ವಿಜಯಪುರ:50 ನೇ ಕನ್ನಡದ ಸಂಭ್ರಮಾಚರಣೆಯ ಅಂಗವಾಗಿ ರಾಜ್ಯಾದ್ಯಂತ ಹೊರಟ ಕನ್ನಡದ ತೇರು ವಿಜೃಂಭಣೆಯಿಂದ ತಾಳಿಕೋಟೆ ತಾಲ್ಲೂಕಿನ ಬಳಗಾನೂರಿಗೆ ಆಗಮಿಸಿತು.ಬಳಗಾನೂರಿನಲಗಲಿ ಕನ್ನಡದ ತೇರನ್ನು ಅತ್ಯಂತ ವೈಭವದಿಂದ ಸ್ವಾಗತಸಿಕೊಂಡರು ಬಳಗಾನೂರಿನ ಎಲ್ಲಾ ಶಾಲೆಯ ಶಿಕ್ಷಕಿಯರು,ತಹಶೀಲ್ದಾರ ಮೇಡಂ ಅವರಿಂದ ಆರತಿ ಬೆಳಗುವುದರ ಮೂಲಕ ಸ್ವಾಗತಿಸಲಾಯಿತು.
ಕಾರ್ಯಕ್ರಮದಲ್ಲಿ ಮುದ್ದೇಬಿಹಾಳ ತಾಲ್ಲೂಕಿನ
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು,ಪದಾಧಿಕಾರಿಗಳು,ಸದಸ್ಯರು ಹಾಗೂ ಬಿ.ಇ.ಓ,ಬಿ.ಆರ್.ಸಿ,ಬಿ.ಆರ್.ಪಿ,ಸಿ.ಆರ್.ಪಿ ಯವರು,ಕೊಣ್ಣೂರ,ಮಿಣಜಗಿ ಪಂಚಾಯತಿಯ ಪಿಡಿಓ,ಪಂಚಾಯತಿ ಅಧ್ಯಕ್ಷರು,ಸದಸ್ಯರು,ಬಳಗಾನೂರಿನ ಎಲ್ಲಾ ಗುರುಹಿರಿಯರು,ಯುವಕರು,ಕುವೆಂಪು ವಿಂಧ್ಯಾ ಸಂಸ್ಥೆಯ ಅಧ್ಯಕ್ಷರು,ಶಿಕ್ಷಕರು,ಹಿರೂರ ತಮದಡ್ಡಿ ಬಳಗಾನೂರ ಶಾಲೆಯ ಶಿಕ್ಷಕರು ಎಲ್ಲಾ ಪ್ರೀತಿಯ ಮುದ್ದು ಮಕ್ಕಳು,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಸದಸ್ಯರು ಊರಿನ ಹಿರಿಯರು ಭಾಗವಹಿಸಿದ್ದರು.
ಬಳಗಾನೂರ ಶಾಲೆಯ ವಿದ್ಯಾರ್ಥಿನಿಯರಿಂದ ಕೋಲಾಟ-ಚದ್ಮವೇಷ,ಕುವೆಂಪು ಶಾಲೆಯ ವಿದ್ಯಾರ್ಥಿನಿಯರು ಕೋಲಾಟ-ನೃತ್ಯಗಳ ಜೊತೆಗೆ ಕನ್ನಡ ಅಭಿಮಾನದ ಫಲಕಗಳು ಪ್ರದರ್ಶನ ಮಾಡಿದರು.ಬಳಗಾನೂರ ಕ್ರಾಸಿನ ಶಾಲೆಯ ಮಕ್ಕಳು ಕನ್ನಡ ಧ್ವಜದೊಂದಿಗೆ ಕಿರೀಟ ತೊಟ್ಟು ಕಂಗೊಳಿಸಿದ ಡೊಳ್ಳು ಕುಣಿತ ಆಕರ್ಷಕವಾಗಿತ್ತು.
ವರದಿ:ಉಸ್ಮಾನ ಬಾಗವಾನ