ಗದಗ:ಉತ್ತರ ಕರ್ನಾಟಕ ಭಾಗದ ಅದರಲ್ಲೂ ಗದಗ ಜಿಲ್ಲೆಯ ತಿಮ್ಮಾಪೂರ ಗ್ರಾಮದಲ್ಲಿ ಎಳ್ಳ ಅಮಾವಾಸ್ಯೆ ಹಬ್ಬ ವಿಶೇಷ ಮಹತ್ವ ಪಡೆದಿದೆ.
ಭೂತಾಯಿಗೆ ಚರಗ ಚೆಲ್ಲಿ ಸಂಭ್ರಮಿಸುವುದು ಇಲ್ಲಿಯ ಸಂಪ್ರದಾಯ.
ರೈತರು ತಮ್ಮ ಜಮೀನುಗಳಲ್ಲಿ ಬೆಳೆಯ ಮಧ್ಯ ಇರುವ ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಅಲ್ಲಿ ಐದು ಕಲ್ಲುಗಳನ್ನಿಟ್ಟು ಪಾಂಡವರು ಹಾಗೂ ಇನ್ನೂಂದು ಕಲ್ಲು ಕಳ್ಳ ಎಂದು ಭಾವಿಸಿ ಪೂಜೆ ಸಲ್ಲಿಸುವುದರ ಮೂಲಕ ದೇವರಿಗೆ ಉಡಿ ತುಂಬಿ ನೈವೇದ್ಯವನ್ನು ಬೆಳೆಯಲ್ಲಿ ಎರಚಿ ಹುಲಿಗ್ಯೋ ಚಲಮರಿಗೋ ಎಂದು ಭೂತಾಯಿಗೆ ಉಣಬಡಿಸಿ ನಂತರ ಬಂಧು ಬಾಂಧವರೆಲ್ಲರೂ ಸಹಭೋಜನ ಸವಿದರು.
ಹಸಿರು ಹೊದ್ದು ಕಂಗೊಳಿಸುವ ಭೂತಾಯಿಗೆ ಬಾಗಿನ ಅರ್ಪಿಸಿ ಬೆಳೆದ ಬೆಳೆ ಹುಲುಸಾಗಿ ಬೆಳೆದು ಉತ್ತಮ ಇಳುವರಿ ಬರಲಿ ಎಂದು ವಿಶಿಷ್ಟವಾಗಿ ಎಳ್ಳ ಅಮಾವಾಸ್ಯೆಯನ್ನು ಕರ್ನಾಟಕ ರಾಜ್ಯ ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷರಾದ ಯಲ್ಲಪ್ಪ ಎಚ್ ಬಾಬರಿ ಅವರು ತಮ್ಮ ಜಮೀನಿನಲ್ಲಿ ಕುಟುಂಬ ಸಮೇತ ಆಚರಣೆ ಮಾಡುವುದುರ ಮೂಲಕ ಸಂಭ್ರಮಿಸಿದರು.
