ಕಲಬುರಗಿ:ಚಿಕಿತ್ಸೆಯಿಂದ ಮತ್ತು ಔಷಧಿಗಳಿಂದ ರೋಗವನ್ನು ಗುಣಪಡಿಸಬಹುದು.ಅದರ ಜೊತೆಗೆ ರೋಗ ಶಮನ ಕೂಡ ಅವಶ್ಯ.ಶಮನಕ್ಕೆ ಆತ್ಮ ಸ್ಥೈರ್ಯ ಮತ್ತು ಮಾನವ ಸ್ಪರ್ಶ ಬೇಕು ಎಂದು ಕೆಬಿಎನ್ ವಿವಿ ಉಪಕುಲಪತಿ ಪ್ರೊ ಅಲಿ ರಜಾ ಮೂಸ್ವಿ ಹೇಳಿದರು.
ಖಾಜಾ ಬಂದಾನವಾಜ ವಿಶ್ವವಿದ್ಯಾಲಯದ ಮೆಡಿಕಲ್ ನಿಕಾಯದ ಜನರಲ್ ಮೆಡಿಸಿನ್ ವಿಭಾಗ ಮತ್ತು ಎಪಿಐ ಕಲಬುರಗಿ ಅಧ್ಯಾಯದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿರುವ “ಕೆಬಿಎನ್ ಎಂಇಡಿ ಪ್ಲೆಕ್ಸಸ್ 2024 ನರ್ಚರಿಂಗ್ ಮೈಂಡ್ಸ್ ,ಎನ್‌ಹಾನ್ಸಿಂಗ್ ಪ್ರಾಕ್ಟೀಸ್” ಕುರಿತ ಸಿ.ಎಂ.ಈ ಯನ್ನು ಉದ್ಘಾಟಿಸಿ ಮಾತನಾಡುತ್ತಾ ದೇಹದ ಎಲ್ಲಾ ಭಾಗದ ಬಗ್ಗೆ ಅಧ್ಯಯನ ಮಾಡಿರುವ ವಿಭಾಗ ಎಂದರೆ ಸಾಮಾನ್ಯ ಔಷಧ ವಿಭಾಗ.ನಾವು ಅನಾರೋಗ್ಯಕ್ಕೀಡಾದಾಗ ಮೊದಲು ಸಾಮಾನ್ಯ ಔಷಧಿಯ ವೈದ್ಯರನ್ನು ಭೇಟಿಯಾಗುತ್ತೇವೆ ನಂತರ ಅವಶ್ಯ ಅನುಸಾರ ವಿಶೇಷ ವೈದ್ಯರನ್ನು ಸಂಪರ್ಕಿಸುತ್ತೇವೆ.ಕೆಬಿಎನ್ ವಿವಿಯ ಜನರಲ್ ಮೆಡಸಿನ್ ವಿಭಾಗದಲ್ಲಿ 21 ಜನ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ. ಅತಿ ಹೆಚ್ಚು ನೊಂದಣಿ ಹೊಂದಿರುವ ಸಿ.ಎಂ.ಈ ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಸಂಘಟಕರಿಗೆ ಅಭಿನಂದಿಸಿದರು.
ಈ ಕಾರ್ಯಕ್ರಮದಲ್ಲಿ ಸುಮಾರು 525 ಅಭ್ಯರ್ಥಿಗಳು ಹೆಸರು ನೋಂದಾಯಿಸಿದರು.ಡಾ.ಪಿ ಎಸ್ ಶಂಕರ್,ಡಾ ಎಸ್ ಆರ್ ಹರವಾಲ,ಡಾ ಶಿವರಾಜಲಹೆಟ್ಟಿ ಇವರ ಸಾಧನೆಗಾಗಿ ಸನ್ಮಾನಿಸಲಾಯಿತು.
ಒಂದು ದಿನದ ಈ ಕಾರ್ಯಕ್ರಮದಲ್ಲಿ ಡಾ.ರವಿಕುಮಾರ್ ವಿ.ರಿಯಾಖಾ,
ಡಾ.ಈರಣ್ಣ ಹೀರಾಪುರ,ಡಾ.ಬಿ.ಕೆ.ಸುಂದರ್, ಡಾ.ಪಿ.ಎಸ್.ಶಂಕರ್,ಡಾ ಜೆ ಮೋಹನ್ ಕೃಷ್ಣ,
ಡಾ.ಸಂತೋಷ ಹರ್ಕುಡೆ,ಡಾ ಪೂರ್ಣಿಮಾ ತಡಕಲ್, ಡಾ.ಆನಂದ ಅಂಬ್ಲಿ ವಿವಿಧ ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು.
ನಂತರ ಡಾ.ಶಿವಾನಂದ ಪಾಟೀಲ,ಡಾ.ನಾಗರಾಜ ಕೋಟಿಯ,ಡಾ.ಅಶ್ಫಾಕ್ ಅಹ್ಮದ್ ಪ್ಯಾನೆಲ್ ಚರ್ಚೆಯಲ್ಲಿ ಭಾಗವಹಿಸಿದರು.
ಡಾ ಇರ್ಫಾನ್ ಅಲಿ ನಿರೂಪಿಸಿ,ತಲಾಹ ನಾಥ ಪ್ರಸ್ತುತ ಪಡಿಸಿದರು.ಲಕ್ಸ್ಮಿತಾ ಪ್ರಾರ್ಥಿಸಿದರು.ಸಂಘಟನ ಅಧ್ಯಕ್ಷೆ ಡಾ.ಚಂದ್ರಕಲಾ ಸ್ವಾಗತಿಸಿದರು.ಸಂಘಟನ ಕಾರ್ಯದರ್ಶಿ ಡಾ ಪ್ರಶಾಂತ ವಂದಿಸಿದರು.
ವಿದ್ಯಾರ್ಥಿಗಳಿಗಾಗಿ ನಡೆದ ರಸ ಪ್ರಶ್ನೆ ಕಾರ್ಯಕ್ರಮದಲ್ಲಿ ಎಂ ಆರ್ ಎಂ ಸಿ ಪ್ರಥಮ, ದ್ವಿತೀಯ ಕೆಬಿಎನ್,ತೃತೀಯ ಈ ಎಸ್ ಐ ಹಾಗೂ ಜಿಮ್ಸ 4ನೆಯ ಸ್ಥಾನ ಪಡೆಯಿತು.ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ನಗದು ಬಹುಮಾನ ನೀಡಲಾಯಿತು.
ಪ್ರಭಾರಿ ಕುಲಸಚಿವೆ ಡಾ.ರುಕ್ಸರ್ ಫಾತಿಮಾ, ಮೆಡಿಕಲ್ ಡೀನ್ ಡಾ.ಸಿದ್ದೇಶ್ ಬಿ.ಸಿರ್ವಾರ್,ಪ್ರೊ. ಡಾ.ಸಿಡ್ಲಿಂಗ್ ಚೆಂಗಟಿ ವೈದ್ಯಕೀಯ ಅಧೀಕ್ಷಕ, ರಿಸರ್ಚ್ ಡೀನ್ ರಾಜಶ್ರೀಪಾಲಾದಿ,ಡಾ.ರಾಧಿಕಾ,ಡಾ. ಚಂದ್ರಕಲಾ,ಡಾ.ವಿಜಯ್ ಮೋಹನ್,ಡಾ.ಸತೀಶ್ ಲಹೋಟಿ,ಡಾ.ಸಂಜಯ್ ಚವ್ಹಾಣ್, ಡಾ. ಸುಮಂಗಲಾ ಎಸ್,ಡಾ.ಗುರುಪ್ರಸಾದ್ ಕೆ.ವೈˌಡಾ.ಪ್ರಶಾಂತ್ ಇಡಿ,ಡಾ.ರೇಣುಪ್ರಸಾದ್ ಎಂ.ಸಿ,ಡಾ.ಎಂಡಿ ಮುದಸ್ಸಿರ್ ಸಹಾಯಕ ಪ್ರಾಧ್ಯಾಪಕ,ಡಾ.ಸಾಗರ್ ಬಿರಾದಾರ
ಡಾ.ಶ್ರೀಗೌರಿ ರೆಡ್ಡಿ ಸಹಾಯಕ ಪ್ರಾಧ್ಯಾಪಕರು,ಡಾ.ಎಂ ಮುಷ್ತಾಕ್ ಎಎಸ್.,ಡಾ.ನಾಗರಾಜ ಕೊಟ್ಲಿ ಅಧ್ಯಕ್ಷರು ಎಪಿಐ ಕಲಬುರಗಿ ಅಧ್ಯಾಯ,ಡಾ.ಗಿರೀಶ್ ರೋನಾಡ್,ಡಾ.ಎಂಡಿ ಅಬ್ದುಲ್ ವಹೀದ್,ಡಾ.ಸಿದ್ಧಾಂತ,ಡಾ.ಆನಂದ್ ಶಂಕರ್,ಡಾ.ಹಿಮಾಯತುಲ್ಲಾ ಖಾನ್ ಮುಂತಾದವರು ಹಾಜರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.