ಅದ್ಭುತವೇ ಸರಿ ಪರದೇಶಗಳ ಪರಿಚಯವೇ ಇಲ್ಲದ,ಹೊಟ್ಟೆ-ಬಟ್ಟೆಗಳ ಪರಿವೆ ಇಲ್ಲದ, ಎಲ್ಲಿಗೆ ಹೇಗುವುದು,ಏನು ಮಾತನಾಡುವುದೆಂಬುದರ ಅರಿವಿಲ್ಲದ,ಕೊನೆಗೆ-ತಾನಾರೆಂಬ ಪರಿಚಯ ಪತ್ರವೂ ಇಲ್ಲದ ವ್ಯಕ್ತಿಯೊಬ್ಬ ದಿನ ಬೆಳಗಾಗುವುದರಲ್ಲಿ ವಿಶ್ವವಿಖ್ಯಾತನಾಗಿದ್ದು ಮರೆಯುವುದಕ್ಕೆ ಹೇಗೆ ಸಾಧ್ಯ?
‘ನ ರತ್ನಂ ಅನ್ವಿಷ್ಯತಿ ಮೃಗ್ಯಾತೇ ಹಿ ತತ್’ (ರತ್ನ ತಾನೇ ಯಾರನ್ನೂ ಅರಸುತ್ತಾ ಹೋಗುವುದಿಲ್ಲ,ಅದು ಹುಡುಕಲ್ಪಡುತ್ತದೆ)ಎನ್ನುವಂತೆ ವಿವೇಕಾನಂದರ ಪ್ರತಿಭೆ ತಾನೇತಾನಾಗಿ ಹರಡಿತು.ಇವರ ಪ್ರಭಾವಕ್ಕೆ ಸಿಕ್ಕು ಮನೆಗೆ ಆಹ್ವಾನಿಸಿದ ಹಾರ್ವರ್ಡ್ ಯುನಿವರ್ಸಿಟಿಯ ಪ್ರೊಫೆಸರ್ ರೈಟ್ ಎರಡು ದಿನ ಇವರೊಡನೆ ಮಾತು ಕತೆಯಾಡಿ ಉದ್ಗರಿಸಿದ್ದು ಹೀಗೆ – “ಅಮೆರಿಕದ ನೆಲದ ಮೇಲೆ ಕಳೆದ ನಾಲ್ಕುನೂರು ವರ್ಷಗಳಲ್ಲಿ ಇಂತಹ ಜ್ಞಾನಿ ತಿರುಗಾಡಿದ ಉಲ್ಲೇಖಗಳೇ ಇಲ್ಲ!” ಎಂದು.ಸ್ವಾಮೀಜಿ ಸರ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ತಮ್ಮ ಬಳಿ ಪರಿಚಯ ಪತ್ರವಿಲ್ಲ ಎಂದಾಗ ಆತ ನಕ್ಕುಬಿಟ್ಟಿದ್ದರು.“ನೀವು ಯಾರೆಂದು ಕೇಳುವುದೂ,ಸೂರ್ಯನಿಗೆ ಹೊಳೆಯಲು ಏನಧಿಕಾರ ಎಂದು ಕೇಳುವುದೂ ಒಂದೇ!!” ಎಂದಿದ್ದರು.ಹೀಗೆ ಚಿಕಾಗೋ ವೇದಿಕೆಯ ಮೇಲಿಂದ ಮೊಳಗಿದ ಬೋರ್ಗ್ ಗರೆಯುವ ವಿವೇಕಾನಂದರ ವಾಣಿಯಿಂದ ಅವರ ಆಶೀರ್ವಾದ ಪಡೆಯಲು ಇಡೀ ಅಮೆರಿಕವೇ ಸಿದ್ಧವಾಗಿ ನಿಂತಿತ್ತು.(ಕೆಲ ಕ್ರಿಶ್ಚಿಯನ್ ಪಾದ್ರಿಗಳನ್ನು ಬಿಟ್ಟು ಏಕೆಂದರೆ,ಅವರ ಉದ್ಯೋಗಕ್ಕೇ ಸ್ವಾಮಿ ವಿವೇಕಾನಂದರು ಸಂಚಕಾರ ತಂದುಬಿಟ್ಟಿದ್ದ ಕಾರಣದಿಂದ!).ಸತ್ಯದ ವಾಣಿ ನುಡಿದ ಹಿನ್ನೆಲೆಯಲ್ಲಿ ಅವರ ನಾಡಿನಲ್ಲಿ ನಿಂತು ಮಾತಾಡಿದ್ದು ಮಾನವೀಯತೆಗೆ ಸಾಕ್ಷಿ ಕಳುಹಿಸಿತುನುಡಿದಿದ್ದೆಲ್ಲ ಭಾವೈಕ್ಯತೆಗೆ ಅಡಿಗಲ್ಲಾಗಿ ಭದ್ರಬುನಾದಿಯಾಯಿತು. ಭಾರತ ದೇಶದ ಕೀರ್ತಿ ವಿಶ್ವದ ತುತ್ತತುದಿಗೂ ಹಬ್ಬಿತು. ಇದೇ ಸಮಯದಲ್ಲಿ ಶ್ರೀಮತಿ ಅನಿಬೆಸೆಂತರು ಹೇಳಿದ ಒಂದು ಮಾತು ನೆನಪಿಗೆ ಬರುತ್ತಿದೆ. “ಆತ ಸಂನ್ಯಾಸಿಯಲ್ಲ, ತಾಯಿ ಭಾರತಿಯ ಅಂತರಾಳದ ಮಾತುಗಳನ್ನಾಡುವ ಯೋಧ”ಎಂದು ಹಾಡಿ ಹೊಗಳಿದ್ದಾರೆ.ಈ ವಿಷಯವು ಅಮೆರಿಕದ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಬಂದಿದ್ದು ಮರೆಯಲಾಗದ ಐತಿಹಾಸಿಕ ಘಟನೆ.ಇನ್ನು ತನ್ನ ಹೃದಯ ತುಂಬಿದ್ದ ಪ್ರೇಮದ ಸುಧೆಯಿಂದ ಎಲ್ಲರನ್ನೂ ತೋಯಿಸಿಬಿಟ್ಟಿದ್ದ ವಿವೇಕಾನಂದರು.
ವಿವೇಕಾನಂದರ ಕುರಿತು ಜರ್ಮನಿಯ ಥಾಮಸ್ ಕುಕ್ ಹೇಳಿದ್ದು ಹೀಗೆ “ಅದೊಮ್ಮೆ ಅವರ ಕೈಕುಲುಕಿ ಮೂರು ದಿನ ಕೈ ತೊಳೆದುಕೊಂಡಿರಲಿಲ್ಲ.ಯಾಕೆಂದರೆ ಅವರ ಪ್ರೇಮದ ಸ್ಪರ್ಷ ಶಾಶ್ವತವಾಗಿ ಆರದಿರಲೆಂದು ಬಯಸಿದ ಕಾರಣದಿಂದ ಎಂದಿದ್ದರು.
ಹೀಗೆ ಸ್ವಾಮಿ ವಿವೇಕಾನಂದರು ಷಿಕಾಗೊದಲ್ಲಿ ನೀಡಿದ ಉಪನ್ಯಾಸಗಳು ಜಗತ್ತಿನ ಚಿಂತನಾಪಥವನ್ನು ಬದಲಾಯಿಸಿ ಭಾರತವನ್ನು ಮುಂಚೂಣಿಯಲ್ಲಿ ನಿಲ್ಲಿಸಿಬಿಟ್ಟಿದಂತು ಸುಳ್ಳಲ್ಲ.ಇದೆ ಸೆಪ್ಟೆಂಬರ್ 11 ಕ್ಕೆ 129 ವರ್ಷಾಚರಣೆಗೆ ಸಾಕ್ಷಿಕರಿಸಿದ ಈ ಉಪನ್ಯಾಸ ಎಂದೂ,ಯಾವತ್ತೂ ಮರೆಯದ ಸಮಾರಂಭ ಎನ್ನುವುದು ನಾವೆಲ್ಲರೂ ಮನಗಂಡು,ಅಂದು ದೇಶಕ್ಕಾಗಿ ಮಿಡಿದ ವಿವೇಕಾನಂದರ ಆತ್ಮದ ಅಂತ:ಕರಣದಂತೆ ಹೆಜ್ಜೆ ಹಾಕುವುದು ಅಗತ್ಯವಿದೆ.

ಈ ದೇಶವನ್ನು ಒಂದೇ ಸೂತ್ರದಲ್ಲಿ ಮುನ್ನಡೆಸಲು ಸ್ವಾಮಿ ವಿವೇಕಾನಂದರ ಆದರ್ಶ ವಿಚಾರಗಳನ್ನು ಅರಿತು ಭವ್ಯ ಭಾರತದ ನಿರ್ಮಾಣಕ್ಕಾಗಿ ದೇಶದ ಯುವ ಶಕ್ತಿಯು ಕೈ ಜೋಡಿಸಿ ಮುಂದೆ ಬರಬೇಕಾಗಿದು ಅವಶ್ಯಕತೆ ಇದೆ.ಇದಕ್ಕಾಗಿ ಸಶಕ್ತ ರಾಷ್ಟ್ರ ನಿರ್ಮಾಣ ಮಾಡುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಎನ್ನುವುದನ್ನು ಅರಿತು ಬಾಳಬೇಕಾಗಿದೆ.ಅವರ ದೇಶ ಪ್ರೇಮ,ಧಾರ್ಮಿಕ ಶ್ರದ್ಧೆ ಮತ್ತು ಆತ್ಮ ವಿಶ್ವಾಸ,ಸೇವಾ ಮನೋಭಾವನೆ ನಮ್ಮ ಯುವಕರಿಗೆ ಸದಾ ಪ್ರೇರಣೆಯಾಗಬೇಕು.ಅದೇ ರೀತಿ ದೇಶ ಕಟ್ಟುವ ಅಭಿವೃದ್ಧಿ ಕಾರ್ಯಕ್ಕೆ ಕೈ ಜೋಡಿಸಿ, ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ಪ್ರಮಾಣಿಕ ಯತ್ನ ಮಾಡಬೇಕು.ಜನರು ಅವರ ಈ ಪವಿತ್ರ ಜನ್ಮದಿನದಂದು ದೇಶದ ಪ್ರಗತಿಗಾಗಿ ಅರ್ಪಣ ಮನೋಭಾವದಿಂದ ನಿಸ್ವಾರ್ಥ ಸೇವಾ ದೀಕ್ಷೆ ತೊಡಬೇಕಾಗಿದೆ.ವಿವೇಕಾನಂದರ ಹೆಸರೇ ಒಂದು ರೋಮಾಂಚನಕಾರಿಯಾಗಿರುವಾಗ,ವಿವೇಕಾಂನದರ ಕ್ರಾಂತಿಕಾರಿ ವಿಚಾರಗಳಿಗೆ ಜನಮನದಲ್ಲಿರುವ ಮೌಢ್ಯದ ಕಾರ್ಗತ್ತಲೆಯನ್ನು ತೊಲಗಿಸಿ, ಜ್ಞಾನದ ಬೆಳಕನ್ನು ಹರಡುವ ಶಕ್ತಿಯಿದೆ.ಅದಕ್ಕಾಗಿ ಇಂದಿನ ಸಮಾಜ ಅದರಲ್ಲೂ ವಿಶೇಷವಾಗಿ ಯುವಜನತೆಯು ವಿವೇಕಾನಂದರ ಕ್ರಾಂತಿಕಾರಿ ವಿಚಾರಗಳನ್ನು ತಮ್ಮ ಜೀವನದಲ್ಲಿ ಮೈಗೂಡಿಸಿಕೊಂಡು ಸಾಗಬೇಕು.

ಆಶಯ ಮಾತು:ಬಂಧುಗಳೇ ಎಂದಿಗೂ ಸ್ವಾಮಿ ವಿವೇಕಾನಂದರು ಗರ್ವದಿಂದ ಬೀಗಲಿಲ್ಲ.ಬದಲಿಗೆ ತಾಯಿ ಭಾರತಿಯೆಡೆಗೆ ಮತ್ತಷ್ಟು ಬಾಗಿದ ಶಿರವಾಗಿ, ನಿಸ್ವಾರ್ಥ ಸೇವೆಗಾಗಿ,ಹಗಲಿರುಳು ದೇಶದ ಏಳಿಗೆಗಾಗಿ ಚಿಂತಿಸುತ್ತಿದ್ದಿದ್ದು ಎಂಬುದು ನಾವು ಮರೆಯಬಾರದು. ಅದಕ್ಕಾಗಿ ಇಂದಿನ ಯುವಕರಿಗೆ ಸ್ವಾಮಿ ವಿವೇಕಾನಂದರು ತೋರಿದ ಸನ್ಮಾರ್ಗ ಸಾಗಬೇಕು.ಅಂದಗಾಲೇ ಮಾತ್ರ ಭಾರತ ದೇಶ ಸೂಪರ್ ಪವರ್ ರಾಷ್ಟ್ರವಾಗಿ ಹೊರಹೊಮ್ಮಲು ಸಾಧ್ಯ.

ಲೇಖಕರು-ಸಂಗಮೇಶ ಎನ್ ಜವಾದಿ.
ಬರಹಗಾರರು ಮತ್ತು ಸಾಮಾಜಿಕ ಸೇವಕರು,ಪರಿಸರ ಸಂರಕ್ಷಕರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ