ಗದಗ ಜಿಲ್ಲೆಯ ನರಗುಂದ ತಾಲೂಕಿನ ರಡ್ಡೇರನಾಗನೂರ ಗ್ರಾಮದ ಚಂದ್ರಗೌಡ ಮತ್ತು ಪದ್ಮಾವತಿ ದಂಪತಿಗಳ ಪುತ್ರನಾದ ರಾಮನಗೌಡ ಚಂದ್ರಗೌಡ ಕರಬಸನಗೌಡ್ರ (44) ಇವರು ಭಾನುವಾರ ಹೃದಯಾಘಾತದಿಂದ ಸಿಕ್ಕಿಂನಲ್ಲಿ ಮೃತ ಪಟ್ಟಿದ್ದಾರೆ.
ರಾಮನಗೌಡ ಚಂದ್ರಗೌಡ ಕರಬಸನಗೌಡ್ರ ಇವರು 2002 ರಲ್ಲಿ ಚಂಡೀಘಡದ ಐಟಿಬಿಪಿ ಗೆ ನೇಮಕವಾಗಿದ್ದರು.2006 ರಲ್ಲಿ ಜಯಶ್ರೀ ಎಂಬುವವರ ಜೊತೆ ವಿವಾಹವಾಗಿದ್ದರು.
ದೇಶದ ವಿವಿಧ ಕಡೆ 22 ವರ್ಷ ಸೇವೆಯನ್ನು ಸಲ್ಲಿಸಿರುವ ಇವರು ಈ ವರ್ಷದ (2024) ಏಪ್ರೀಲ್ ನಲ್ಲಿ ಸೇವಾ ನಿವೃತ್ತಿ ಹೊಂದಿ ಸ್ವ ಗ್ರಾಮಕ್ಕೆ ಮರಳುವವರಿದ್ದರು.
ಆಸ್ಸಾಂ ಮತ್ತು ಸಿಕ್ಕಿಂ ನಡುವಿನ ಬಾಂಗ್ ಡೊಂಗ್ರ್ ಎಂಬಲ್ಲಿ ಹಿಮಪಾತವಾಗುವ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ರಕ್ತದೊತ್ತಡದಲ್ಲಿ ತೀವ್ರ ಏರುಪೇರಾಗಿ ಹೃದಯಾಘಾತವಾಗಿದೆ,ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಿಗ್ಗೆ ಯೋಧ ಹುತಾತ್ಮರಾಗಿದ್ದಾರೆ.
ಫೆ. 7 ಬುಧವಾರ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಆಗಮಿಸಲಿದ್ದು, ಅಂದೇ ಬೆಳಿಗ್ಗೆ 9.00 ಘಂ.ಗೆ ಸರಕಾರದ ಸಕಲ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.
ವರದಿ. ನಾಗರಾಜ ಪ್ರಚಂಡಿ