ಸೊರಬ:ಪಟ್ಟಣದ ಶ್ರೀ ವಿಠ್ಠಲ ರಾಧಾ ರಖುಮಾಯಿ ದೇವಸ್ಥಾನದಲ್ಲಿ ಬುಧವಾರ ನಾಮದೇವ ಸಿಂಪಿ ಸಮಾಜದ ವತಿಯಿಂದ 11ನೇ ವರ್ಷದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ನಡೆಯಿತು.
ಸಂತ ಕೃಷ್ಣಮೂರ್ತಿ ಬೆನ್ನೂರು ಸಾಗರ ಇವರ ನೇತೃತ್ವದಲ್ಲಿ ಶ್ರೀ ರಾಮಚಂದ್ರ ದೇವಸ್ಥಾನದಿಂದ ಶ್ರೀ ವಿಠ್ಠಲ ಹರಿ ಮಂದಿರಕ್ಕೆ ಪೋತಿ ತರುವುದರ ಮೂಲಕ ಪೋತಿ ಸ್ಥಾಪನೆ,ಶ್ರೀ ವಿಠ್ಠಲ ರಾಧಾ ರಖುಮಾಯಿ ದೇವರಿಗೆ ಎಳನೀರು ಅಭಿಷೇಕ,ಪಂಚಾಮೃತ ಅಭಿಷೇಕ,ವಿಶೇಷ ಅಲಂಕಾರ,ಮಹಾಮಂಗಳಾರತಿ ಹಾಗೂ ಸಂತ ಜ್ಞಾನೇಶ್ವರ ಮಹಾರಾಜರ ಭಾವಚಿತ್ರಕ್ಕೆ ವಿಶೇಷ ಪೂಜೆ ನಡೆಯಿತು ವಾಸುದೇವ ಉಡುಪ ಅವರ ಅರ್ಚಕತ್ವದಲ್ಲಿ ಪೂಜಾ ಕೈಂಕರ್ಯಗಳು ಜರುಗಿದವು.
ಸತ್ಯನಾರಾಯಣರಾವ್ ಕುಂಠೆ ಸಾಗರ ಇವರ ಸಾನಿಧ್ಯದಲ್ಲಿ ಶ್ರೀ ಜ್ಞಾನೇಶ್ವರಿ ಪಾರಾಯಣ ನಂತರ ಸಾಮೂಹಿಕ ಅನ್ನ ಸಂತರ್ಪಣೆ ನಡೆಯಿತು.ಸಂಜೆ ಸಮಾಜದ ಮಹಿಳಾ ಭಜನಾ ಮಂಡಳಿಯವರಿoದ ವಿಷ್ಣು ಸಹಸ್ರನಾಮ ಹರಿಪಾಠ ಪಠಣ ಹಾಗೂ ಸಂತ ಶಿರೋಮಣಿ ಬದರಿನಾಥ್ ಉತ್ತರಕರ್ ಇವರಿಂದ ಪಂಡಿ ಸಂಪ್ರದಾಯದ ಕೀರ್ತನೆ,ಸಂತವಾಣಿ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಂತರಿಂದ ಮತ್ತು ನಾಮದೇವ ಯುವ ಹಾಗೂ ಮಹಿಳಾ ಭಜನಾ ಮಂಡಳಿಯವರಿoದ ಭಜನಾ ಕಾರ್ಯಕ್ರಮ ನಡೆಯಿತು.
ಗುರುವಾರ ಶ್ರೀ ವಿಠ್ಠಲ ರಾಧಾ ರಖುಮಾಯಿ ದೇವರ ದಿಂಡಿ ಉತ್ಸವ ನಡೆಯಲಿದೆ.
ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ಗಿರೀಶ್ ಬಿ ಸೇರಿದಂತೆ ಪದಾಧಿಕಾರಿಗಳು,ಸಂತರು,ಭಕ್ತಾದಿಗಳು, ಸಮಾಜ ಬಾಂಧವರು ಪಾಲ್ಗೊಂಡಿದ್ದರು.
ವರದಿ:ಸಂದೀಪ ಯು.ಎಲ್,