ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿ ಗ್ರಾಮದಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಅಂಗವಾಗಿ ಶ್ರೀರಾಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಬೆಳಿಗ್ಗೆ ಶ್ರೀ ಆಂಜನೇಯ ಸ್ವಾಮಿ ಮೂರ್ತಿಗೆ ಅಭಿಷೇಕ, ಪುಷ್ಪಾರ್ಚನೆ ಮಾಡಿ ಶ್ರೀರಾಮ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು ನಂತರ ಗ್ರಾಮದ ಶ್ರೀ ವಾಲ್ಮೀಕಿ ವೃತ್ತ,ಅಂಬೇಡ್ಕರ್ ವೃತ್ತ ಹಾಗೂ ಶ್ರೀ ಹೇಮರೆಡ್ಡಿ ಮಲ್ಲಮ್ಮ ವೃತ್ತಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು ನಂತರ ದಿನಪೂರ್ತಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಯಿತು ನಂತರ ಭಕ್ತರೆಲ್ಲರೂ ಸೇರಿಕೊಂಡು ಶ್ರೀರಾಮನ ಭಾವಚಿತ್ರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಶ್ರೀರಾಮ ಮಂದಿರ ಉದ್ಘಾಟನೆ ಹಾಗೂ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆಗೆ ಉತ್ತಮ ರೀತಿಯಲ್ಲಿ ವಿಜ್ರಂಬಣೆಯಿಂದ ಆಚರಿಸಲಾಯಿತು.ಇದೇ ವೇಳೆ ಮೆರವಣಿಗೆಯುದ್ದಕ್ಕೂ ಜೈ ಶ್ರೀರಾಮ ಘೋಷಣೆಗಳು ಮೊಳಗಿದವು,ಗ್ರಾಮವೆಲ್ಲಾ ಕೇಸರಿಮಯವಾಗಿತ್ತು.
ಇದೇ ವೇಳೆ ಅರ್ಚಕರಾದ ರವಿ ಶಾಸ್ತ್ರಿ,ಊರಿನ ಮುಖಂಡರಾದ ಶರಣಯ್ಯ ಸ್ವಾಮಿ, ರುದ್ರಗೌಡ,ಅಮರೇಶ ಕಲ್ಮಂಗಿ,ಅಮರೇಶ ನೆಕಡೆ,ಮಲ್ಲಕ್ ಕ್ಯಾಡೇದ್,ಮಲ್ಲಪ್ಪ ಕಲ್ಮಂಗಿ,ಶಂಕ್ರಪ್ಪ ಹುಲ್ಲೂರು,ಮುದಕನಗೌಡ,ಶರಣಬಸವ ಪೋ.ಪಾ.ಉಮೇಶ ಕೆಸರಟ್ಟಿ,ಶಿವಕುಮಾರ ಅಬ್ಬಿಗೇರಿ,ತಿರುಪತಿ ಹಳೆಮನಿ,ಚನ್ನಪ್ಪ ವಿಶ್ವಕರ್ಮ ಹಾಗೂ ಶ್ರೀ ಶರಣಬಸವೇಶ್ವರ ಯುವಕ ಮಂಡಳಿ,ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರು ಹಾಗೂ ಊರಿನ ಹಿರಿಯರು,ಯುವಕರು,ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.