ನರಗುಂದ-ತಾಲೂಕಿನ ಹುಣಸೀಕಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಲಕೇರಿ ಗ್ರಾಮದ ಗ್ರಂಥಾಲಯದಲ್ಲಿ ಶಿಕ್ಷಣ ಫೌಂಡೇಷನ್,ಡೇಲ್ ಸಂಸ್ಥೆ ಹಾಗೂ ಪಂಚಾಯತ್ ರಾಜ್ಯ ಇಲಾಖೆಯ ಅಡಿಯಲ್ಲಿ ಅನುಷ್ಠಾನಗೂಂಡ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದ ಭಾಗವಾಗಿ ಶಾಲಾ ಮಕ್ಕಳಿಗೆ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ಶಾಲಾ ಮಕ್ಕಳಿಗೆ ಪ್ರಬಂಧ ಸ್ಫರ್ಧೆಯನ್ನು ಏರ್ಪಡಿಸಲಾಗಿತ್ತು.ಸ್ಫರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಶಿಕ್ಷಣ ಫೌಂಡೇಷನ್ ವತಿಯಿಂದ ಪ್ರಶಸ್ತಿ ಪ್ರಧಾನ ಮಾಡಲಾಯಿತು.75ನೇ ಗಣರಾಜ್ಯೋತ್ಸವದ ಅಂಗವಾಗಿ ಕಲಕೇರಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಬಂಧ ಸ್ಫರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಶಾಲಾ ಮುಖ್ಯಸ್ಥರು,ಶಾಲಾ ಸಮಿತಿ ಅಧ್ಯಕ್ಷರು,ಸದಸ್ಯರು ಹಾಗೂ ಊರಿನ ಗಣ್ಯರು ಪ್ರಶಸ್ತಿ ಪ್ರಧಾನ ಮಾಡಿದರು.ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದ ಜಿಲ್ಲಾ ಸಂಯೋಜಕರಾದ ಶ್ರೀ ಯಲ್ಲಪ್ಪ ಸಾಳುಂಕೆಯವರ ಮಾರ್ಗದರ್ಶನದಂತೆ ಗ್ರಾಮದ ಎಲ್ಲ ವಿದ್ಯಾರ್ಥಿಗಳು,ಯುವಕರು,ರೈತರು ಹಾಗೂ ಎಲ್ಲಾ ಗ್ರಾಮಸ್ಥರು ಡಿಜಟಲೀಕರಣ ಹೊಂದಬೇಕು ಮತ್ತು ಗ್ರಂಥಾಲಯದಲ್ಲಿ ದೂರೆಯುವ ಅವಕಾಶವನ್ನು ಮತ್ತು ಅದರ ಉಪಯೋಗವನ್ನು ಮಾಡಿಕೋಳ್ಳಬೇಕು ಎಂದು ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದ ತಾಲೂಕಾ ಸಂಯೋಜಕರಾದ ಶ್ರೀ ನಾಗರಾಜ ಪ್ರಚಂಡಿಯವರು ತಿಳಿಸುವದರ ಜೊತೆಗೆ ಕಾರ್ಯಕ್ರಮಕ್ಕೆ ಸಹಕರಿಸಿದ ಗ್ರಂಥಪಾಲಕರಾದ ಶ್ರೀ ನಿಂಗನಗೌಡ ಜಾಮದಾರ,ಶಾಲಾ ಮುಖ್ಯಸ್ಥರಾದ ಶ್ರೀಮತಿ.ಎನ್.ಎನ್.ಟಾಕೂರ್‌ದಾಸ್,ಶಾಲಾ ಸಮಿತಿ ಅಧ್ಯಕ್ಷರಾದ ಶ್ರೀ ಗಣೇಶಗೌಡ ಜಾಮದಾರ ಹಾಗೂ ಸರ್ವ ಆಡಳಿತ ಮಂಡಳಿಯವರಿಗೆ ಅಭಿನಂದಣೆಗಳನ್ನು ತಿಳಿಸಿದರು.ಅದೇ ರೀತಿಯಲ್ಲಿ ತಾಲೂಕಿನ ಹದಲಿ ಮತ್ತು ಬನಹಟ್ಟಿ ಗ್ರಾಮದಲ್ಲೂ ಸಹ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳಿಗೂ ಸಹ ಶಿಕ್ಷಣ ಫೌಂಡೇಷನ್ ವತಿಯಿಂದ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶ್ರೀಮತಿ ಕೆ.ಎಮ್.ಹಾದಿಮನಿಯವರು ನಿರೂಪಣೆ ಮಾಡಿ,ಶ್ರೀ ಎಮ್.ಎಮ್ ನದಾಫ್ ಶಿಕ್ಷಕರು ವಂದನಾರ್ಪಣೆ ಮಾಡಿದರು.ಊರಿನ ಗಣ್ಯ-ಮಾನ್ಯರು,ಹಿರಿಯರು, ಯುವಕರು,ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಶೋಭೆ ತಂದರು.
ವರದಿ:ನಾಗರಾಜ ಪ್ರಚಂಡಿ