ನಂಜನಗೂಡು:ಫ.ಗು.ಹಳಕಟ್ಟಿನಗರ ವೈ.ಕೆ.ಎಲ್ ಸ್ವಾಮಿ ಲೇಔಟ್ ನಲ್ಲಿ ನಡೆಯುತ್ತಿರುವ ಪ್ರವಚನ ಕಾಯ೯ಕ್ರಮದಲ್ಲಿ ನರಸಿಂಹರಾಜಪುರದ ಪೂಜ್ಯ ಶ್ರೀ ಬಸವಯೋಗಿಪ್ರಭುಗಳು ಪಾದೋದಕ ಮತ್ತು ಪ್ರಸಾದದ ಬಗ್ಗೆ ಅನುಭಾವ ನೀಡಿದರು.ಕರುಣೆ ವಿನಯ ಸಮತೆಯನ್ನು ಯಾರು ಅಳವಡಿಸಿಕೊಂಡಿರುತ್ತಾರೆಯೋ ಅವರಿಗೆ ಗುರು ಪಾದೋದಕ ಲಿಂಗಪಾದೋದಕ ಜಂಗಮ ಪಾದೋದಕ ದೊರಕುತ್ತದೆ ಇದರಿಂದ ಸಂಚಿತ ಕಮ೯ ಆಗಾಮಿ ಕಮ೯ ಪ್ರಾರಬ್ದ ಕಮ೯ಗಳು ನಾಶವಾಗುತ್ತವೆ.ಈ ಪಾದೋದಕಕ್ಕೆ ಯಾವುದೇ ಕ್ಷೇತ್ರದ ತೀಥ೯ ಸಮ ಬರುವುದಿಲ್ಲ,
ಪ್ರಸಾದವೆಂದರೆ ಕೇವಲ ಹೊಟ್ಟೆಗಾಗಿ ಮಾಡುವುದಲ್ಲ. ಜ್ಞಾನವನ್ನು ಪ್ರಸಾದವನ್ನಾಗಿ ಸ್ವೀಕರಿಸಬೇಕು.ಕಷ್ಟ ಸುಖ ಸೋಲು ಗೆಲುವು ನಿಂದನೆ ವಂದನೆ ಎಲ್ಲವನ್ನೂ ನಿರಾಕಾರ ಪರವಸ್ತುವಿನ ಪ್ರಸಾದವೆಂದು ತಿಳಿದು ತನು ಮನ ಭಾವ ಶುದ್ದದಿಂದ ತೆಗೆದುಕೊಳ್ಳಬೇಕು.ಈ ದೇಹವು ಕೂಡಲ ಸಂಗಮದೇವರನ್ನೊಲಿಸಲು ಬಂದ ಪ್ರಸಾದ ಕಾಯವೆನ್ನುತ್ತಾರೆ ಗುರುಬಸವಣ್ಣನವರು ಆದ್ದರಿಂದ ಕಾಯವನ್ನು ಮಧ್ಯಪಾನ ಧೂಮಪಾನಕ್ಕೆ ಸಿಕ್ಕಿಸಿ ಕಾಯವನ್ನು ಕೆಡಿಸಿಕೊಳ್ಳಬಾರದು.
ಅಂಗ ಚಪಲಕ್ಕೆ ಸಿಕ್ಕ ಸಿಕ್ಕಲ್ಲಿ ತಿನ್ನಬಾರದು ಸಾತ್ವಿಕ ಆಹಾರ ಮತ್ತು ಮಿತಪ್ರಸಾದಿಯಾಗಿರಬೇಕು ದೇವರ ಹೆಸರಿನಲ್ಲಿ ಹೋಮ ಯಾಗದ ಹೆಸರಿನಲ್ಲಿ ಪ್ರಸಾದ ವ್ಯಥ೯ವಾಗಬಾರದು ಪ್ರಸಾದ ತಯಾರು ಮಾಡುವವರು ಮತ್ತು ಸೇವಿಸುವವರ ಮನ ಮತ್ತು ಚಿತ್ತ ಟಿ.ವಿ ಮತ್ತು ಮೊಬೈಲ್ ನತ್ತ ಇರಬಾರದು ಶಿವಭಾವದಿಂದ ಇರಬೇಕು ಕೆಟ್ಟ ವಿಚಾರಗಳಿರಬಾರದು.
ಪ್ರಸಾದವನ್ನು ಹೆಚ್ಚು ನೀಡಿಸಿಕೊಂಡು ಚೆಲ್ಲಬಾರದು ಎಂದು ಅನುಭಾವ ನೀಡಿದರು ಎಂದಿನಂತೆ ಆಯರಳ್ಳಿ ಪ್ರಭುಸ್ವಾಮಿ ದಂಪತಿಗಳು ಬಸವ ಪೂಜೆ ನೇರವೇರಿಸಿದರು ಬಸವ ಭಕ್ತರಿಂದ ಬಸವ ಧ್ವಜಾರೋಹಣ ನಡೆಯಿತು ಬಸವ ಮಾಸ ಸಮಿತಿಯವರು ವಚನ ಶಾಲೆ ಮಕ್ಕಳು ಮತ್ತು ಅಕ್ಕಮಹಾದೇವಿ ವಿದ್ಯಾಥಿ೯ ನಿಲಯದವರು ವಚನಗಳನ್ನು ಹೇಳಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.