ರಬಕವಿ-ಬನಹಟ್ಟಿ:ಬಿಜೆಪಿ ರಾಜ್ಯ ಉಪಾಧ್ಯಕ್ಷ,ಮಾಜಿ ಸಚಿವ ಮುರುಗೇಶ ನಿರಾಣಿ ಯವರ ತಾಯಿ ಶ್ರೀಮತಿ ಸುಶೀಲಾಬಾಯಿ ನಿರಾಣಿ (78) ಸೋಮವಾರ ದಿನಾಂಕ:15.01.24 ರಂದು ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸುಶೀಲಾಬಾಯಿ ಚಿಕಿತ್ಸೆ ಪಡೆಯುತ್ತಿದ್ದರು.ಸೋಮವಾರ ಸಂಜೆ ಚಿಕಿತ್ಸೆ ಪಲಿಸದೆ ನಿಧನರಾದರು.ಕೃಷಿ ಪ್ರಧಾನ ಕುಟುಂಬದ ಮುಖ್ಯಸ್ಥೆಯಾಗಿದ್ದ ಸುಶೀಲಾ ಬಾಯಿ ಶಾಲೆ, ಕಾಲೇಜುಗಳಿಗೆ ಭೂಮಿ ದಾನ ಮಾಡಿದ್ದರು,ಪತಿ ರುದ್ರಪ್ಪ ನಿರಾಣಿ,ಮಾಜಿ ಸಚಿವ ಮುರುಗೇಶ ನಿರಾಣಿ, ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ಉದ್ಯಮಿ ಸಂಗಮೇಶ್ ನಿರಾಣಿ ಸೇರಿದಂತೆ ಐವರು ಪುತ್ರರು,ಇಬ್ಬರು ಪುತ್ರಿಯರು,ಸೊಸೆಯಂದಿರು,13 ಮೊಮ್ಮಕ್ಕಳು ಹಾಗೂ ಅಪಾರ ಬಳಗವನ್ನು ಅಗಲಿದ್ದಾರೆ.ಮೃತರ ಅಂತ್ಯಕ್ರಿಯೆ ಬೀಳಗಿ ತಾಲೂಕಿನ ಸ್ವಗ್ರಾಮ ಬಸವಹಂಚಿನಾಳ ದಲ್ಲಿ ಮಂಗಳವಾರ ಮಧ್ಯಾಹ್ನ 1.00ಗಂಟೆಗೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ವರದಿ:ಆನಂದ ಮ. ಹೂಗಾರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.