ಮೈಸೂರು:25 ನೇ ದಿನದ ಬಸವಮಾಸದ ಸತ್ಸಂಗ ಕಾರ್ಯಕ್ರಮದಲ್ಲಿ ಅಷ್ಠಾವರಣಗಳಲ್ಲೊಂದಾದ ಜಂಗಮ ಎಂಬ ವಿಚಾರವಾಗಿ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರದ ಬಸವಕೇಂದ್ರದ ಚರಜಂಗಮ ಪರಮಪೂಜ್ಯ ಶ್ರೀ ಶ್ರೀ ಬಸವಯೋಗಿಪ್ರಭುಗಳು ನಂಜನಗೂಡಿನ ಪ.ಗು ಹಳಕಟ್ಟಿನಗರದ ವೈಕೆಎಲ್ ಸ್ವಾಮಿ ಲೇ ಔಟಿನಲ್ಲಿ ಅನುಭಾವ ನೀಡಿದರು.ಜಂಗಮವೆಂದರೆ ಅದು ಅರಿವು,ಆಚಾರದ,ಅನುಭಾವವುಳ್ಳ ಶಿವಚೈತನ್ಯ,ಅದು ಯಾರಲ್ಲಿರುತ್ತದೆಯೋ ಅವರು ಕೂಡಾ ಜಂಗಮ ಸ್ವರೂಪಿಗಳೆಂದರು.ಒಟ್ಟಾರೆ ಜಂಗಮವೆನ್ನುವುದು ನಾಮ,ಸೀಮೆ,ಕುಲ,ಗೋತ್ರ ಎಲ್ಲವನ್ನೂ ಮೀರಿದ ಘನತರವಾದ ವಸ್ತುವೇ ಆಗಿದೆ ಅದರ ದರ್ಶಿತರೆಲ್ಲರೂ ಜಂಗಮರು. ಭಕ್ತರ ಉದ್ಧಾರ ಮಾಡುವುದು ಜಂಗಮದ ಕೆಲಸವಾಗಿದೆ ಎಂದರು. ಇನ್ನು ಹತ್ತು ಹಲವು ಉದಾಹರಣೆಗಳೊಂದಿಗೆ ತಿಳಿಸಿದರು.ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದಶೂನ್ಯಪೀಠದಮಹಾ ಜಂಗಮರಾದ ಅಲ್ಲಮಪ್ರಭುದೇವರು,ಚೆನ್ನಬಸವಣ್ಣನವರು, ಸಿದ್ದರಾಮೇಶ್ವರರು,ಮಲೆಯ ಮಹದೇಶ್ವರರು,
ತೋಂಟದ ಸಿದ್ದಲಿಂಗೇಶ್ವರರು,ಸುತ್ತೂರಿನ ಘನಲಿಂಗದೇವರು,ದೇವನೂರು ಗುರುಮಲ್ಲೇಶ್ವರರು ಇನ್ನೂ ಅನೇಕರು ಮಹಾಜಂಗಮರಾದಿಯಾಗಿ ಭಕ್ತರಲ್ಲಿಗೆ ತಂಗಾಳಿಯಂತೆ ಸುಳಿದು ಕಷ್ಟಗಳನ್ನು ಕಳೆದು ಅಜ್ಞಾನಕಳೆದು ಸುಜ್ಞಾನ ನೀಡಿ ಜಂಗಮತ್ವ ಎಂದರೆ ಏನು ಎಂಬುದನ್ನು ಅರಿವು ಆಚಾರದ ಮೂಲಕ ಜಗತ್ತಿಗೆ ತೋರಿದ್ದಾರೆ ಆದ್ದರಿಂದ ಈ ಕಾರ್ಯಕ್ರಮವು ಬಹಳ ಮಹತ್ವದಾಗಿದೆ ಎಂದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.