ಮಂಗಳೂರು:ಮಂಗಳೂರು ಮಹಾ ನಗರಪಾಲಿಕೆ ಯಿಂದ ಪರವಾನಿಗೆ ಪಡೆದ ಲಕ್ಕಿ ರಮಣ ಮಲ್ಟಿ ಸೇಲ್ಸ್ ಮತ್ತು ಸರ್ವಿಸಸ್ ನ ಕಚೇರಿ ಯಿಂದು ಮುಕ್ಕದಲ್ಲಿ ಗಣ್ಯರು ಜ್ಯೋತಿ ಬೆಳಗುವ ಮೂಲಕ ಶುಭಾರಂಭ ಗೊಂಡಿತು.ಬೆಳಗ್ಗೆ ಹತ್ತು ಗಂಟೆಗೆ ಆಹ್ವಾನಿತ ಗಣ್ಯರಾದ ಡಾ.ಶ್ರೀ ಗಣಪತಿ ಮಯ್ಯ,ಶ್ರೀ ಗಣೇಶ ಐತಾಳ್,ಶ್ರೀಮತಿ.ವೀಣಾ ಟಿ ಶೆಟ್ಟಿ,ಶ್ರೀದೇವಿ ಮತ್ತು ಶ್ರೀ ಉಮೇಶ್ ರಾವ್ ರವರ ದಿವ್ಯ ಹಸ್ತದಿಂದ ದೀಪ ಹಚ್ಚಿ “ಲಕ್ಕಿ ರಮಣ”ವ್ಯಾಪಾರವನ್ನು ಉದ್ಘಾಟನೆಗೊಳಿಸಿ ಶುಭಾಶಯ ಕೋರಿದರು.ಡಾ.ಗಣಪತಿ ಮಯ್ಯರು ತಮ್ಮ ಶುಭಾಶಯದಲ್ಲಿ ಲಕ್ಕಿ ರಮಣ ಸಂಸ್ಥೆಗೆ ಶ್ರೇಯಸ್ಸು ಲಭಿಸಲೆಂದು ಹಾರೈಸಿದರು.ಶ್ರೀ ಗಣೇಶ ಐತಾಳರು ಶುಭಕೋರುತ್ತಾ ಮುಕ್ಕ ವೇಗವಾಗಿ ಬೆಳೆಯುತ್ತಿದ್ದು ಲಕ್ಕಿ ರಮಣದಂತಹ ಸಂಸ್ಥೆಯ ಅಗತ್ಯವಿದೆ,ಆ ನಿಟ್ಟಿನಲ್ಲಿ ಈ ಸಂಸ್ಥೆ ಜನೋಪಯೋಗಿಯಾಗಿ ಬೆಳೆಯಲಿ ಎಂದು ಶುಭಹಾರೈಸಿದರು.ಶ್ರೀಮತಿ ವೀಣಾ ಟಿ ಶೆಟ್ಟಿ ತಮ್ಮ ಶುಭಾಶಯದಲ್ಲಿ ಲಕ್ಕಿ ರಮಣ ತನ್ನ ವ್ಯವಹಾರದೊಂದಿಗೆ ಜನಸೇವೆಯೂ ಮಾಡುವ ಅವಕಾಶವನ್ನು ಗುರುತಿಸಿದರು.ಶ್ರೀಮತಿ ಶ್ರೀದೇವಿ ಮತ್ತು ಉಮೇಶ್ ರಾವ್ ಕೂಡಾ ಸಂಸ್ಥೆ ಉತ್ತಮ ಅಭಿವೃದ್ಧಿ ಹೊಂದಲೆಂದು ಶುಭ ಹಾರೈಸಿದರು. ಮಾಲಕ ಶ್ರೀ ಚಂದ್ರಶೇಖರ ಹೆಬ್ಬಾರ್ ಕೊಲ್ಯ ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.ಶ್ರೀ ಸೂರ್ಯನಾರಾಯಣ ಹೆಬ್ಬಾರ್,ಕಟ್ಟಡ ಮಾಲಕ ಸವಾಂತ್ ಕರ್ಕೇರ ಮತ್ತು ಪರಿಸರದ ಅಂಗಡಿ ಮಾಲಕರು ಉಪಸ್ಥಿತರಿದ್ದರು.
