ವಿಜಯಪುರ/ತಾಳಿಕೋಟೆ:
ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.)ಪರಿವರ್ತನಾವಾದ ರಾಜ್ಯ ಸಮಿತಿ ಬೆಂಗಳೂರು ಮತ್ತು ಜಿಲ್ಲಾ ಸಮಿತಿ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ಜಾಗೃತಿ ಅಭಿಯಾನ
ಮತ್ತು ತಾಳಿಕೋಟಿ ತಾಲೂಕ ಸಮಿತಿ ರಚನೆ ಮಾಡಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಮಹೇಶ ಚಲವಾದಿ ವಹಿಸಿ ಮಾತನಾಡಿದರು ಈ ಸಮಿತಿಯು ಎಲ್ಲಾ ಸಮಾಜದ ಜನಾಂಗದವರಿಗೆ ಸಂಭಂದಿಸಿದೆ ಮತ್ತು ಯಾರಿಗಾದರೂ ಅನ್ಯಾಯವಾದರೆ ಎಲ್ಲರ ಕಷ್ಟಕ್ಕೂ ಬಂದು ನಿಲ್ಲುತ್ತೇವೆ ಎಂದು ಹೇಳಿದರು. ಕಂಠೀರವ ಹೊಸಮನಿ ಮಾತನಾಡಿ ಈ ಸಂಘಟನೆಯು ಒಂದೇ ಜಾತಿಗೆ ಸಂಬಂಧಪಟ್ಟಿಲ್ಲ ಎಸ್.ಸಿ,ಎಸ್ ಟಿ ಮೈನಾರಿಟಿ ಹಾಗೂ ಎಲ್ಲಾ ಹಿಂದುಳಿದ ವರ್ಗದ ಜನರಿಗೆ ಸಂಬಂಧಪಟ್ಟಿದೆ. ಎಲ್ಲರೂ ಕೂಡಿಕೊಂಡು ಅನ್ಯಾಯ,ಭ್ರಷ್ಟಾಚಾರವನ್ನು ತಡೆಗಟ್ಟುವ ಕೆಲಸ ಮಾಡಬೇಕು ಮತ್ತು ಯಾರಿಗೆ ಅನ್ಯಾಯವಾಗಿರುತ್ತೋ ಅವರಿಗೆ ನ್ಯಾಯ ಕೊಡಿಸುವಂತೆ ಕೆಲಸ ನಾವು ಎಲ್ಲರೂ ಕೂಡಿಕೊಂಡು ಮಾಡಬೇಕು ನಮ್ಮದು ಮೂರನೇ ತಲೆಮಾರು ಮೊದಲು ನಮ್ಮ ಅಜ್ಜ ಅಜ್ಜಿ ಅವರಿಗೆ ಹೊಲ ಮನೆ ಇರಲ್ಲಿಲ್ಲ ಈಗ ಅಪ್ಪಾಜಿ ಡಾ||ಬಾಬಾ ಸಹೇಬ ಅಂಬೇಡ್ಕರ್ ರವರು ತಮ್ಮ ಜೀವನ ಮುಡಪಾಗಿಟ್ಟು ಹಿಂದುಳಿದವರಿಗೆ ಮತ್ತು ದಲಿತರಿಗೆ ಸರ್ಕಾರದಿಂದ ಹೊಲ ಮನೆ ಇನ್ನೂ ಹಲವಾರು ಸೌಲಭ್ಯಗಳನ್ನು ಕಲ್ಪಿಸಿದ್ದಾರೆ ಅದನ್ನು ತೆಗೆದುಕೊಳ್ಳಲು ಆಗುತ್ತಿಲ್ಲ ಅಂತಹ ಪರಸ್ಥಿತಿಯಲ್ಲಿ ಬದಕುತ್ತಿದ್ದೇವೆ ನಿಗಮದಿಂದ ಬರುವಂತಹ ಸೌಲಭ್ಯ ಆ ನಿಗಮದ ಏಜೆಂಟರ ಪಾಲಾಗುತ್ತಿವೆ ಹಾಗೆ ಆಗಬಾರದು ನಾವೆಲ್ಲರೂ ಒಗ್ಗೂಡಿ ಆ ಸೌಲಭ್ಯಗಳನ್ನು ಪಡೆಯೋಣ ಎಂದು ಸದಸ್ಯರು ಹಾಗೂ ಸಾರ್ವಜನಿಕರ ಮುಂದೆ ಪ್ರಸ್ತುತ ಪಡಿಸಿದರು ನಂತರದಲ್ಲಿ ಸಲೀಂ ಮಕಂದಾರ ದಲಿತ ಸಂಘರ್ಷ ಸಮಿತಿಯ(ರಿ.)ಪರಿವರ್ತನಾವಾದ ವಿಜಯಪುರ ಜಿಲ್ಲಾ ಅಲ್ಪ ಸಂಖ್ಯಾತ ವಿಭಾಗದ ಅಧ್ಯಕ್ಷರು ಮಾತನಾಡಿ ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬನೂ ಹಿಂದೂನೆ ಅದು ಹಿಂದು ಮುಸ್ಲಿಂ ಆಗಿರಬಹುದು ಹಿಂದು ಬೌದ್ಧ ಆಗಿರಬಹುದು ಹಿಂದೂ ಸಿಖ್ ಆಗಿರಬಹುದು ಭಾರತದಲ್ಲಿ ಹುಟ್ಟಿದವರಿಗೆ ಸ್ವಾತಂತ್ರವಾಗಿ ಬದುಕುವ ಹಕ್ಕನ್ನು ವಿಶ್ವರತ್ನ ಡಾಕ್ಟರ್ ಬಾಬಾ ಸಾಹೇಬ ಅಂಬೇಡ್ಕರ್ ರವರು ಕೊಟ್ಟಿದ್ದಾರೆ ಅದನ್ನು ಭಂಗ ಪಡಿಸಲು ಕುತಂತ್ರ ಮಾಡಿದರೆ ಮತ್ತು ಅಸ್ಪೃಶತೆ ಕಂಡುಬಂದರೆ ಪೆನ್ ಇದೆ ಮತ್ತು ಖಡ್ಗನು ಇದೆಯೆಂದು ಹೇಳಿದರು ಮತ್ತು ಸಂವಿಧಾನ ಬದ್ಧವಾದ ಸೌಕರ್ಯಗಳು ಎಲ್ಲರಿಗೂ ತಲುಪಬೇಕು ಅಂಬೇಡ್ಕರ್ ರವರು ಸರ್ವರಿಗೂ ಸಮಪಾಲು,ಸರ್ವರಿಗೂ ಸಮ ಬಾಳು ಎಂದು ಬರೆದಿಟ್ಟು ಹೋಗಿದ್ದಾರೆ ಮತ್ತೆ ದಲಿತರಿಗೆ ಅನ್ಯಾಯವಾದಾಗ ಯಾವ”ನ್ಯೂಸ್ ಚಾನೆಲ್ ಗಳು ಬೆಳಕಿಗೆ ತರುವಂತ ಕೆಲಸ ಮಾಡಿಲ್ಲ ಗುಲಾಮಗಿರಿ ಪದ್ದತಿ ಎಲ್ಲಿಯವರಗೆ ಹೋಗಲ್ಲವೋ ಅಲ್ಲಿಯವರಗೆ ನಾವು ಹಿಂದುಳಿದವರು ಮತ್ತು ದಲಿತರು ಅಲ್ಪಸಂಖ್ಯಾತರು ತಲೆಯೆತ್ತಲು ಸಾಧ್ಯವಿಲ್ಲ”ಉದಾಹರಣೆಗೆ ಗೊಲ್ಲರಟ್ಟಿಯಲ್ಲಿ ದಲಿತರಿಗೆ ದೇವಸ್ಥಾನದ ಪ್ರವೇಶ ಇರಲಿಲ್ಲ ಆದರೆ ಒಬ್ಬ ಚಿಕ್ಕ ಹುಡುಗನಿಂದ ಬೆಳಕಿಗೆ ಬಂದ ಸಮಸ್ಯಯು ಎಸ್.ಪಿ.ಡಿ.ಸಿ.ನೇತೃತ್ವದಲ್ಲಿ ದೇವಸ್ಥಾನಕ್ಕೆ ಪ್ರವೇಶ ಮಾಡಿ.ಆ ಬಾಲಕ ಘನತೆ ಪ್ರತಿಷ್ಟೆಯಿಂದ ಅಲ್ಲಿಯ ದಲಿತ ಸಮುದಾಯದ ಜನರು ದೇವಸ್ಥಾನ ಪ್ರವೇಶಿಸುವಂತೆ ಆಯಿತು ಅದೇ ತರನಾಗಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕಂಡು ಬಂದರೆ ಹೋರಾಟ ಮಾಡುವುದರ ಮೂಲಕ ಆಸ್ಪೃಶ್ಯತೆ ನಿವಾರಣೆ ಮಾಡೋಣ ಎಂದು ಹೇಳಿದರು.
ನಂತರದಲ್ಲಿ ಅನ್ವರ್ ಅವಟಿ ಅಖಿಲ ಕರ್ನಾಟಕ ರೈತ ಸಂಘದ ಯುವ ಜಿಲ್ಲಾ ಕಾರ್ಯದರ್ಶಿ ಮಾತನಾಡಿ ನಾವು ಎಲ್ಲಾ ಒಂದೇ ಭೂ ಒಡೆತನದ ಸೌಕರ್ಯಗಳನ್ನು ಎಲ್ಲಾ ಬಡ ಜನರಿಗೆ ಕಲ್ಪಿಸುವ ಕೆಲಸ ಮಾಡಿಕೊಡೋಣ ಆವಾಗ ಸಂಘಟನೆಗೆ ಶಕ್ತಿ ಬರುತ್ತದೆ ರೈತ ಪರ ಸಂಘಟನೆಗಳು ಹಿಂದುಳಿದ ದಲಿತಪರ ಸಂಘಟನೆಗಳು ಕೈ ಜೋಡಿಸಿ ಮನವಿಗಳ ಮೂಲಕ ಸರ್ಕಾರದ ಮುಂದೆ ಇಡೋಣ ಆಗಲಿಲ್ಲ ಅಂದ್ರೆ ಹೋರಾಟದ ಮೂಲಕ ಸೌಕರ್ಯಗಳನ್ನು ಒದಗಿಸಿಕೊಡೋಣ ಎಂದು ಮಾತನಾಡಿದರು ಮತ್ತು ದಲಿತ ಸಂಘರ್ಷ ತಾಲೂಕ,ಸಮಿತಿ ರಚನೆಯನ್ನು ಮಾಡಿ ತಾಲೂಕ ಪ್ರಧಾನ ಸಂಚಾಲಕರು ಮಹೇಶ ಚಲವಾದಿ ಮತ್ತು ಸಂಘಟನಾ ಸಂಚಾಲಕರು ಶಂಕರ ಪಡಸಾಲಿ ಹಾಗೂ ಸಂಘಟನಾ ಸಹಸಂಚಾಲಕರು ತಿಮ್ಮಣ ಚಮಲಾಪುರ,ಹುಲಗಪ್ಪ ತಳವಾರ ಮತ್ತು ಪ್ರಧಾನ ಕಾರ್ಯದರ್ಶಿ ಬಸವರಾಜ ತಾಳಿಕೋಟಿ ಹಾಗೂ ಪರಶುರಾಮ ಹುಣಸಗಿ ಮತ್ತು ಕಾರ್ಯದರ್ಶಿಗಳು ಚಿದಾನಂದ ಕಟ್ಟಿಮನಿ. ಬಸವರಾಜ ಬಿಸನಾಳ,ಸದಸ್ಯರು ಮರೆಪ್ಪ ತಾರನಾಳ,ರಘು ಪಡಸಾಲಿ,ಶರಣಬಸಪ್ಪ ರಕ್ಕಸಗಿ,ಮುತ್ತು ಕರಡಿ,ಆಕಾಶ ಬಸರಿಕಟ್ಟಿ,ನಾನೇಶ ವಾಗ್ಮೋರೆ,ಶಿವು ಚಮಲಾಪುರ,
ಮತ್ತು ಅಲ್ಪಸಂಖ್ಯಾತ ತಾಲೂಕು ಘಟಕದ ಸಂಚಾಲಕರು ಅಲ್ಲಾಬಕ್ಷ ಚಳ್ಳಿಗಿಡದ,ಸಹಸಂಘಟನಾ ಸಂಚಾಲಕರು ಅಬ್ದಲ್ ರಹೇಮಾನರವರು
ವಹಿಸಿಕೊಂಡಿದ್ದರು.ವಿಧ್ಯಾರ್ಥಿ ಒಕ್ಕೂಟದ ಪ್ರಧಾನ ಸಂಚಾಲಕರು ಮಂಗಲ ಅಲಿ ಮಕಂದಾರ ಮತ್ತು ಸಂಘಟನಾ ಸಂಚಾಲಕರು ಮಹೇಶ ನಾಯಕ.ಈ ಎಲ್ಲಾ ಸಂಘಟನೆಯ ಸಂಚಾಲಕರು ಮತ್ತು ಪದಾಧಿಕಾರಿಗಳನ್ನು ರಾಜ್ಯ ಸಮಿತಿಯ ಅಥಿತಿ ಎಸ್ ಬಿ ಕಟ್ಟಿಮನಿ ಮತ್ತು ಕಂಠೀರವ ಹೊಸಮನಿ ರಾಜ್ಯ ಸಮಿತಿ ಸಂಘಟನಾ ಸಂಚಾಲಕರು,ವಿಜಯಕುಮಾರ ಚಲವಾದಿ,ವಿಭಾಗಿಯ ಸಂಚಾಲಕರು ಬೆಳಗಾವಿ ಮತ್ತು ಸಲೀಂ ಮಕಂದಾರ,ವಿಜಯಪುರ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಸಂಚಾಲಕರು ಹಾಗೂ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರು ಸಿದ್ದನಗೌಡ ಬಿರದಾರ ನೇತೃತ್ವದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.)ಪರಿವರ್ತನಾವಾದ ಸಂವಿಧಾನ ಜಾಗೃತಿ ಅಭಿಯಾನ ತಾಲೂಕ ಸಮಿತಿಯನ್ನು ರಚನೆಯನ್ನು ಮಾಡಲಾಯಿತು.
ವರದಿ-ಉಸ್ಮಾನ ಬಾಗವಾನ