ನಿನ್ನಲ್ಲಿದೆ ಸಾವಿರಾರು
ಮುದ್ದಾದ ಕ್ಷಣಗಳು.
ನೀನು ಜೊತೆಯಲ್ಲಿ ಇದ್ದರೆ ಸಾಕು,
ಅದೆಷ್ಟು ಮಾತುಗಳು ನೆನಪಾಗುತ್ತೆ.
ಎಲ್ಲರ ಮುಖದ ನಗೆ
ನಿನ್ನಲ್ಲಿ ಅಡಗಿಕೊಂಡಿದೆ.
ನೀನೆ ಹಳೆಯ ಮುದ್ದಾದ
ಕ್ಷಣದ ಸಾಕ್ಷಿ.
ಈ ಕ್ಷಣವನ್ನು ನೋಡುತ್ತಿರಲು
ಕಾಯುತ್ತಿರುವ ಅಕ್ಷಿ.
ಫಿಲಂ ನೋಡಲಿ,ಇಲ್ಲ
ಯಾವುದೇ ಕಾರ್ಯಕ್ರಮ ಕೈಗೊಳ್ಳಲಿ
ನಿನ್ನ ಉಪಸ್ಥಿತಿ ಇರದ ಜಾಗವಿಲ್ಲ.
ನಿಜವಾಗಿಯೂ ನೀನೇ ಹೀರೋಗಳ ಹೀರೋ.
ಓ ನನ್ನ ಪ್ರೀತಿಯ ಕ್ಯಾಮೆರಾ
ನೀನಿಲ್ಲವೆಂದರೆ,ಒಬ್ಬ ಕ್ಯಾಮೆರಾ ಮ್ಯಾನ್
ಅಸ್ತಿತ್ವ ಸಹ ಇಲ್ಲ.ಅವನ ಪರಿಚಯ ಪ್ರಾಣ
ನಿನ್ನೊಂದಿಗೆ.
ಕ್ಲಿಕ್ ಕ್ಲಿಕ್ ಅಂತಾ
ಒಂದು ಕ್ಷಣವೂ ನಿಲ್ಲದೆ,ನಿನ್ನ ಕಾರ್ಯವನ್ನು
ಪೂರ್ತಿ ನಿಷ್ಠೆಯಿಂದ ಮಾಡುತಿರುವೆ.
ಇದಕ್ಕೆ ಎಲ್ಲರ ಹೆಗ್ಗಳಿಕೆ ಪಡೆದು
ಮಿಂಚುತಿರುವೆ ಜಗದಲ್ಲಿ.
–ಅಕ್ಷತಾ ಮಿರಜಕರ