ಗದಗ:ಸಮೀಪದ ತಿಮ್ಮಾಪೂರ ಗ್ರಾಮದಲ್ಲಿ 75 ನೇಯ ಗಣರಾಜ್ಯೋತ್ಸವ ಹಾಗೂ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಬಲಿದಾನ ದಿವಸವನ್ನು ವಿವಿಧ ಸಂಘ ಸಂಸ್ಥೆಗಳು ಭಕ್ತಿ ಪೂರ್ವಕವಾಗಿ ಆಚರಿಸಿದರು.
ಸಂಗೊಳ್ಳಿ ರಾಯಣ್ಣನ ಕಂಚಿನ ಪ್ರತಿಮೆ ಮುಂದೆ ಧ್ವಜಾರೋಹಣವನ್ನು ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್ ಬಾಬರಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಮೊದಲು ಕಿಡಿ ಹೊತ್ತಿಸಿದ್ದು ಸಂಗೊಳ್ಳಿ ರಾಯಣ್ಣ ಇವರ ಧೈರ್ಯ ಶೌರ್ಯ ಪರಾಕ್ರಮಗಳು ಬ್ರಿಟಿಷರನ್ನು ನಿದ್ದೆಗೆಡಿಸಿದ್ದವು ಎಂದು ಹೇಳಿದರು.
ಯುವಕರು ರಾಯಣ್ಣನ ಗುಣಗಳನ್ನು ಮೈಗೂಡಿಸಿಕೊಂಡು ಭಾರತದ ಶ್ರೇಷ್ಠತೆಯನ್ನು ಎತ್ತಿಡಿಯಲು ದೃಢಸಂಕಲ್ಪ ಮಾಡಬೇಕು ಯುವಕರು ಈ ದೇಶದ ಶಕ್ತಿ ಎಲ್ಲಾ ಯುವಜನತೆ ದೇಶಭಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಾದ ರಾಮಪ್ಪ ಹುಚ್ಚಪ್ಪನವರ,ಶರಣಪ್ಪ ಜೋಗಿನ, ಯಲ್ಲಪ್ಪ ಜೋಗಿನ,ಕುಬೇರಗೌಡ ಪಾಟೀಲ,ಮಲ್ಲಪ್ಪ ಮಾಳಗುಂಡರ,ರಾಮಪ್ಪ ಗುಡ್ಲಾನೂರ,ಕನಕಪ್ಪ ತಳವಾರ,ಯಲ್ಲಪ್ಪ ಯತ್ನಟ್ಟಿ,ಕರಿಯಪ್ಪ ಬಾಬರಿ,ರಾಮಣ್ಣ ಖಂಡ್ರಿ,ರಾಮಣ್ಣ ಕುರಡಗಿ,ರಾಜು ಚವಾಣ,ಈರಣ್ಣ ಕಮತರ,ಜೆ ಜೆ ಹೀರೆಹಾಳ,ಮಂಜು ಬಸರಿಕಟ್ಟಿ ಹಾಗೂ ಇನ್ನೂ ಅನೇಕ ಸಂಘದ ಪದಾಧಿಕಾರಿಗಳು ಮತ್ತು ಪ್ರಾಥಮಿಕ ಶಾಲಾ ಮಕ್ಕಳು ಹಾಗೂ ಕನಕದಾಸ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.