ಕೂಡ್ಲಿಗಿ ಕ್ಷೇತ್ರದ ಬೆಳ್ಳಿಗಟ್ಟ ಗ್ರಾಮದಲ್ಲಿ ದಿ.10-2-24 ರಂದು ಗೆಳೆಯರ ಬಳಗ ಆಯೋಜನೆ ಮಾಡಿರುವ 21 ವರ್ಷದ ವಯಸ್ಸಿನ 40 ತಂಡಗಳು ಒಳಗೊಂಡಿರುವ” ಕಬ್ಬಡ್ಡಿ ಪಂದ್ಯಾವಳಿಯನ್ನು ಮಾನ್ಯಶಾಸಕರು ಉದ್ಘಾಟಿಸಿ ಮಾತನಾಡಿ ಗ್ರಾಮೀಣದಲ್ಲಿ ಪ್ರಸಿದ್ಧಿ ಪಡೆದಿರುವ ಕಬ್ಬಡ್ಡಿ ಪಂದ್ಯಾವಳಿಯನ್ನು ಕ್ಷೇತ್ರದಲ್ಲಿ ಮೊದಲ ಬಾರಿಗೆ ಉದ್ಘಾಟನೆ ಮಾಡುತ್ತಿರುವುದು ಖುಷಿ ತಂದಿದೆ ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಾಗಬಾರದು.ಪಾಲ್ಗೊಳ್ಳುವುದು ಮುಖ್ಯವಾಗಬೇಕು ಆ ಮೂಲಕ ದೈಹಿಕ ಮತ್ತು ಮಾನಸಿಕವಾಗಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಅನುಕೂಲವಾಗಲಿದೆ ಎಂದರು. ನಮ್ಮ ಕೂಡ್ಲಿಗಿ ಕ್ಷೇತ್ರದ ಕ್ರೀಡಾಪಟುಗಳು ಮುಂದಿನ ದಿನಗಳಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ಒಳ್ಳೆಯ ಹೆಸರು ತರಬೇಕು ಎಂದೂ ಶುಭಾ ಹಾರೈಸಿದರು.ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
ವರದಿ ಅಂಗಡಿ ಶಶಿಕುಮಾರ್