ಮುಂಡಗೋಡ:ಬಾಚಣಕಿಯಲ್ಲಿ ನಾಡಬಾಂಬ್
ಸ್ಪೋಟಗೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ಮಟ್ಟದ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಜ್ಜಗೇರಿ ಗ್ರಾಮದ ಭರಮಣ್ಣ ಭೋವಿ (52) ವೃತ್ತಿಯಲ್ಲಿ ರೈತರಾಗಿದ್ದು,ಗುರುವಾರ ಬಾಚಣಕಿ ಕೆರೆಯ ಹತ್ತಿರ ಕುರಿ ಮೇಯಿಸಲು ಹೋದ ವೇಳೆಯಲ್ಲಿ ಅಚಾನಕ್ಕಾಗಿ ವಸ್ತುವೊಂದನ್ನು ಮುಟ್ಟಿದ ವೇಳೆ ಅದು ಸ್ಫೋಟಗೊಂಡು ಕೈಗೆ ತೀವ್ರ ರೀತಿಯ ಗಾಯಗಳಾಗಿದ್ದು,ಎರಡು ಕೈ ಬೆರಳುಗಳು ತುಂಡಾಗಿತ್ತು.
ಮಾಹಿತಿ ಪಡೆದು ಆಗಮಿಸಿದ ಪೊಲೀಸ್ ಜಿಲ್ಲಾವರಿಷ್ಠಾಧಿಕಾರಿ ವಿಷ್ಣುವರ್ದನ ಶುಕ್ರವಾರ ರಾತ್ರಿ ಮಜ್ಜಿಗೇರಿ ಗ್ರಾಮಕ್ಕೆ ಭೇಟಿ ನೀಡಿದರು.ಗಾಯಗೊಂಡ ಭರಮಣ್ಣನ ಆರೋಗ್ಯ ವಿಚಾರಿಸಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು.ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.ಶನಿವಾರ ವಿಧಿವಿಜ್ಞಾನ ಪ್ರಯೋಗಾಲಯ ತಂಡ ಸ್ಪೋಟವಾದ ಸ್ಥಳ ಸಾಕ್ಷ್ಯ ಸಂಗ್ರಹ ಮಾಡಿಕೊಂಡಿದ್ದಾರೆ
ಈ ವೇಳೆ ಸಿಪಿಐ ಬಿ ಎಸ್ ಲೋಕಾಪುರ,ಪಿಎಸೈ ಪರಶುರಾಮ ಮಿರ್ಜಗಿ ಹಾಜರಿದ್ದರು.