ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನಡೆದ “ಭೀಮವಾದ ದಲಿತ ಸಂಘರ್ಷ ಸಮಿತಿ” ಸಂಸ್ಥಾಪನೆ ಹಾಗೂ
75ನೇ ಸಂವಿಧಾನ ದಿನಾಚರಣೆ ಹಾಗೂ ಅಥಣಿ ತಾಲೂಕು ಸಮಿತಿಯ ರಚನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಭೀಮವಾದ ಸಂಸ್ಥಾಪಕರಾದ ಸಿದ್ಧಾರ್ಥ ಸಿಂಗೆ ಇವರು ಕಳೆದ 25 ವರ್ಷಗಳಿಂದ ರಾಜ್ಯದಲ್ಲಿ ಚಳುವಳಿ ಕಟ್ಟಲು ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ ಆದರೆ ಇಂದು ಡಿಎಸ್ಎಸ್ ಭೀಮವಾದ ಹೆಸರಿನಲ್ಲಿ ತಮ್ಮ ವೈಯಕ್ತಿಕ ಆಸ್ತಿ ಅನ್ನುವ ಹಾಗೆ ಮಾಡಿದ್ದು,ಅವರಲ್ಲಿ ಸೈದ್ಧಾಂತಿಕ ಸ್ಪಷ್ಟತೆ ಹಾಗೂ ಆಂತರಿಕ ಶಿಸ್ತು ಇಲ್ಲದೇ ಇರುವುದರಿಂದ ಸ್ವಾಭಿಮಾನ ಚಳುವಳಿಯನ್ನು ಬೆಳಗಾವಿ ಜಿಲ್ಲೆಯಿಂದಲೇ ರಾಜ್ಯ ಮಟ್ಟದಲ್ಲಿ ಭೀಮವಾದವನ್ನು ತಳಮಟ್ಟದಿಂದ ಸಂಘಟಿಸುವ ದೃಢ ಸಂಕಲ್ಪದೊಂದಿಗೆ ಮಾಡಿದ್ದೇವೆ. ಯಾರು ಡಾ.ಬಾಬಾಸಾಹೇಬ ಅಂಬೇಡ್ಕರ್ ರ ತತ್ವ ಸಿದ್ಧಾಂತಗಳನ್ನು ಪಾಲಿಸಿಕೊಂಡು ಬರುತ್ತಿದ್ದಾರೊ ಅವರು ಭೀಮವಾದಿಗಳು ಹಾಗೂ ಅಂತಹ ಸಂಘಟನೆ ಭೀಮವಾದ ಎಂದು ಹೇಳಿದರು.
ರಾಜ್ಯ ಸಂಘಟನಾ ಸಂಚಾಲಕರಾದ ಸಂಜೀವ ಕಾಂಬಳೆ,ಮಾತನಾಡಿ ಬಾಗಲಕೋಟೆ ಮೂಲದ ಭೀಮವಾದ ಹೆಸರಿಗೆ ಮಾತ್ರ ಭೀಮವಾದ ಉಳಿಸಿಕೊಂಡಿದ್ದು,ದ್ವೇಷ,ಅಸೂಯೆಯನ್ನು ಉಸಿರಾಡುತ್ತಾ ದಲಿತ ಚಳುವಳಿಗೆ ಹಿನ್ನಡೆಯುಂಟು ಮಾಡುತ್ತಿದ್ದು ಡಾ.ಬಾಬಾಸಾಹೇಬ ಅಂಬೇಡ್ಕರ್ ರ ಸಂವಿಧಾನ ರಕ್ಷಣೆಯ ಜವಾಬ್ದಾರಿ ನಮ್ಮೆಲ್ಲರ ಮೇಲಿರುವದರಿಂದ ಸ್ವಾಭಿಮಾನಿಗಳಾದ ನಾವೆಲ್ಲರೂ ಇಂದು ಭೀಮವಾದ ಸಂಸ್ಥಾಪಕರಾಗಿದ್ದೇವೆ ಎಂದರು.
ರಾಜ್ಯ ಮುಖಂಡರಾದ ಕೆಂಪಣ್ಣ ಶಿರಹಟ್ಟಿ ಮಾತನಾಡಿ ಭೀಮವಾದದ ಬೀಜ ಬಿತ್ತಿದ್ದೇವೆ,ಹೆಮ್ಮರವಾಗಿ ಬೆಳೆಸುವ ದೃಢ ಸಂಕಲ್ಪದೊಂದಿಗೆ ನಾವೆಲ್ಲರೂ ಬದ್ಧರಾಗೋಣ ಎಂದರು.
ಸಭೆಯಲ್ಲಿ ವಿಜಯಪುರ ಜಿಲ್ಲೆಯ ಯಮನಪ್ಪ ಹಳ್ಳಿಕೇರಿ,ಬಾಗಲಕೋಟೆ ಜಿಲ್ಲೆಯ ಸದಾಶಿವ ಸಿಂಗೆ, ಮುನ್ನಾ ತಾಂಬೊಳಿ,ಜಿಲ್ಲಾ ಸಂಚಾಲಕರಾದ ಪರಶುರಾಮ ಟೊಣಪೆ,ಪ್ರಕಾಶ ಕಾಂಬಳೆ,ಸಂಗೀತಾ ಕಾಂಬಳೆ ರೇಖಾ ಬಂಗಾರಿ ನಿಕಿತಾ ಗದಾಡೆ,ಶಿವಾನಂದ ಸೌದಾಗರ,ಶಿರಾಜ ಸನದಿ,ಸಂಗಮೇಶ ಕಾಂಬಳೆ ಪೀರಪ್ಪ ಕಾಂಬಳೆ,ಆರತಿ ಕಾಂಬಳೆ,ರಾಜು ಕಾಂಬಳೆ, ಕುಮಾರ ಐದನವರ,ಕುಮಾರ ಕಾಂಬಳೆ,ದ್ವಾರಕಾ ಕಾಂಬಳೆ ಹಾಗೂ ರಾಜ್ಯ ಮತ್ತು ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು,ಮುಖಂಡರು ಮತ್ತು ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ-ಸಂಗಮೇಶ ಕಾಂಬಳೆ