ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಅಂತರಂಗದ ಭಾವದಲೆಗಳು ಕವನ ಸಂಕಲನ ಸಮಾಜಮುಖಿಯಾಗಿದೆ:ಹಾಸಿಂಪೀರ ವಾಲೀಕಾರ

ತಾಳಿಕೋಟೆ:ಮಡಿವಾಳಮ್ಮ ನಾಡಗೌಡ ರಚಿಸಿದ ಅಂತರಂಗದ ಭಾವದಲೆಗಳು ಕವನ ಸಂಕಲನ ಸಮಾಜಮುಖಿಯಾಗಿದೆ.ಒಬ್ಬ ಕವಿ ಹಲವಾರು ಕವನಗಳನ್ನು ರಚಿಸಿ ಪ್ರಕಟಿಸುವುದಕ್ಕೆ ಕವನ ಸಂಕಲನ ಎಂದು ಕರೆಯುತ್ತಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಇಂದು ತಾಲೂಕಿನ ಬಳಗಾನೂರ ಜಿ ಎಂ ಪಿ ಎಸ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅಂತರಂಗದ ಭಾವದಲೆಗಳು ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ಹಾಸಿಂಪೀರ ವಾಲೀಕಾರ ಕವನ ರಚಿಸುವದು ಕ್ಲಿಷ್ಟಕರ ಸಂಗತಿ. ವಿಶೇಷ ಪ್ರತಿಭೆ ಹಾಗೂ ಆಳವಾದ ಜ್ಞಾನ ಹೊಂದಿರುವ ಕ್ರಿಯಾಶೀಲ ವ್ಯಕ್ತಿತ್ವ ಉಳ್ಳವರು ಕವನ ರಚಿಸಲು ಸಾಧ್ಯವಿದೆ.
ಈ ಕವನ ಸಂಕಲನ ಒಟ್ಟು ಅರವತ್ತನಾಲ್ಕು ಕವಿತೆಗಳನ್ನು ಹೊಂದಿದೆ ಮಡಿವಾಳಮ್ಮ ನಾಡಗೌಡ ಉತ್ತಮ ಸಾಹಿತಿ ಹಾಗೂ ಶ್ರೇಷ್ಠ ಶಿಕ್ಷಣ ತಜ್ಞರಾಗಿ ಅವರ ಪ್ರತಿಭೆ ಅನಾವರಣಗಳಳ್ಳುತಿರುವುದು ಅತ್ಯಂತ ಸಂತಸವಾಗಿದೆ ಇಂತಹ ಸಾಹಿತಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ಆಸ್ತಿ ಎಂದರು.
ಸಾಹಿತಿ ಸಿದ್ದನಗೌಡ ಬಿಜ್ಜೂರ ಸರೂರ ಕವನ ಸಂಕಲನ ಪರಿಚಯಿಸಿ ಮಾತನಾಡಿ ಶಿಕ್ಷಕಿ ಮಡಿವಾಳಮ್ಮ ನಾಡಗೌಡ ಗುಣಮಟ್ಟದ ಕವನ ರಚಿಸಿ ಕನ್ನಡ ಸಾಹಿತಿಗಳ ಸಾಲಿನಲ್ಲಿ ನಿಲ್ಲುವ ಅಪರೂಪದ ಕವಿಗಳಾಗಿದ್ದಾರೆ ಕನ್ನಡಮ್ಮ,ಅಮ್ಮ,ಸಾವಿತ್ರಿಭಾಯಿ ಪುಲೆ,ಮರೆಯದ ಮಾಣಿಕ್ಯ,ಸುಂದರ ಶಾಲೆ,ಶಿಕ್ಷಣ ಪ್ರೇಮಿ,ಪುಣ್ಯ ಕ್ಷೇತ್ರ,ಹೆಣ್ಣಿನ ಮಹತ್ವ,ಕಲಿಕೆ,ಯುಗಾದಿ, ಚೆನ್ನಮ್ಮ,ಜೀವನ ಜ್ಯೋತಿ,ಅಂಬಿಗರ ಚೌಡಯ್ಯ, ಶರಣೆ ಹೇಮರೆಡ್ಡಿ ಮಲ್ಲಮ್ಮ,ಮಕ್ಕಳು ಹೀಗಿರಬೇಕು,
ಕನಕದಾಸರು ಹೀಗೆ ಕವನಗಳ ಶೀಷಿ೯ಕೆಯಡಿ ಕವನ ರಚಿಸಿದ್ದು ಸಾಹಿತಿಗಳಿಗೆ,ವಿದ್ಯಾರ್ಥಿಗಳಿಗೆ ಉಪಯುಕ್ತವಾಗುತ್ತದೆ ಎಂದರು.
ಕ್ಷೇತ್ರ ಸಮನ್ವಯ ಅಧಿಕಾರಿ ಯು ಬಿ ಧರಿಕಾರ ಮುಖ್ಯ ಅತಿಥಿಗಳಾಗಿ ಮಾತನಾಡಿ ಕವಿಯು ತನ್ನ ಭಾವನೆಗಳನ್ನು ಹೊರಹಾಕಿ ಅವುಗಳನ್ನು ಕವನ ರೂಪದಲ್ಲಿ ರಚಿಸಿ ಅಂತರಂಗದ ಭಾವದಲೆಗಳು ಎಂಬ ಕವನ ಸಂಕಲನ ಬಿಡುಗೊಂಡಿರುವದು ಜಿಲ್ಲೆಗೆ ಹೆಮ್ಮೆಯ ವಿಷಯ ಎಂದರು.
ಸಾನಿಧ್ಯ ವಹಿಸಿದ್ದ ಪೂಜ್ಯ ಮಂಜುಳಾ ಮಾತಾಜಿ ಮಡಿವಾಳಮ್ಮ ನಾಡಗೌಡ ಕ್ರಿಯಾಶೀಲ ಸಾಹಿತ್ಯ ರಚಿಸುವಲ್ಲಿ ಅತ್ಯಂತ ಪ್ರತಿಭಾವಂತರು ಎಂದರು ಅಧ್ಯಕ್ಷತೆ ಗ್ರಾಮದ ಹಿರಿಯರಾದ ನಿಂಗನಗೌಡ ಪಾಟೀಲ ವಹಿಸಿದ್ದರು.ಪ್ರಾಸ್ತಾವಿಕವಾಗಿ ಕವಿ ಮಡಿವಾಳಮ್ಮ ನಾಡಗೌಡ ಮಾತನಾಡಿದರು.
ಬಸನಗೌಡ ವಠಾರ.
ಮಲ್ಲಣ್ಣ ದೋರನಳ್ಳಿ,ಸಂಗನಗೌಡ ಬಿರಾದಾರ,ಚನ್ನಣ್ಣ ಅಲದಿ,ಎಸ್ ಆಯ್ ಕಡಕೋಳ, ಎಸ್ ಆರ್ ಬಾಗೇವಾಡಿ,ಬಾಲಾಜಿ ಬಿಜಾಪುರ,ಆರ್ ಎಂ ಮುರಾಳ,ಮುತ್ತು ಮನಹಳ್ಳಿ,ಶಿವಲೀಲಾ ಮದರಿಮಠ,ಪ್ರಭುಗೌಡ ಪಾಟೀಲ,ಸವ೯ಮಂಗಲಾ ಹೂಗಾರ,ಬಂದೇನವಾಜ ಮಕಾಂದಾರ,ಅಮರೇಶಗೌಡ ಪಾಟೀಲ,ಬಸವರಾಜ ಜೀರಲಭಾವಿ,ರಮೇಶ ಪೀರಾಪೂರ,ಮಲ್ಲು ಬೊರಗಿ, ಇನ್ನಿತರು ವೇದಿಕೆ ಮೇಲೆ ಆಸೀನರಾಗಿದ್ದರು.ಶಿಕ್ಷಕರಾದ ಶಿವಾನಂದ ಬೈಚಬಾಳ,ಕಾಶಿಭಾಯಿ ಪಾಟೀಲ,ಭೀಮನಗೌಡ ವಜ್ಜಲ,ಚಂದ್ರಕಾಂತ ಬೇದ್ರೇಕರ,ಬುಶೆಟ್ಟಪ್ಪ ಸಜ್ಜನ,ದ್ರಾಕ್ಷಾಯಿಣಿ ಕೆರೂಟಗಿ, ಸಾವಿತ್ರಿ ಹಾಬಾಳ,ನಿಸಾರ ಮೂಕಿಹಾಳ,ನಬಿ ಮಕಾಂದಾರ,ನಿಮ೯ಲ ಕುಮಾರಿ ಎನ್ ಸ್ವಾಗತಿಸಿದರು.ಸಾಹಿತಿ ರಮಜಾನ.ಎಸ್.ವಾಲೀಕಾರ ನಿರೂಪಿಸಿದರು.

ವರದಿ-ಉಸ್ಮಾನ ಬಾಗವಾನ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ