ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಪಿಡಿಒ ಮತ್ತು ಇಒ ನಡೆ ಖಂಡಿಸಿ 27 ಜನ ಗ್ರಾಮ ಪಂಚಾಯತಿ ಸದಸ್ಯರಿಂದ ತಾಲೂಕ ಪಂಚಾಯತ ಕಚೇರಿಯಲ್ಲಿ ಪ್ರತಿಭಟನೆ

ವಡಗೇರಾ:ತಾಲೂಕಿನ ವಡಗೇರಾ ಗ್ರಾಮ ಪಂಚಾಯತ್ ನಲ್ಲಿ 27 ಗ್ರಾಮ ಪಂಚಾಯತ್ ಸದಸ್ಯರು ಇದ್ದಾರೆ ಕಳೆದ ಆರು ತಿಂಗಳಿನಿಂದ ವಡಗೇರಾ ತಾಲೂಕಿನಲ್ಲಿ ಪಿಡಿಒ ಸರಿಯಾಗಿ ಕೆಲಸ ಮಾಡುತ್ತಿಲ್ಲ ವಡಗೇರಾ ತಾಲೂಕಿನ ಗ್ರಾಮ ಪಂಚಾಯತಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿಗಳಿಗೆ ಹಾಗೂ ಗ್ರಾಮ ಪಂಚಾಯತಿ ಸದಸ್ಯರುಗಳೊಂದಿಗೆ ನಿರ್ಲಕ್ಷತನ ಮತ್ತು ಅಸಡ್ಡೆತನದಿಂದ ನಡೆದುಕೊಳ್ಳುತ್ತಾ ತಮ್ಮಗಳ ದುರ್ನಡತೆಯನ್ನು ತೋರುತ್ತಿದ್ದು ಹಾಗೂ ಗ್ರಾಮ ಪಂಚಾಯತಿ ಸದಸ್ಯರಿಗೆ ಗೌರವ ಕೊಡದೆ ಸರಿಯಾದ ರೀತಿಯಲ್ಲಿ ಮಾಹಿತಿಯನ್ನು ಕೊಡದೆ ತಮಗೆ ಇಷ್ಟ ಬಂದಂತೆ ನಡೆದುಕೊಳ್ಳುತ್ತಿದ್ದಾರೆ.
ಗ್ರಾಮೀಣ ಪ್ರದೇಶಗಳು ಅಭಿವೃದ್ಧಿ ಆಗಬೇಕು ಎಂಬ ಮಹಾದಾಸೆಯಿಂದ ಸರ್ಕಾರ ಕೋಟಿ-ಕೋಟಿ ಹಣವನ್ನು ಗ್ರಾ.ಪಂ.ಗಳಿಗೆ ನೀಡುತ್ತಿದೆ.ಪಂಚಾಯತ್ ಮಟ್ಟದಲ್ಲಿ ಅಭಿವೃದ್ಧಿ ಆಗಬೇಕು ಎಂಬ ಕಾರಣಕ್ಕಾಗಿ ಪಂಚಾಯತ್ ‌ಅಭಿವೃದ್ಧಿ ನೇಮಕ ಮಾಡಲಾಗಿದೆ. ನೇಮಕಗೊಂಡ ಪಿಡಿಒಗಳು ನಿತ್ಯ ಗ್ರಾಮ ಪಂಚಾಯತ್ ಗೆ ಬರಬೇಕು ಪಂಚಾಯತ್ ಮಟ್ಟದಲ್ಲಿನ‌ ಸದಸ್ಯರೊಂದಿಗೆ ಸೇರಿ ಅಭಿವೃದ್ಧಿ ಕೆಲಸಗಳು ‌ಮಾಡಬೇಕು ಗ್ರಾಮ ಪಂಚಾಯತ್ ಗೆ ಬಂದು ಪಿಡಿಒ ‌ಗ್ರಾಮ ಪಂಚಾಯತ್ ‌ನಲ್ಲಿ ಒಂದು ಅಥವಾ ಎರಡು ಗಂಟೆಗಳ ಅವಧಿ ಮಾತ್ರ ಇದ್ದು ಮತ್ತೆ ಹೋಗುತ್ತಿದ್ದಾರೆ.
ಗ್ರಾಮ ಪಂಚಾಯತಿಯಲ್ಲಿ ಸಾರ್ವಜನಿಕರ ಕುಂದು ಕೊರತೆಯನ್ನು ನೀಗಿಸಲು ಮತ್ತು ಸಾರ್ವಜನಿಕರ ಕೆಲಸಗಳಿಗೆ ತುಂಬಾ ತೊಂದರೆ ಆಗುತ್ತಿದೆ. ಸಾರ್ವಜನಿಕರು ತಮ್ಮ ಕುಂದು ಕೊರತೆಗಳನ್ನು ಗ್ರಾಮ ಪಂಚಾಯತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಸದಸ್ಯರುಗಳ ಹತ್ತಿರ ತೋಡಿಕೊಳ್ಳುತ್ತಿದ್ದಾರೆ. ಪಿಡಿಒಗಳ ನಡೆ ವಿರುದ್ಧ ತಾಲೂಕಾ ಮಟ್ಟದ ಅಧಿಕಾರಿಗಳಿಗೆ ದೂರು ನೀಡಿದರೂ ಉಪಯೋಗವಾಗುತ್ತಿಲ್ಲವೆಂದು ಗ್ರಾಮ ಪಂಚಾಯತ್ ಸದಸ್ಯರು ‌ಆರೋಪಿಸಿದರು‌.

ಸರ್ಕಾರದ ‌ಯೋಜನೆಗಳನ್ನು ಗ್ರಾಮ ಪಂಚಾಯತ್ ಸದಸ್ಯರಿಗೆ ಪಿಡಿಒಗಳು ತಿಳಿಸುವುದೇ ಇಲ್ಲ:
ಗ್ರಾಮ ಮಟ್ಟದಲ್ಲಿ ಆಯ್ಕೆಗೊಂಡ ಗ್ರಾಮ ಪಂಚಾಯತ್ ಸದಸ್ಯರಿಗೆ ಪಿಡಿಒಗಳು ಸರ್ಕಾರದ ಯೋಜನೆಗಳು ತಿಳಿಸಬೇಕು. ‌
ಗ್ರಾಮ ಪಂಚಾಯತಿಯಲ್ಲಿ ಕಾಲ ಕಾಲಕ್ಕೆ ಬರುವ 15ನೇ ಹಣಕಾಸು ಯೋಜನೆ,ನರೇಗಾ ಯೋಜನೆ, ಕರವಸೂಲಿ,ಆದಾಯ,ನೀರು ಮತ್ತು ನೈರ್ಮಲ್ಯಯೋಜನೆ,ಅಂಗವಿಕಲ ಅನುದಾನ, ಜೆ.ಜೆ.ಎಂ ಯೋಜನೆ,ಎಸ್.ಎಲ್.ಎಮ್.ಡಬ್ಲ್ಯೂ, ವಾಹನ ಅನುದಾನ,ಶಾಸನ ಬದ್ಧ ಅನುದಾನ, ಸದಸ್ಯರ ಗೌರವಧನ,ಸ್ವಚ್ಛ ಭಾರತ ಅನುದಾನ ಹಾಗೂ ಇಂತಹ ಸರ್ಕಾರದ ಆದೇಶ ಮತ್ತು ಸುತ್ತೋಲೆಯ ಮಿಷನ್ ಪ್ರಕಾರ ಇನ್ನೂ ಹಲವಾರು ಅನುದಾನಗಳು ಗ್ರಾಮ ಪಂಚಾಯತಿಗೆ ಬರುತ್ತಿದ್ದು,ಇವುಗಳ ಬಗ್ಗೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸಭೆಯಲ್ಲಿ ಸರಿಯಾದ ರೀತಿಯಲ್ಲಿ ಗ್ರಾಮ ಪಂಚಾಯತಿ ಸದಸ್ಯರಿಗೆ ಮಾಹಿತಿ ನೀಡದೆ ಮತ್ತು ಗ್ರಾಮ ಪಂಚಾಯತಿಯಲ್ಲಿ ಯಾವುದರ ಬಗ್ಗೆಯೂ ಸರಿಯಾದ ರೀತಿಯಲ್ಲಿ ನಮಗೆ ಮಾಹಿತಿ ಕೊಡದೆ ಮತ್ತು ನಾವುಗಳು ಕೇಳಿದರೆ ಹಾರಿಕೆಯ ಉತ್ತರ ಕೊಟ್ಟು ಹೋಗುತ್ತಿದ್ದಾರೆ.
ನಮಗೆ ಮಾಹಿತಿ ‌ಇಲ್ಲದೆ ಇರುವುದರಿಂದ ಜನರು ಮನೆಗಳಿಗೆ ‌ಬಂದು ನಮಗೆ ಚೀಮಾರಿ ಹಾಕಿ ಹೋಗುತ್ತಿದ್ದಾರೆ ಈ ಬಗ್ಗೆ ಇಓ ಮತ್ತು ಸಿಇಓಗೆ ದೂರು ನೀಡಿದರೂ ಅಧಿಕಾರಿಗಳು ಪಿಡಿಒ ವಿರುದ್ಧ ಕ್ರಮಕೈಗೊಳ್ಳುತ್ತಿಲ್ಲವೆಂದು ಗ್ರಾಮ ಪಂಚಾಯತ್ ನ ಸದಸ್ಯರು ಆರೋಪಿಸಿದರು.

ನಾವು ಗ್ರಾಮ ಪಂಚಾಯತ್ ಸದಸ್ಯರು ಆಗಿದ್ದೇ ತಪ್ಪಾಗಿದೆ:
ಜನರು ಮತ ನೀಡಿ ನಮಗೆ ಗ್ರಾಮ ಪಂಚಾಯತ್ ಸದಸ್ಯರು ಮಾಡಿದ್ದಾರೆ,ಗ್ರಾಮದಲ್ಲಿ ಚರಂಡಿ ತುಂಬಿ ಹೋಗಿವೆ,ಸೊಳ್ಳೆಗಳ ಕಾಟ ಹೆಚ್ಚಾಗಿದೆ,ರಸ್ತೆಯಲ್ಲಿ ‌ಚರಂಡಿ ನೀರು ಹರಿಯುತ್ತಿದೆ ಈ ಬಗ್ಗೆ ಗ್ರಾಮ ಪಂಚಾಯತ್ ಗೆ ಹೋಗಿ ಹೇಳಿ ಕೆಲಸ ಮಾಡಿಸಬೇಕು ಅಂದ್ರೆ ಪಂಚಾಯತ್ ನಲ್ಲಿ ಪಿಡಿಒಗಳೇ ಸಿಗುವುದಿಲ್ಲ. ಜನರು ಸೊಸಿಯಲ್ ಮಿಡಿಯಾಗಳಲ್ಲಿ ಹಾಗೂ ಮನೆಗೆ ಬಂದು ಬೈದು ಹೋಗುತ್ತಾರೆ.ನೀನು ಮೆಂಬರ್ ಆಗಿ ಉಪಯೋಗ ಇಲ್ಲ ಕೆಲಸ ಮಾಡಲು ಆಗಲ್ಲ ಅಂದ್ರೆ ಮೇಬರ್ ಯಾಕೆ ಆಗಿದೀಯಾ?ಅಂತ ಮನಬಂದಂತೆ ಬೈಯಲು ಶುರು ಮಾಡುತ್ತಿದ್ದಾರೆ ಆಗ ನಾವು ಮೆಂಬರ್ ಆಗಿದ್ದು ಏಕೆ ಅನ್ನಿಸುತ್ತಿದೆ ಎಂದು ಸದಸ್ಯರು ಪ್ರತಿಭಟನೆಯಲ್ಲಿ ತಮ್ಮ ನೋವು ಹೇಳಿಕೊಂಡರು.

ವರದಿ:ಶಿವರಾಜ್ ಸಾಹುಕಾರ್ ವಡಗೇರಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ