ಕಲ್ಬುರ್ಗಿ ಸುದ್ದಿ:ಶ್ರೀರಾಮ ಸೇನಾ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾದ ಹೋರಾಟ 15/1/2024ರಂದು 14ನೇ ದಿನಕ್ಕೆ ಕಾಲಿಟ್ಟಿದ್ದು ಹಾಗೂ ಆಳಂದ ತಾಲೂಕಿನ ಹೀರೊಳ್ಳಿ ಗ್ರಾಮ ಪಂಚಾಯತಿಯಲ್ಲಿ ಕರ್ತವ್ಯಲೋಪವೆಸಗಿದ ಪಿಡಿಓ ಅವರನ್ನು ಅಮಾನತ್ತುಗೊಳಿಸುವಂತೆ ಮತ್ತು ಆಂದೋಲಾ ಹಾಗೂ ಆಲೂರು ಮತ್ತು ಹಿಪ್ಪರಗಾ (ಎಸ್ ಎನ್) ಮತ್ತು ಸಾಥಖೇಡ ಗ್ರಾಮ ಪಂಚಾಯತಿಗಳಲ್ಲಿ ಅವ್ಯವಹಾರ ನಡೆಸಿದ ಭ್ರಷ್ಟ ಪಿಡಿಓ ಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದು ಆಗ್ರಹಿಸಿ ಜಿಲ್ಲಾ ಪಂಚಾಯತ ಕಾರ್ಯಾಲಯದ ಎದುರುಗಡೆ ಹಮ್ಮಿಕೊಳ್ಳಲಾದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವು ನಿರಂತರವಾಗಿ ನಡೆದಿದ್ದು ಇದಕ್ಕೆ ಸಂಬಂಧಪಟ್ಟ ಮೇಲಧಿಕಾರಿಗಳು ಈ ಕಡೆ ಇಣುಕಿ ಕೂಡಾ ನೋಡಿರುವುದಿಲ್ಲವೆಂದರೆ ಏನರ್ಥ ಹಾಗೂ ಇದಕ್ಕೆ ಸಂಬಂಧಿತ ಮೇಲಧಿಕಾರಿಗಳು ಕೂಡ ಭ್ರಷ್ಟಾಚಾರವೆಸಗಿದ ಪಂಚಾಯತಿಯ ಪಿಡಿಓಗಳ ಬೆಂಬಲಕ್ಕೆ ನಿಂತಿದ್ದಾರೆಯೆ?ಅಥವಾ ಆಯಾ ತಾಲೂಕಿನ ಎಂಎಲ್ಎ ಗಳು ಅವರನ್ನು ರಕ್ಷಿಸುತ್ತಿದ್ದಾರೆಯೆ!ಎಂಬ ಗುಮಾನಿ ಸಾರ್ವಜನಿಕ ವಲಯದಲ್ಲಿ ಜನಸಾಮಾನ್ಯರು ಮಾತನಾಡುತ್ತಿದ್ದಾರೆ ಆದರೆ ಹೋರಾಟಗಾರರ ಮನವಿಗೆ ಕ್ಯಾರೆ ಅನ್ನದ ಮೇಲಧಿಕಾರಿಗಳು ಹಾಗೂ ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಪ್ರಿಯಾಂಕ ಖರ್ಗೆ ಅವರು ! ಏನು ಕ್ರಮ ತೆಗೆದುಕೊಳ್ಳುತ್ತಾರೊ ಕಾದು ನೋಡಬೇಕಾಗಿದೆ ಹಾಗೂ ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ ಸಂಭಂದ ಪಟ್ಟ ಅಧಿಕಾರಿಗಳು ಉಚ್ಚಾಟನೆ ಆಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಲಕ್ಷ ಲಕ್ಷ ಹಣವನ್ನು ಕಾಮಗಾರಿ ಕೈಗೊಳ್ಳುದೆ ನುಂಗಿ ನೀರು ಕುಡಿದು ಜನರ ತೆರಿಗೆ ದುಡ್ಡನ್ನು ಲೂಟಿ ಮಾಡಿ ಕಾನೂನು ನಿಯಮಗಳನ್ನು ಗಾಳಿಗೆ ತೂರಿದಂತಹ ಭ್ರಷ್ಟ ನಯವಂಚಕ ಹಗಲು ದರೋಡೆಕೋರರಾದ ಪಿಡಿಓ ಗಳನ್ನು ಶ್ರೀ ಕೃಷ್ಣನ ಜನ್ಮಸ್ಥಾನದ ಸೆರೆಮನೆಗೆ ಕಳುಹಿಸದೆ ಈ ಹೋರಾಟ ಕೈ ಬಿಡುವುದಿಲ್ಲ ಎಂದು ಮುಖಂಡರಾದ ಶರಣಪ್ಪ ರೆಡ್ಡಿ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಹೇಳಿಕೆಯನ್ನು ನೀಡಿದ್ದಾರೆ.
ವರದಿ:ಆನಂದಕುಮಾರ್ ಬಡಿಗೇರ