ಮೈಸೂರು:ಮಾಜಿ ಪಾಲಿಕೆ ಸದಸ್ಯ ದಿ. ಎನ್,ಸುನೀಲ್ ಕುಮಾರ್ ರವರ ಜನ್ಮದಿನದ ಪ್ರಯುಕ್ತ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ನಾನು ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದು ಬಂದ ಕ್ಷಣವೇ ರಾಮಾನುಜ ಮುಖ್ಯ ರಸ್ತೆಯ ಯಾವುದಾದರೂ ಮಾರ್ಗವೊಂದಕ್ಕೆ ಎನ್.ಸುನೀಲ್ ಕುಮಾರ್ ರವರ ಹೆಸರನ್ನು ನಾಮಕರಣ ಮಾಡಲು ಶ್ರಮಿಸುತ್ತೇನೆ ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಭರವಸೆ ನೀಡಿದರು.
ಸುನೀಲ್ ಕುಮಾರ್ ರವರು ನಮ್ಮನ್ನು ಅಗಲಿ ಮೂರು ವರ್ಷಗಳು ಕಳೆದಿದೆ ಸುನೀಲ್ ಕುಮಾರ್ ಅವರು ವೀರಶೈವ ಲಿಂಗಾಯತ ಸಮಾಜದ ಯುವ ನಾಯಕರಾಗಿದ್ದರು ಮತ್ತು ಕಾಂಗ್ರೆಸ್ ಪಕ್ಷದ ಕೃಷ್ಣರಾಜ ಕ್ಷೇತ್ರದ ಪ್ರಭಾವಿ ಮುಖಂಡರಾಗಿ ಗುರುತಿಸಿ ಕೊಂಡಿದ್ದರು 2013ರ ಪಾಲಿಕೆ ಚುನಾವಣೆಯಲ್ಲಿ (ರಾಮಾನುಜ ರಸ್ತೆ) ಇಂದಿನ 51ನೆ ಅಗ್ರಹಾರ ವಾರ್ಡಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ಅಗ್ರಹಾರ ವಾರ್ಡಿನ ಸರ್ವತೋಮುಖ ಅಭಿವೃದ್ಧಿಗೆ ಅವರು ಶ್ರಮಿಸಿದ್ದರು ಅವರ ನಿಧನದ ನಂತರ ನನ್ನ ನೇತೃತ್ವದಲ್ಲಿ ಸಮುದಾಯದ ಯುವಕರ ಜೊತೆ ಆಗಿನ ಮೈಸೂರು ಮಹಾ ಪೌರರಾಗಿದ್ದ ಸುನಂದಾ ಪಾಲನೇತ್ರ ಅವರಿಗೆ ಸುನೀಲ್ ಕುಮಾರ್ ರವರ ಹೆಸರನ್ನು ರಾಮಾನುಜ ಮುಖ್ಯ ರಸ್ತೆಯ ಮಾರ್ಗವೊಂದಕ್ಕೆ ನಾಮಕರಣ ಮಾಡುವಂತೆ ಮನವಿ ಮಾಡಿದ್ದೆವು ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಇದರಿಂದ ಅವರ ಅಭಿಮಾನಿಗಳಿಗೆ ತೀವ್ರ ನೋವುಂಟಾಗಿದೆ ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಸಧ್ಯದಲ್ಲೇ ಮೈಸೂರು ಮಹಾ ನಗರ ಪಾಲಿಕೆ ಚುನಾವಣೆ ಎದುರಾಗಲಿದ್ದು ಅಗ್ರಹಾರ ವಾರ್ಡಿನ ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಆಗಿರುವ ನಾನು ಪಾಲಿಕೆಯ ಚುನಾವಣೆಯಲ್ಲಿ ಆಯ್ಕೆಯಾದಲ್ಲಿ ದಿ.ಸುನೀಲ್ ಕುಮಾರ್ ರವರ ಹೆಸರನ್ನು ನಾಮಕರಣ ಮಾಡುವುದಾಗಿ ತೇಜಸ್ವಿ ತಿಳಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.