ಜನಪ್ರತಿನಿಧಿಗಳ ಗೊಡ್ಡು ಆಶ್ವಾಸನೆ,ಸೂರು ಇಲ್ಲದೇ ಮುರುಕಲು ಮನೆಯಲ್ಲಿ ಜೀವನ
ಚುನಾವಣೆ ಸಂದರ್ಭದಲ್ಲಿ ಬಡವರಿಗೆ ಇಲ್ಲದ ಸಲ್ಲದ ಯೋಜನೆಗಳ ಆಮಿಷ ತೋರಿಸಿ ಗೆದ್ದು ಬೀಗುವ ಜನಪ್ರತಿನಿಧಿಗಳೇ ಈ ತೋಟದ ವಸತಿ ಜನರ ಮನೆಯ ಸ್ಥಿತಿಯನ್ನ ನೋಡಿ.
ದಶಕಗಳೇ ಕಳೆದರೂ ಒಂದು ಸೂರು ಕಲ್ಪಿಸದ ಜನಪ್ರತಿನಿಧಿಗಳಿಗೆ ನಮ್ಮ ಧಿಕ್ಕಾರ.!
ಯಾವೊಬ್ಬ ಮೇಲಾಧಿಕಾರಿಗಳಿಗೂ ಕಾಣದೇ ಹೋಯ್ತಾ ಈ ಬಡ ಕುಟುಂಬದ ದುಸ್ಥಿತಿ.!?
ಅದ್ಯಾಕೆ ಗಮನಹರಸ್ತೀರಾ ಬಿಡಿ,ಇಲ್ಲಿ ಕೈ ಬೆಚ್ಚಗೆ ಮಾಡುವವರಿಗೆ ಮಾತ್ರ ನಿಮ್ಮ ಯೋಜನೆಗಳು ಸಿಮೀತವಾದವಾ.?
ಅಷ್ಟಕ್ಕೂ ಏನಿದು ಸ್ಟೋರಿ ಅಂತಿರಾ ನೀವೆ ನೋಡಿ…
ಹೌದು ಕಾಗವಾಡ ವಿಧಾನಸಭಾ ವ್ಯಾಪ್ತಿಯ ಆಜೂರ ಗ್ರಾಮದ ರೂಪಾಲಿ ಶ್ರೀಶೈಲ ಮಡಿವಾಳ ಕುಟುಂಬದ ಗೋಳು ಕೇಳುವವರೇ ಇಲ್ಲದಂತಾಗಿದೆ ಪಾಳು ಬಿದ್ದ ಮನೆಯಲ್ಲೆ ಬದುಕು ನಡೆಸುವ ಅನಿವಾರ್ಯತೆ ಎದುರಾಗಿದೆ.
ಬೆಳಗಾವಿ ಜಿಲ್ಲೆ ಕಾಗವಾಡ ವಿಧಾನ ಸಭಾ ಕ್ಷೇತ್ರದ ಖಿಳೆಗಾಂವ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಆಜೂರ ಗ್ರಾಮದಲ್ಲಿ ಕಂಡು ಬಂದ ಅವ್ಯವಸ್ಥೆ ಇದು.
ಸುಮಾರು ಆರು ಜನ ವಾಸಿಸುವ ಮನೆ ಈಗ ಪಾಳು ಬಿದ್ದ ಭೂತ ಬಂಗಲೆಯ ರೀತಿಯಾಗಿದೆ.
ಜನಪ್ರತಿನಿಧಿಗಳಿಗೆ ಚುನಾವಣೆ ಬಂದಾಗ ಮಾತ್ರ ನೆನಪಿಗೆ ಬರುವ ಇಂದಹ ಬಡಕುಟುಂಬಗಳ ಪರಿಸ್ಥಿತಿಯನ್ನ ಒಮ್ಮೆಯಾದರೂ ಅವಲೋಕಿಸಿದ್ದಿರಾ ಜನಪ್ರತಿತಿನಿಧಿಗಳೆ,ಸಂಬಂಧ ಪಟ್ಟ ಮೇಲಾಧಿಕಾರಿಗಳೇ..!
ಬೀದಿಯಲ್ಲೆ ಬದುಕು ಸಾಗಿಸುತ್ತಿದ್ದರೂ ಯಾವೊಬ್ಬ ಪುಣ್ಯಾತ್ಮರು ಗಮನ ಹರಿಸದೆ ಇರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.
ಈ ಸ್ಟೋರಿಯನ್ನ ನೋಡಿಯಾದ್ರೂ ಬಡ ಕುಟುಂಬಕ್ಕೆ ಮನೆಯ ಸೂರು ಕಲ್ಪಿಸುವ ಕಾರ್ಯಕ್ಕೆ
ಜನಪ್ರತಿನಿದಿಗಳು ಹಾಗೂ ಸ್ಥಳೀಯ ಅಧಿಕಾರಿಗಳು ಮುಂದೆ ಬರುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.