ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶ್ರೀ ಗಳ 21ನೇ ವರ್ಷದ ಗ್ರಾಮ ದರ್ಶನ ಕಾರ್ಯಕ್ರಮ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ದಿಡಗೂರು ಗ್ರಾಮದಲ್ಲಿ ಶ್ರೀ ಕ್ಷೇತ್ರ ಐರಣಿ ಹೊಳೆ ಮಠಾಧೀಶ್ವರರಾದ ಪರಮಪೂಜ್ಯ ಪರಮಹಂಸ ಶ್ರೀ ಶ್ರೀ ಬಸವರಾಜ ದೇಶಿ ಕೇಂದ್ರ ಮಹಾಸ್ವಾಮೀಜಿಯವರ 21ನೇ ವರ್ಷದ ಗ್ರಾಮ ದರ್ಶನ ಕಾರ್ಯಕ್ರಮ ನೆರವೇರಿತು.
ಪ್ರತಿ ವರ್ಷದಂತೆ ದಿಡಗೂರಿನ ಗ್ರಾಮದಲ್ಲಿ ದಿಡಗೂರ ಗ್ರಾಮದಲ್ಲಿ ಪರಮ ಪೂಜ್ಯರ ಗ್ರಾಮ ದರ್ಶನ ಕಾರ್ಯಕ್ರಮವು ದಿನಾಂಕ 19,1,2024 ಶುಕ್ರವಾರ ಬೆಳಗ್ಗೆ 11 ಗಂಟೆಗೆ ಶ್ರೀ ಆಂಜನೇಯ ಸಮುದಾಯ ಭವನದಲ್ಲಿ ನೆರವೇರಿತು.
ಈ ಸಂದರ್ಭದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು
ಸಮಾಜದಲ್ಲಿ ಭಕ್ತರು ಹಣವಿದ್ದಾಗ ದಾನ ಮಾಡಬೇಕು ಮೈಯಲ್ಲಿ ಶಕ್ತಿ ಇದ್ದಾಗ ಸೇವೆ ಮಾಡಬೇಕು
ಎಂದು ಹೇಳಿದರು.
ಮನುಷ್ಯನಾಗಿ ಜನಿಸಿದ ಮೇಲೆ ನಾವುಗಳು ಸಮಾಜದಲ್ಲಿ ಶಾಂತಿ,ಸಂಸ್ಕೃತಿ ಮತ್ತು ಧರ್ಮಪರ ಕಾರ್ಯಗಳನ್ನು ಮಾಡಬೇಕು ಮನುಷ್ಯ ಮೊದಲು ಮನುಷ್ಯನನ್ನು ಗೌರವಿಸುವುದನ್ನು ಕಲಿಯಬೇಕು ಸಮಾಜದಲ್ಲಿ ಎಲ್ಲರೂ ಒಂದೇ ಇಲ್ಲಿ ಜಾತಿ ಜಾತಿಗಳ ಮಧ್ಯೆ ದ್ವೇಷ ಅಸೂಯೆ ಗಳನ್ನು ನಮ್ಮಲ್ಲಿ ಬಿತ್ತುವ ಕೆಲಸವನ್ನು ಮಾಡುತ್ತಾರೆ,
ಆದ್ದರಿಂದ ಇಲ್ಲಿ ಮನುಷ್ಯ ಕುಲವೇ ಶ್ರೇಷ್ಠ ಆದ್ದರಿಂದ ನಾವುಗಳು ಎಲ್ಲದನ್ನೂ ಯೋಚಿಸಿ ಸರಿಯಾದ ಮಾರ್ಗದಲ್ಲಿ ನಡೆಯಬೇಕು ಹಾಗೆ ನಡೆದರೆ ನಮ್ಮ ಸಮಾಜವು ಶಾಂತಿ,ಸಹಬಾಳ್ವೆ ಸಂಸ್ಕೃತಿಯಿಂದ ಮುಂದಿನ ಯುವ ಜನತೆ ಶಾಂತಿ ನೆಮ್ಮದಿಯಿಂದ ಬಾಳುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಊರಿನ ಮುಖಂಡರು ಅಣ್ಣಪ್ಪ ಸ್ವಾಮೀಜಿ ಹನುಮಂತಪ್ಪ ಕೆ ಪಾಲಾಕ್ಷಪ್ಪ ಗ್ರಾಮ ಪಂಚಾಯಿತಿ ಸದಸ್ಯರು ಸಹಕಾರಿ ಬ್ಯಾಂಕುಗಳ ನಿರ್ದೇಶಕರು ಎಸ್ಎನ್ ಸಿದ್ದೇಶ್ ಓಬಿ ಹನುಮಂತಪ್ಪ ಸಿ ಟಿ ಹನುಮಂತಪ್ಪ ಎಜಿ ಪ್ರಕಾಶ್ ಇನ್ನು ಹಲವಾರು ಮುಖಂಡರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

ವರದಿ-ಪ್ರಭಾಕರ್ ಡಿ ಎಂ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ