ಗದಗ ಜಿಲ್ಲೆ ರೋಣ ತಾಲೂಕು ಜಿಗಳೂರು ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರ ಜಾತ್ರೆ ಆದಕಾರಣ 10-2-2024
ಶ್ರೀ ಶರಣ ಬಸವೇಶ್ವರ ಪುರಾಣ ಪ್ರವಚನಕಾರರಾದ
ಶ್ರೀಪಂಡಿತ ಎಂ ಕಲ್ಲಿನಾಥ ಶಾಸ್ತ್ರಿಗಳು ವೀರೇಶ್ವರ ಪುಣ್ಯಾಶ್ರಮ “ಪುಟ್ಟರಾಜರ” ಶಿಷ್ಯರು ಗವಾಯಿಗಳು ವೀರೇಶ್ ಮಳಲಿ,ತಬಲಾ ಶಶಿಕುಮಾರ್ ಅಜ್ಜರ ಶಿಷ್ಯರು,ಇವರ ಸಂಗೀತಗಳಿಂದ ಶ್ರೀ ಶರಣ ಬಸವೇಶ್ವರ ಪುರಾಣ ಜಿಗಳೂರು ಗ್ರಾಮದ ಟ್ರಸ್ಟ್ ಕಮಿಟಿ ವತಿಯಿಂದ ನೆರವೇರಿತು.
ಪುರಾಣ,ಪ್ರವಚನ,ಪುಣ್ಯ ಕಥೆ ಅವುಗಳ ನೀತಿ ಸಾರ ಜೀವನದ ಅಳವಡಿಸಿಕೊಂಡಾಗ,ಉತ್ತಮ ಸಂಸ್ಕಾರ ಪ್ರಾಪ್ತಿಯಾಗುತ್ತಿದೆ ಪುರಾಣ ಪ್ರವಚನ ಕೇಳುವುದರಿಂದ ನಿಮ್ಮಲ್ಲಿ ಒಳ್ಳೆಯ ಭಾವನೆ ಬರುತ್ತದೆ ಈಗಿನ ದಿನಮಾನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೂಢನಂಬಿಕೆ ನಂಬುತ್ತಿದ್ದಾರೆ ಇದರಿಂದ ಸಮಾಜದಲ್ಲಿ ನೆಮ್ಮದಿಯ ಜೀವನ ದೂರಾದಂತೆ ಆಗುತ್ತದೆ ಆದ್ದರಿಂದ ಎಲ್ಲರೂ ನೈಜತೆಯ ಜೀವನ ನಡೆಸಬೇಕು.ಮೂಢನಂಬಿಕೆಗೆ ತಲೆ ಕೆಡಿಸಿಕೊಳ್ಳಬಾರದು ಶರಣರ ಸಾಧಕರ ಬಗ್ಗೆ ತಿಳಿದುಕೊಂಡು ಅವರಂತೆ ಜೀವನ ನಡೆಸಲು ಪ್ರಯತ್ನಿಸಬೇಕು ಎಂದು ಆಶುಕವಿ ಪಂಡಿತ್ ಎಂ ಕಲ್ಲಿನಾಥ ಶಾಸ್ತ್ರಿಗಳು ಹೇಳಿದರು.14.2.2024 ತೊಟ್ಟಿಲು ಕಾರ್ಯಕ್ರಮ 15-2024 ಶ್ರೀ ಶರಣಬಸವೇಶ್ವರರಿಗೆ ಹೆಣ್ಣು ನೋಡುವ ಕಾರ್ಯಕ್ರಮ ನಮ್ಮ ಸಂಪ್ರದಾಯ,ನಮ್ಮ ಸಂಸ್ಕೃತಿ ಹಿಂದಿನ ಕಾಲದಲ್ಲಿ ಹೆಣ್ಣು ನೋಡಲು ಹೇಗೆ ಹೋಗುತ್ತಿದ್ದರೋ ಹಾಗೆ ಇವತ್ತು 11 ಜೋಡೆತ್ತುಗಳ ಬಂಡಿ ಹೂಡಿಕೊಂಡು ಬಂದೆವು,ಹೀಗೆ ನಮ್ಮ ಸಾಂಪ್ರದಾಯ ಉಳಿಸೋಣ ಮತ್ತು ಬೆಳೆಸೋಣ,16.2.2024
ಶ್ರೀ ಶರಣಬಸವೇಶ್ವರ ಲಗ್ನ ಮರುದಿನ ರಾಶಿ ಮತ್ತೆ ಮುಂದಿನ ದಿನ ಶ್ರೀ ಶರಣಬಸವೇಶ್ವರ ಅವರ ಉಡುಗೆಗಳು ಮತ್ತೆ ಅವರು ಹೂಡಿದಂತ ಎತ್ತುಗಳು ಕೂರಿಗೆಗಳನ್ನು ಹೂಡುತ್ತಾರೆ.20.2.2024 ರಂದು ಶ್ರೀ ಶರಣಬಸವೇಶ್ವರ ಪುರಾಣ ಮಂಗಲಗೊಳ್ಳುವುದು ಆ ಜಾತ್ರೆ ಅಂಗವಾಗಿ ಡೊಳ್ಳು ಮೇಳದವರಿಂದ ಕುಣಿತ ಆಹಾ!ನೋಡಲು ಎರಡು ಕಣ್ಣು ಸಾಲದು,ಕುಂಭ ಮೆರವಣಿಗೆ ಊರಿನಲ್ಲಿ ಪಲ್ಲಕ್ಕಿ ಉತ್ಸವ ಜರಗುವುದು.
ವರದಿ:ಮಲ್ಲಪ್ಪ ಗೂ ಸೊಂಟಿ