ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ದುಡಿದ ಬಹುಪಾಲು ಸಮಾಜಸೇವೆಗೆ ವಿನಿಯೋಗಿಸಿದ ಹಫೀಜ್ ಮಾದರಿ ವ್ಯಕ್ತಿ:ಬಿ ಎನ್ ರಾಜು

ಕುಂಚ ಕಲಾವಿದ ಹಫೀಜ್ ಉರ್ ರೆಹಮಾನ್ ಸವಿನೆನಪು

ಭದ್ರಾವತಿ:ಎಲ್ಲಾ ವರ್ಗದ ಜನರ ಪ್ರೀತಿಗಳಿಸಿ, ಕಲೆಯನ್ನು ಉಸಿರಾಗಿಸಿಕೊಂಡಿದ್ದ ಕಲಾವಿದ ಹಫೀಜ್,ಕೇವಲ ಕಲಾವಿದನಾಗಿರದೆ ವೃತ್ತಿಯ ನಡುವೆಯೇ ದುಡಿದ ಬಹುಪಾಲು ಹಣ ಸಮಾಜಸೇವೆಗೆ ವಿನಿಯೋಗಿಸಿದ ಮಾದರಿ ವ್ಯಕ್ತಿಯಾಗಿದ್ದಾರೆ.ಹಫೀಜ್ ಕನ್ನಡ ಭಾಷೆಯನ್ನು ಪ್ರೀತಿಸಿ,ಮೈಗೂಡಿಸಿಕೊಂಡಿದ್ದರು ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್.ರಾಜು ನುಡಿದರು.
ನಗರದ ಬಿ.ಎಚ್.ರಸ್ತೆಯ ಕಾಮತ್ ಬೇಕರಿ ಮೇಲ್ಬಾಗದ ಸಭಾಂಗಣದಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ಹಾಗೂ ತಾಲ್ಲೂಕು ಕುಂಚ ಕಲಾವಿದರ ಸಂಘದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕುಂಚ ಕಲಾವಿದ ದಿ.ಹಫೀಜ್ ಉರ್ ರಹ್ ಮಾನ್ ಸವಿನೆನಪು ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದ ಪ್ರಾಮಾಣಿಕ ವ್ಯಕ್ತಿಗಳನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ಶ್ರಮಿಸುತ್ತಿದೆ.ಕಲಾವಿದ ಹಫೀಜ್ ಕೇವಲ ಒಂದು ಸಮಾಜಕ್ಕೆ ಸೀಮಿತವಾಗದೆ ಎಲ್ಲಾ ವರ್ಗದವರ ಜೊತೆ ಬೆರೆತು ಸಮಾಜಸೇವಕರಾಗಿ ಗುರುತಿಸಿಕೊಂಡಿದ್ದಂಥ ವ್ಯಕ್ತಿ.ಮಾಡುವ ವೃತ್ತಿಯಲ್ಲಿ ಕ್ರಿಯಾಶೀಲತೆಯಿಂದ ಗುರುತಿಸಿ ಕೊಂಡಿದ್ದ ವ್ಯಕ್ತಿ ಎಂದರು.
ಹಫೀಜ್ ಕುಂಚ ಕಲಾವಿದರಾದರೂ ಸಮಾಜಸೇವಕರಾಗಿ ಅನೇಕ ಜನಪರ ಕಾರ್ಯಗಳನ್ನು ನಿರ್ವಹಿಸಿ ಸಾಂಸ್ಕೃತಿಕ ವ್ಯಕ್ತಿಯಾಗಿದ್ದರು ಅಲ್ಲದೆ 15ಕ್ಕೂ ಹೆಚ್ಚು ಕೆಲಸಗಾರರಿಗೆ ವೃತ್ತಿ ನೃಪುಣ್ಯತೆ ಕಲಿಸುವುದರ ಜೊತೆಗೆ ಸ್ವಂತ ಉದ್ಯೋಗ ನಡೆಸಲು ತಿಳಿಸಿ ಅನೇಕರ ಮಾರ್ಗದರ್ಶಕರಾಗಿದ್ದರು ಎಂದರು.
ಮುಖಂಡರಾದ ಫೀರ್ ಷರೀಪ್ ಮಾತನಾಡಿ, ಹಫೀಜ್ ರಾಜಕಾರಣಕ್ಕೆ ಹಾತೊರೆಯದ ನಿಸ್ವಾರ್ಥ ಸಮಾಜಸೇವಕ.ಈತ ಗಳಿಸಿರುವ ಜನಬಳಕೆಯ ಆತನ ಅಂತಸ್ತು.ಆಮೀಷಗಳಿಗೆ ಒಳಗಾಗದ ಸಾಜನ್ಯಯುತ ವ್ಯಕ್ತಿ ಎಂದರು.ಶಿಮಕ್ಷಕ ಹಾರೋನಹಳ್ಳಿ ಸ್ವಾಮಿ,ಎಚ್.ಜಿ.ನಾಗೇಶ್, ಧಾರ್ಮಿಕಗುರುಗಳು ಸೇರಿದಂತೆ ಅನೇಕರು ಹಫೀಜ್ ಜೀವನದ ಬಗ್ಗೆ ಸ್ಮರಿಸಿದರು.ಕಾರ್ಯಕ್ರಮದ ಆರಂಭದಲ್ಲಿ ಹಿರಿಯ ಕಾರ್ಮಿಕ ಮುಖಂಡ ಡಿ.ಸಿ.ಮಾಯಣ್ಣ ಹಫೀಜ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಚಾಲನೆ ನೀಡಿದರು.
ವಿ ಐ ಎಸ್ ಎಲ್ ಗುತ್ತಿಗೆ ನೌಕರರ ಕಾರ್ಮಿಕ ಮುಖಂಡ ಅನಂತ ರಾಮು,ಚಲನಚಿತ್ರನಟ ಹಾಗೂ ರಂಗಕರ್ಮಿ ಎಸ್.ಆಂಜನೇಯ,ಮುಖಂಡರುಗಳಾದ ಅಮೀರ್ ಜಾನ್,ಶಶಿಕುಮಾರ್ ಎಸ್ ಗೌಡ, ಬಸವರಾಜಯ್ಯ,ಕುಂಚಕಲಾವಿದರಾದ ಸುಬ್ಬಣ್ಣ, ಮಹಮದ್ ಸಮೀಉಲ್ಲಾ,ಬಿ.ಗುರು,ವಿಷ್ಣು,ಸರ್ಕಾರಿ ನೌಕರರ ಸಂಘದ ಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದು ಹಫೀಜ್ ರವರ ಸಮಾಮುಖಿ ಕೆಲಸವನ್ನು ಸ್ಮರಿಸಿದರು.

ವರದಿ:ಕೆ ಆರ್ ಶಂಕರ್,ಭದ್ರಾವತಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ