ವಡಗೇರಾ:ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಾಸುದೇವ ಮೇಟಿ ಬಣ ವತಿಯಿಂದ ಬರಗಾಲದ ಪರಿಹಾರ ಹಣವನ್ನು ಆದಷ್ಟು ಬೇಗನೆ ಜಮಾವಣೆ ಮಾಡಬೇಕು ಎಂದು ಮನವಿ ಸಲ್ಲಿಸಿ ನಂತರ ಮಾತನಾಡಿದ,ವಡಗೇರಾ ತಾಲೂಕ ಅಧ್ಯಕ್ಷರಾದ ವಿಧ್ಯಾಧರ ಜಾಕಾ ಬರಗಾಲ ಘೋಷಣೆಯಾಗಿ ಸುಮಾರು ದಿನಗಳು ಕಳೆದರೂ ಕೂಡಾ,ರೈತರಿಗೆ ಬರ ಪರಿಹಾರದ ಹಣ ಜಮಾ ಆಗಿರುವುದಿಲ್ಲ.ಈಗಾಗಲೇ ರೈತರು ಬರಗಾಲದಿಂದ ಕಂಗಾಲಾಗಿದ್ದಾರೆ ಆದರೆ ಸರ್ಕಾರ ಮಾತ್ರ ಇತ್ತ ಕಡೆ ಗಮನ ಹರಿಸದೆ ನಿರ್ಲಕ್ಷಿಸುತ್ತಿದೆ ಮಳೆ ಬಾರದೆ ಬೆಳೆಗಳು ಸಂಪೂರ್ಣ ಹಾಳಾಗಿದ್ದು,ರೈತರು ಸಾಲದ ಸುಳಿಯಿಂದ ಒದ್ದಾಡುತ್ತಿದ್ದಾರೆ.ಕೆಲವು ಕಡೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಕೂಡಾ ಹೆಚ್ಚಾಗುತ್ತಿವೆ ಈಗಲಾದರೂ ಸರಕಾರ ಎಚ್ಚೆತ್ತುಕೊಂಡು ರೈತರ ಸಮಸೆಯನ್ನು ಅರಿತು ಪ್ರತಿ ಎಕರೆಗೆ 25,000 ಬೆಳೆ ಪರಿಹಾರ ನೀಡಬೇಕು. ಈಗಾಗಲೆ ತುಂಬಾ ವಿಳಂಬವಾಗಿದ್ದು ಕೂಡಲೇ ರೈತರಿಗೆ ಬೆಳೆ ಪರಿಹಾರದ ಹಣವನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರು ವಿದ್ಯಾಧರ ಜಾಕ,ಶರಣು ಜಡಿ ಗೌರವಾಧ್ಯಕ್ಷರು,ಸತೀಶ್ ನಾಟೇಕರ್,ಬೀರಣ್ಣ ಜಡಿ,ವೀರೇಶ್ ಗೌಡ,ರಾಜು ಹಿರೇಮಠ್,ಮಲ್ಲು ನಾಟೇಕರ್,ವೆಂಕಪ್ಪ ಇಟ್ಟಿಗಿ,ಅಯ್ಯಳಪ ಜಡಿ,ಅಳ್ಳೆಪ್ಪ ತೇಜಾರ್ ಉಪಸ್ಥಿತರಿದ್ದರು.
ವರದಿ:ಶಿವರಾಜ್ ಸಾಹುಕಾರ್,ವಡಗೇರಾ