ಹನೂರು:ತಾಲೂಕಿನ ಸೂಳೆರಿಪಾಳ್ಯ ಗ್ರಾ.ಪಂ ವ್ಯಾಪ್ತಿಯ ಗಂಗನದೊಡ್ಡಿ ಗ್ರಾಮಕ್ಕೆ ಬಸ್ ಸಂಚಾರ ಆರಂಭಿಸಿದ ಹಿನ್ನೆಲೆ ಬಸ್ ಗೆ ಹೂವಿನ ಅಲಂಕಾರ, ಪೂಜೆ ಸಲ್ಲಿಸಿ,ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ ರೈತ ಸಂಘಟನೆ ಹಾಗೂ ಗ್ರಾಮಸ್ಥರು.
ಇದೇ ವೇಳೆ ಮಾತನಾಡಿದ ಹನೂರು ತಾಲೂಕು ರೈತ ಸಂಘ ಘಟಕದ ಅಧ್ಯಕ್ಷ ಅಮ್ಜದ್ ಖಾನ್ ಸ್ವತಂತ್ರ ಬಂದು ಹಲವು ವರ್ಷಗಳಿಂದ ಬಸ್ ಕಾಣದ ಗ್ರಾಮವಾಗಿತ್ತು,ಇದನ್ನು ಗಮನಿಸಿದ ರೈತ ಸಂಘಟನೆ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳು ಹಾಗೂ ಶಾಸಕರಿಗೆ ಮನವಿ ಸಲ್ಲಿಸಿದರು ಇದನ್ನು ಮನಗಂಡ ಅಧಿಕಾರಿಗಳು ಇಂದು ಗಂಗನ ದೊಡ್ಡಿ ಗ್ರಾಮಕ್ಕೆ ಬಸ್ ಸಂಚಾರ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.ಇದು ತಾತ್ಕಾಲಿಕವಾಗಿ ಬಸ್ ಸಂಚಾರವಲ್ಲ,ಪ್ರತಿನಿತ್ಯ ಈ ಈ ಮಾರ್ಗವಾಗಿ ಬಸ್ ಸಂಚರಿಸುತ್ತದೆ.ಗಂಗನ ದೊಡ್ಡಿ ಗ್ರಾಮದ ಮಾರ್ಗವಾಗಿ ಬಸ್ ಸಂಚಾರ ವ್ಯವಸ್ಥೆ ಮಾಡಿದ ಸ್ಥಳೀಯ ಶಾಸಕರಿಗೆ ಹಾಗೂ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳಿಗೆ,ಸಿಬ್ಬಂದಿಗಳಿಗೆ ರೈತ ಸಂಘಟನೆಯಿಂದ ಹಾಗೂ ಗ್ರಾಮಸ್ಥರಿಂದ ಅಭಿನಂದನೆ ಸಲ್ಲಿಸುತ್ತಿದ್ದೇನೆ.
ಈ ಬಸ್ ಬೆಳಿಗ್ಗೆ ಕೊಳ್ಳೇಗಾಲ ಮಾರ್ಗದಿಂದ, ಹನೂರು,ಅಜ್ಜಿಪುರ,ಕುರುಬರ ದೊಡ್ಡಿ,ಗಂಗನ್ ದೊಡ್ಡಿ,ಚಿಕ್ಕುಡಿ,ಮಂಚಾಪುರ ಹಾಗೂ ರಾಮಪುರ ಮಾರ್ಗವಾಗಿ ಸಂಚರಿಸುತ್ತದೆ.
ಸಂಜೆ ಕೊಳ್ಳೇಗಾಲದಿಂದ ರಾಮಪುರ,ಮಂಚಾಪುರ, ಗಂಗನ್ದೊಡ್ಡಿ ಮಾರ್ಗವಾಗಿ ಸಂಚರಿಸುತ್ತದೆ.
ಇದರಿಂದ ಶಾಲಾ ಮಕ್ಕಳಿಗೆ ಹಾಗೂ ಗ್ರಾಮಸ್ಥರಿಗೆ ಅನುಕೂಲವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಚಾಲಕ ನಾರಾಯಣ್, ನಿರ್ವಾಹಕ ಪರಮೇಶ್,ಹನೂರು ಘಟಕದ ಗೌರವಧ್ಯಕ್ಷ ರಾಜೇಂದ್ರ,ಉಪಾಧ್ಯಕ್ಷ ಪಳನಿಸ್ವಾಮಿ, ಹಾಗೂ ವಿವಿಧ ಗ್ರಾಮದ ಪದಾಧಿಕಾರಿಗಳು ರೈತ ಮುಖಂಡರು ಹಾಗೂ ಗ್ರಾಮಸ್ಥರು ಹಾಜರಿದ್ದರು.
ವರದಿ:ಉಸ್ಮಾನ್ ಖಾನ್