ಮೂರ್ತಿ ಪೂಜೆಯ ಖಂಡಿಸಿದರು,
ಬಸವಾದಿ ಶರಣರು,
ಗಲ್ಲಿಗೊಂದರಂತೆ,ಗುಡಿಗಳ
ಕಟ್ಟುತಿರುವರು,ಆಧುನಿಕರು,
ಹುಸಿಯ ನುಡಿಯ ಬೇಡ
ಎಂದರು ಬಸವಣ್ಣನವರು,
ಸುಳ್ಳೇ ನಮ್ಮ ಮನೆ ದೇವರು
ಎನ್ನುತಿರುವರು ಆಧುನಿಕರು.
ಬೇಡ ಡಂಭಾಚಾರ ಎಂದರು
ಶಿವಶರಣರೆಲ್ಲರು,
ಆಡಂಬರವೇ ಇರಲೆಂದು
ಬಯಸುತಿರುವರು ಆಧುನಿಕರು
ಅದು ೧೨ನೇ ಶತಮಾನ,
ಇದು ೨೧ಶತಮಾನ,ಆಗ
“ಕಾಯಕ” ಒಂದು ತತ್ವ ವಾಗಿತ್ತು
ಅದಕ್ಕೊಂದು ಬಧ್ಧತೆಯೂ ಇತ್ತು,ಈಗ ಏನಾಗಿದೆ?
ಅದು ಈಗ,ವ್ಯವಹಾರ,ಸ್ವಾರ್ಥವಾಗಿ,ಮಾರ್ಪಟ್ಟಿದೆ,
ಕಾಲಾಯ ತಸ್ಯೈ ನಮಃ,ಎಂದ ಶಿವ ಶಿವಾ!
-ಶಿವಪ್ರಸಾದ್ ಹಾದಿಮನಿ