ಸಂವಿಧಾನ ಜಾಗೃತಿ ಜಾಥಾ ಯಶಸ್ವಿ
ಲಿಂಗಸುಗೂರು ಪಟ್ಟಣದಲ್ಲಿ ಸಂವಿಧಾನ ಜಾಗೃತಿ ಜಾಥಾ ಫೆಬ್ರುವರಿ 11 ಭಾನುವಾರ ರಾತ್ರಿ 9:00 ಗಂಟೆಗೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾಗೆ ಶಾಲಾ ಮಕ್ಕಳು,ಶಿಕ್ಷಕರು,ಸರಕಾರಿ ನೌಕರರು, ಸಾರ್ವಜನಿಕರು ತಾಲೂಕಿನ ದಲಿತ ಮುಖಂಡರು ಸಂವಿಧಾನ ಜಾಥಾಕ್ಕೆ ಅದ್ದೂರಿಯಾಗಿ ಸ್ವಾಗತಿಸಿದರು. ಅದರಲ್ಲೂ ಮಕ್ಕಳಂತೂ ಕುಂಭಗಳನ್ನು ಹೊತ್ತು ಲಂಬಾಣಿ ಶೈಲಿಯ ಉಡುಪುಗಳನ್ನು ತೊಟ್ಟು ಲಕ್ಷ್ಮಿ ಗುಡಿಯಿಂದ ಗಡಿಯಾರ ಚೌಕದವರಿಗೆ ಮೆರವಣಿಗೆ ಮುಖಾಂತರ ಈ ಅರ್ಥಪೂರ್ಣ ಜಾಥಾಕ್ಕೆ ಮೆರುಗು ತಂದರು.ಗಡಿಯಾರ ಚೌಕದ ಹತ್ತಿರ ಸಾವಿರಾರು ಜನರ ನಡುವೆ ಸಂವಿಧಾನ ಜಾತದ ಬಹಿರಂಗ ಸಭೆ ನಡೆಯಿತು.ಇದೇ ಸಂದರ್ಭದಲ್ಲಿ ಮಕ್ಕಳಿಗೆ ಸನ್ಮಾನ ಮಾಡಲಾಯಿತು.
ಈ ಸಂವಿಧಾನ ಜಾಥಾದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ತಹಶೀಲ್ದಾರ್ ರಾಯನಗೌಡ ರೆಡ್ಡಿ, ಬಿಇಓ ಹುಂಬಣ್ಣ ರಾಥೋಡ್,ಸಮಾಜ ಕಲ್ಯಾಣ ಅಧಿಕಾರಿಗಳು ಎಲ್ಲಾ ಸರ್ಕಾರಿ ನೌಕರರು ಹಾಗೂ ತಾಲೂಕಿನ ದಲಿತ ಮುಖಂಡರಾದ ನಿಂಗಪ್ಪ ಪರಂಗಿ, ಕಾಂಗ್ರೆಸ್ ಮುಖಂಡರಾದ ಎಚ್.ಬಿ.ಮುರಾಜಿ,ಸಿದ್ದಪ್ಪ ಪರಂಗಿ,ಕುಪ್ಪಣ್ಣ ಹೊಸಮನಿ,ಸಂಜೀವಪ್ಪ ಹುನಕುಂಟಿ,ಶಿವಣ್ಣ ಪರಂಗಿ,ಚಿದಾನಂದ ಚಲವಾದಿ, ಪ್ರಭುಲಿಂಗ ಮೇಗಳ ಮನಿ,ಮೋಹನ್ ಗೋಸ್ಲಿ ಮುಂತಾದ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.
ವರದಿ ಬಸವರಾಜ್ ಬಡಿಗೇರ್