ಹೌದು ಪ್ರೇಮಿಗಳ ದಿನಾಚರಣೆ ವಿಶ್ವದೆಲ್ಲೆಡೆ ಆಚರಿಸಲಾಗುವ ಒಂದು ಹಬ್ಬ ಇದನ್ನು ಪ್ರತಿ ವರ್ಷ ಫೆಬ್ರವರಿ 14ರಂದು ಆಚರಿಸುತ್ತಾರೆ.ಈ ದಿನ ಪ್ರೇಮಿಗಳು ತಮ್ಮ ಪ್ರೀತಿಯ ಸಂಕೇತವಾಗಿ ಕೆಂಪು ಬಣ್ಣದ ಬಟ್ಟೆಯನ್ನು ತೊಡುತ್ತಾರೆ.
ಪ್ರೇಮಿಗಳ ವಾರ ಶುರುವಾಗಿಯೇ ಬಿಟ್ಟಿದೆ. ಪ್ರತಿಯೊಬ್ಬರೂ ತಮ್ಮ ಪ್ರೀತಿ ಪಾತ್ರರೊಂದಿಗೆ ಈ ವಾರವನ್ನು ಆಚರಿಸಲು ಆರಂಭಿಸಿದ್ದಾರೆ.ಈ ದಿನ ಶುರುವಾಗಿದ್ದಾದರೂ ಹೇಗೆ?ಯಾರಿಂದಾಗಿ ಮತ್ತು ಏಕೆ ಎನ್ನುವ ಬಗ್ಗೆ ನಿಮಗೆ ಗೊತ್ತಿದೆಯೇ?ಪ್ರೀತಿಯ ದಿನದ ಹೊಸ್ತಿಲಲ್ಲಿ ಇರುವಾಗ ಆ ದಿನದ ಮಹತ್ವವನ್ನೂ ತಿಳಿದು ಬರೋಣ ಬನ್ನಿ.
ಪ್ರೇಮಿಗಳ ವಾರವು ಒಟ್ಟು 8 ದಿನಗಳನ್ನು ಒಳಗೊಂಡಿದೆ.
ಪ್ರೇಮಿಗಳ ವಾರದ ಮೊದಲ ದಿನವು ಗುಲಾಬಿ ದಿನದಿಂದ ಪ್ರಾರಂಭವಾಗುತ್ತದೆ ಮತ್ತು ನಂತರ ಪ್ರಪೋಸ್ ಡೇ,ಚಾಕೊಲೇಟ್ ಡೇ,ಟೆಡ್ಡಿ ಡೇ,ಪ್ರಾಮಿಸ್ ಡೇ,ಹಗ್ ಡೇ,ಕಿಸ್ ಡೇ ಮತ್ತು ಫೆಬ್ರವರಿ 14 ರಂದು ವ್ಯಾಲೆಂಟೈನ್ಸ್ ಡೇಯೊಂದಿಗೆ ಕೊನೆಗೊಳ್ಳುತ್ತದೆ.
BOX
ವಿಶ್ವ ಪ್ರೇಮಿಗಳ ದಿನ ನಮ್ಮ ದೇಶದ ಸಂಪ್ರದಾಯವಲ್ಲ,ಆಚರಣೆಗೆ ತಮ್ಮ ವಿರೋಧವಿದೆ. ಸಿಕ್ಕಿ ಹಾಕಿಕೊಂಡರೆ ಮದುವೆ ಮಾಡಿ ಬಿಡುತ್ತೇವೆ ಎಂಬ ಕೆಲವು ಸಂಘಟನೆಗಳ ಧಮ್ಕಿಯಿಂದಲೂ,ಕುಟುಂಬದ ಜೀವ ಬೆದರಿಕೆಯು ಪ್ರೇಮಿಗಳು ಗುಲಾಬಿ ಸಂದೇಶದಿಂದ ದೂರವುಳಿಯುತ್ತಿದ್ದಾರೆ ಎನ್ನುವುದು ಇನ್ನೊಂದು ವಾದ.
ಏನೆಲ್ಲಾ ಕಲರ್‌ಗಳು ಯಾವಾರ್ಥ ಹೊಂದಿವೆ ಗೊತ್ತಾ?ಪ್ರೇಮಿಗಳ ದಿನಾಚರಣೆಯೆಂದು ಸಪ್ತವರ್ಣಗಳಿಗೆ ನಿರ್ದಿಷ್ಟ ಅರ್ಥವಿದೆ,ಅದೆನೆಂದರೆ ಕೆಂಪು ಬಣ್ಣದ ಬಟ್ಟೆ ಧರಿಸಿದರೆ ಪ್ರೇಮಿಗಳಾಗಿದ್ದಾರೆ ಎಂದರ್ಥ,!ಪಿಂಕ್ ಬಣ್ಣ ಪ್ರಪೋಸ್ ಸ್ವೀಕರಿಸಲು ರೆಡಿ,ಗ್ರೀನ್-ವೆಟಿಂಗ್, ಆರೆಂಜ್-ಪ್ರಪೋಸ್‌ಗೆ ರೆಡಿ,ಬಿಳಿ-ಆಲ್ ರೆಡಿ ಬುಕ್ಡ್, ಕಪ್ಪು ಬಣ್ಣ-ರಿಜೆಕ್ಟ್ ಹಾಗೂ ಹಳದಿ ಬಣ್ಣ-ಬ್ರೋಕನ್ ಸಂದೇಶವನ್ನು ತಿಳಿಸುತ್ತವೆಯಂತೆ.ಹೀಗಾಗಿ ಪ್ರೇಮಿಗಳ ದಿನದಂದು ನೀವು ಯಾವ ಕೆಟಗರಿಯಲ್ಲಿ ಇದ್ದೀರಿ, ಯಾವ ಬಣ್ಣದ ಡ್ರೆಸ್ ಹಾಕುತ್ತಿರಾ ಎಂದು ಈಗಲೇ ತೀರ್ಮಾನಿಸಿ ಬಿಡಿ.
BOX
ಫೆ.14 ವಿಶ್ವ ಪ್ರೇಮಿಗಳ ದಿನ.ಹದಿ-ಹರೆಯದಲ್ಲಿ ‘ಐ ಲವ್ ಯೂ’ಎಂದು ನುಡಿಯಲು ಕಾತರಿಸುವ ಹೃದಯಗಳು ಇದಕ್ಕಾಗಿ ಆಯ್ದುಕೊಂಡಿರುವುದು ಹಲವಾರು ವಿಧಾನಗಳು.ಅವುಗಳಲ್ಲಿ ಸಾರ್ವತ್ರಿಕವಾಗಿ ಪ್ರೇಮಿಗಳ ನಡುವೆ ಗುಲಾಬಿ ವಿನಿಮಯವೂ ಒಂದಾದರೆ ಬದಲಾಗುತ್ತಿರುವ ಲವ್ ಟ್ರೆಂಡ್‌ನಲ್ಲಿ ಗುಲಾಬಿ ಕಳೆದು ಹೋಗುತ್ತಿದ್ದು,ಪ್ರೇಮಿಗಳು ಯಾರಿಗೂ ಗೊತ್ತಾಗದ ಹಾಗೆ ವಾಟ್ಸ್ಯಾಪ್‌ನಂತಹ ಸಾಮಾಜಿಕ ಜಾಲತಾಣಗಳ ಮೂಲಕವೇ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿರುವುದು ಹೆಚ್ಚಿದೆ. ಹೀಗಾಗಿ ಗುಲಾಬಿ ಬೇಡಿಕೆ ಕುಸಿದಿದೆ.
ಬಹಿರಂಗವಾಗಿ ಗುಲಾಬಿಯನ್ನು ಸ್ವೀಕರಿಸಿ ಎಲ್ಲಿ ಸಮಾಜದ ಟಾರ್ಗೆಟ್ ಆಗಿ ಬಿಡುತ್ತೇನೆಯೋ ಎಂಬ ಅಂಜಿಕೆ ಹೆಚ್ಚಿನ ಯುವ ಪ್ರೇಮಿಗಳನ್ನು ಕಾಡುತ್ತಿದೆ. ಹೀಗಾಗಿ ಗುಲಾಬಿಯನ್ನು ತೆಗೆದುಕೊಳ್ಳಲು ಹಿಂದೇಟು ಹಾಕಿದರೆ,ಒತ್ತಾಯದಿಂದ ಪಡೆದರೂ ಅದು ಮುಡಿಗೆ ಸೇರದೆ ಬ್ಯಾಗ್‌ನೊಳಗೆ ಅಡಗುವುದು ಹೆಚ್ಚಾಗಿದೆ.
BOX
ವೆಲೈಂಟೇನ್ಸ್ ಡೇಯ ಇತಿಹಾಸ:
ಕ್ರಿ.ಶ.270ರ ಕಾಲದಲ್ಲಿ ರೋಮ್ ಸಾಮ್ರಾಜ್ಯದಲ್ಲಿ ವ್ಯಾಲೆಂಟೈನ್ ಹೆಸರಿನ ಒಬ್ಬ ಶ್ರೇಷ್ಠ ಸಂತನಿದ್ದ ಆಗ ಎರಡನೇ ಕ್ಲಾಡಿಯಸ್ ಹೆಸರಿನ ರಾಜನ ಆಳ್ವಿಕೆಯಿತ್ತು. ಸರ್ವಾಧಿಕಾರಿ ಧೋರಣೆಯಿಂದ ಮೆರೆಯುತ್ತಿದ್ದ,ಆತ ಯಾವೊಬ್ಬ ಸೈನಿಕನಿಕರಿಗೂ ಮದುವೆ ಆಗುವುದಕ್ಕೆ ಬಿಡುತ್ತಿರಲಿಲ್ಲ ಯುವಕರು ಮದುವೆಯಾಗದೆ ಒಬ್ಬಂಟಿಯಾಗಿಯೇ ಇದ್ದರೆ ಯುದ್ಧದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರೆ ಎನ್ನುವ ಆಸೆ ಅವನದ್ದಾಗಿತ್ತು ಇದರಿಂದಾಗಿ ಅನೇಕ ಸೈನಿಕರು ತಮ್ಮ ಪ್ರೀತಿಯನ್ನು ತ್ಯಾಗ ಮಾಡಬೇಕಾಗಿತ್ತು.
ರಾಜನ ಈ ನಿರ್ಧಾರದ ಬಗ್ಗೆ ಆತನ ಆಸ್ಥಾನದಲ್ಲಿದ್ದ ಸಂತ ವ್ಯಾಲೆಂಟೈನ್‌ಗೆ ಅಸಮಾಧಾನವಿತ್ತು ಇಡೀ ಸಾಮ್ರಾಜ್ಯದಲ್ಲಿಯೇ ಈ ನಿರ್ಧಾರದ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದು ವ್ಯಾಲೆಂಟೈನ್ ಮಾತ್ರ.ಅಷ್ಟೇ ಅಲ್ಲದೆ ಆತ ರಾಜನಿಗೆ ತಿಳಿಯದಂತೆ ಸೈನಿಕರನ್ನು ಅವರ ಪ್ರೀತಿ ಪಾತ್ರರೊಂದಿಗೆ ಒಂದುಗೂಡಿಸುವ ಕೆಲಸವನ್ನೂ ಮಾಡುತ್ತಿದ್ದ.ಮದುವೆ ಆಗಬೇಕೆಂದುಕೊಂಡಿದ್ದವರಿಗೆ ರಹಸ್ಯವಾಗಿ ಮದುವೆ ಮಾಡಿಸುತ್ತಿದ್ದ,
ಈ ವಿಚಾರ ಒಂದು ದಿನ ರಾಜ ಕ್ಲಾಡಿಯಸ್‌ಗೆ ಗೊತ್ತಾಗುತ್ತದೆ ರಾಜಧರ್ಮವನ್ನು ಮೀರಿದ ಕಾರಣಕ್ಕೆ ವ್ಯಾಲೆಂಟೈನ್ ಅನ್ನು ಅಪರಾಧಿ ಎಂದು ಘೋಷಿಸಲಾಗುತ್ತದೆ.ಅದೇ ಹಿನ್ನೆಲೆಯಲ್ಲಿ ಆತನನ್ನು ಫೆ.14ರಂದು ಸೆರೆಮನೆಗೆ ಹಾಕಲಾಗುತ್ತದೆ.
ಸೆರೆಮನೆಯಲ್ಲಿ ವಾಸವಿದ್ದ ಸಂತ ವೆಲೆಂಟೈನ್ ಗೆ ಭೇಟಿಯಾಗಲಿಕ್ಕೆ ಪ್ರೇಮಿಗಳು ಎಂದರೆ ಈ ಹಿಂದೆ ಮದುವೆ ಮಾಡಿಸಿದ ಯುವ ಉತ್ಸಾಹಿಗಳು ಬಂದು ಗುಲಾಬಿ ಹೂವನ್ನು ಕೊಟ್ಟು ಮಾತನಾಡಿಸಿ ಹೋಗುತ್ತಿದ್ದರು ಈ ದೃಶ್ಯವನ್ನು ಕ್ಲಾಡಿಯಸ್ ನ ಮಗಳು ವಿಕ್ಷಣೆ ಮಾಡಿ ಪ್ರತಿ ದಿನ ಅವಳು ವೆಲೆಂಟೈನ್ ರವರಿಗೆ ಭೇಟಿಯಾಗುತ್ತಾ,ಮಾತನಾಡಿಸುತ್ತಾ ನಂತರ ಇಬ್ಬರ ನಡುವಿನ ಪ್ರೀತಿ-ವಾತ್ಸಲ್ಯವೇ ಹೆಚ್ಚಾಗುತ್ತೆ ಇದನ್ನು ನೋಡಿದ ರಾಜನಿಗೆ ಸಿಟ್ಟು ಬಂದು ಇವನಿಗೆ ಗಲ್ಲು ಶಿಕ್ಷೆ ವಿಧಿಸಿ ಎಂದು ಆದೇಶಿಸಿದನು ಸರ್ವಾಧಿಕಾರಿಯಾದ ರಾಜ ಕ್ಲಾಡಿಯಸ್ ರವರ ಮಾತಿನ ಆಜ್ಞೆಯಂತೆ ಫೆಬ್ರುವರಿ 14 ರಂದು ವೆಲೆಂಟೈನ ಗೆ ಗಲ್ಲಿಗೇರಿಸಿದರು,ಗಲ್ಲಿಗೇರಿಸಿದ ದಿನವನ್ನು ಪಾಶ್ಚಿಮಾತ್ಯರು ವೆಲೆಂಟೈನ್ ಅಥವಾ ಪ್ರೇಮಿಗಳ ದಿನ ಎಂದು ಆಚರಿಸುತ್ತಾ ಬಂದರು ಇದು ಕಾಲ ಕ್ರಮೇಣ ಈಡಿ ವಿಶ್ವದ ತುಂಬೆಲ್ಲಾ ಇವರ ದಿನವನ್ನು ಆಚರಿಸುತ್ತಾ ವಿಶ್ವ ಪ್ರೇಮಿಗಳ ದಿನ ಎಂದು ಇಂದು ಆಚರಿಸುತ್ತಾ ಬರಲಾಗುತ್ತಿದೆ.
BOX
ಪ್ರಸ್ತುತ ಈ ಜಗತ್ತಿನಲ್ಲಿ ವೆಲೆಂಟೈನ್ ಡೇ ಎಂದರೆ ಕುಡಿದು ಕುಪ್ಪಳಿಸುವುದು,ಬೀರು-ಬ್ರಾಂಡ್,ಕ್ಲಬ್,ಸಿನಿಮಾ, ಥೇಟರ್,ಟ್ರಿಫ್,ಈ ರೀತಿಯಾಗಿ ವೆಲೆಂಟೈನ್ ದಿನದಂದು ದುರ್ನಡತೆಗಳನ್ನು ಮಾಡಿ ಪ್ರೇಮಿಗಳ ದಿನದ ಬೆಲೆಯನ್ನೆ ನೆಲಕಪ್ಪಳಿಸುತ್ತಿದ್ದಾರೆ.
ಯಾವುದೇ ಜಾತಿ,ಮತ,ಪಂಥ,ಬಡವ ಶ್ರೀಮಂತ ಎನ್ನದೇ ಪ್ರತಿ ದಿನ ನಿಮ್ಮ ನಿಮ್ಮ ಪ್ರೇಮಿಗಳನ್ನು ಮೃದುತ್ವ ಭಾವದಿಂದ ನೋಡಿಕೊಂಡರೆ ಇದುವೇ ಪ್ರೇಮಿಗಳ ದಿನ ಹಿಗಾಗಿ ಒಳ್ಳೆಯ ಮನಸ್ಸಿನಿಂದ ಪ್ರೀತಿಸಿದ ಪ್ರೆಯಸ್ಸಿಗೆ ಮದುವೆಯಾಗಿ ಕೊನೆಯವರೆಗೆ ಯಾರು ಪ್ರೀತಿಸುತ್ತಾ ಜೀವನ ಸಾಗಿಸುತ್ತಾರೋ ಅವರು ನಿಜವಾದ ಪ್ರೇಮಿಗಳು.
ರಚನೆ:ಚಂದ್ರಶಾಗೌಡ.ಎಸ್.ಮಾಲಿ ಪಾಟೀಲ್(ಜೇವರ್ಗಿ)