ಭದ್ರಾವತಿ: ಸಾಧು–ಸತ್ಪುರುಷರ,ಮಹಾತ್ಮರ,ಆದರ್ಶ ಪುರುಷರ ಜಯಂತಿಗಳು ಆಚರಣೆಗೆ ಮಾತ್ರ ಸೀಮಿತವಾಗಬಾರದು.ದಿನನಿತ್ಯದ ಬದುಕಿನಲ್ಲಿ ಮಾರ್ಗದರ್ಶಕವಾಗಬೇಕು ಅವರು ನಡೆದ ದಾರಿ, ನುಡಿದ ಮಾತು ನಮಗೆ ಮಾದರಿ ಆಗಬೇಕು ಎಂದು ಉಪ ತಹಶೀಲ್ದಾರ್ ರಾಧಾಕೃಷ್ಣ ಭಟ್ ತಿಳಿಸಿದರು.
ತಾಲ್ಲೂಕು ಆಡಳಿತದ ವತಿಯಿಂದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಯಕ ಶರಣರ ಜಯಂತ್ಯೂತ್ಸವದಲ್ಲಿ ಕಾಯಕ ಯೋಗಿ ಬಸವಣ್ಣ ನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ನುಡಿ ನಮನ ಸಲ್ಲಿಸಿ ಮಾತನಾಡಿದರು.
ಉಪ ತಹಶೀಲ್ದಾರ್ ಮಂಜಾನಾಯ್ಕ ರವರು ಮಾತನಾಡಿ,ಆಧ್ಯಾತ್ಮಿಕ ಅನುಭವದ ಭವನ(ಅನುಭವ ಮಂಟಪ)ದಲ್ಲಿ ಎಲ್ಲಾ ಸಾಮಾಜಿಕ, ಆರ್ಥಿಕ ನ್ಯಾಯದೊಂದಿಗೆ ಪುರುಷ ಮತ್ತು ಮಹಿಳೆಯರಿಗೂ ಸಮಾನತೆ ನೀಡಲಾಗಿತ್ತು.ಕಾಯಕ ಶರಣರಾದ ಬಸವಣ್ಣ,ಮಾದಾರ ಚನ್ನಯ್ಯ,ಮಾದಾರ ಹರಳಯ್ಯರನ್ನೂ ಒಳಗೊಂಡಂತೆ ಮಹಾನ್ ಪುರುಷರ ಆದರ್ಶಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ರವರುಗಳಾದ ಎ ವಿ ರಾಜ್ ಅರಸ್,ಗಿರಿರಾಜ್ ಮತ್ತು ಕಚೇರಿ ವಿಷಯ ನಿರ್ವಾಹಕ ಅಲೆಕ್ಸ್ ಹಾಗೂ ತಾಲ್ಲೂಕು ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.
ವರದಿ:ಕೆ ಆರ್ ಶಂಕರ್ ಭದ್ರಾವತಿ