ಭದ್ರಾವತಿ:ನಗರಸಭೆಯ ನೂತನ ಅಧ್ಯಕ್ಷರಾಗಿ 34ನೇ ವಾರ್ಡ್ ಕಾಂಗ್ರೆಸ್ ಸದಸ್ಯೆ ಶ್ರೀಮತಿ ಲತಾ ಚಂದ್ರಶೇಖರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶಾಸಕ ಬಿ ಕೆ ಸಂಗಮೇಶ್ವರ ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.
ನಗರಸಭೆಯ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಮತ್ತು, ಬಿಜೆಪಿಯ ಎಲ್ಲಾ ಸದಸ್ಯರು ಪಾಲ್ಗೊಂಡು ಲತಾ ಚಂದ್ರಶೇಖರ್ ರವರಿಗೆ ಬೆಂಬಲ ಸೂಚಿಸಿದರು. ಅಂತಿಮವಾಗಿ ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಸತ್ಯನಾರಾಯಯಣ ರವರು ಲತಾ ಚಂದ್ರಶೇಖರ್ ರವರ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಿದರು.
ನಂತರ ನಡೆದ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ್,ಹಿರಿಯ ಸದಸ್ಯರಾದ ವಿ.ಕದಿರೇಶ್,ಬಿ ಟಿ ನಾಗರಾಜ್ ಮತ್ತು ಟಿಪ್ಪು ಸುಲ್ತಾನ್ ನೂತನ ಅಧ್ಯಕ್ಷರಿಗೆ ಅಭಿನಂದಿಸಿ ಮಾತನಾಡಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಲತಾ ಚಂದ್ರಶೇಖರ್ ಮಾತನಾಡಿ,ಶಾಸಕರ ಆಶೀರ್ವಾದ ಹಾಗೂ ಸಹಕಾರದೊಂದಿಗೆ ಅಧ್ಯಕ್ಷರಾಗಿದ್ದು ಅವರ ಆಶಯದಂತೆ ಮತ್ತು ಹಿಂದಿನ ಎಲ್ಲಾ ಅಧ್ಯಕ್ಷರುಗಳು ಹಾಗೂ ಎಲ್ಲಾ ವಾರ್ಡ್ ಗಳ ಸದಸ್ಯರುಗಳ ಸಲಹೆ ಸಹಕಾರದೊಂದಿಗೆ ಭದ್ರಾವತಿ ನಗರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.ನಗರಸಭೆ ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ,ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್,ಹಿರಿಯ ಸದಸ್ಯರಾದ ಬಿ.ಕೆ.ಮೋಹನ್,ಬಿ.ಟಿ.ನಾಗರಾಜ್,ಮಾಜಿ ಅಧ್ಯಕ್ಷರುಗಳಾದ ಗೀತಾ ರಾಜ್ ಕುಮಾರ್, ಅನುಸುಧಾ ಮೋಹನ್ ಪಳನಿ,ಶೃತಿ ವಸಂತಕುಮಾರ್, ಸದಸ್ಯರಾದ ಮಣಿ,ಜಾರ್ಜ್,ಚನ್ನಪ್ಪ,ಸುದೀಪ್ ಕುಮಾರ್,ಬಿ ಎಂ ಮಂಜುನಾಥ್(ಟೀಕು),ಆರ್ ಮೋಹನ್ ಕುಮಾರ್,ಪ್ರೇಮಾ ಬದರಿನಾರಾಯಣ್, ಅನುಪಮಾ ಚನ್ನೇಶ್,ಮಾಜಿ ಸದಸ್ಯೆ ಲಕ್ಷ್ಮೀದೇವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನೂತನ ಅಧ್ಯಕ್ಷರಿಗೆ ಅಭಿನಂದನೆಗಳ ಮಹಾಪೂರ:
ಕಾಂಗ್ರೆಸ್ ಪಕ್ಷದ ಜಿಲ್ಲಾ ಮುಖಂಡ ಶ್ರೀಕಾಂತ್,ನಗರ ಘಟಕದ ಅಧ್ಯಕ್ಷ ಎಸ್ ಕುಮಾರ್,ಗ್ರಾಮಾಂತರ ಅಧ್ಯಕ್ಷ ಹೆಚ್ ಎಲ್ ಷಡಕ್ಷರಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್ ರವಿಕುಮಾರ್,ಕಾರ್ಮಿಕ ವಿಭಾಗದ ರಾಜ್ಯ ಉಪಾಧ್ಯಕ್ಷ ಅರುಣ್ ಕುಮಾರ್ ಸೇರಿದಂತೆ ನಗರಸಭೆಯ ಪೌರಾಯುಕ್ತರು, ಅಧಿಕಾರಿಗಳು,ಸಿಬ್ಬಂದಿ ಹಾಗೂ ಕೇಸರಿ ಪಡೆ ಮತ್ತು ವಿವಿಧ ಸಂಘ ಸಂಸ್ಥೆಗಳ ಪ್ರಮುಖರು,ಸ್ನೇಹಿತರು, ಹಿತೈಷಿಗಳು ನೂತನ ಅಧ್ಯಕ್ಷೆ ಲತಾ ಚಂದ್ರಶೇಖರ್ ರವರಿಗೆ ಅಭಿನಂದಿಸಿದರು.
ವರದಿ:ಕೆ ಆರ್ ಶಂಕರ್,ಭದ್ರಾವತಿ