ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಕರ್ನಾಟಕ ಸರ್ಕಾರಕ್ಕೆ ಹೃದಯಸ್ಪರ್ಶಿ ಅಭಿನಂದನೆಗಳು

ವಿಶ್ವವೇ ತನ್ನ ಇತಿಹಾಸದಲ್ಲಿ ಕಂಡರಿಯದ ಅವಿಸ್ಮರಣೀಯ ಧಾರ್ಮಿಕ ಕ್ರಾಂತಿ ಗೈದ ಭೂಮಿ ಕಲ್ಯಾಣ ನಾಡು.12 ನೇ ಶತಮಾನದ ಪವಿತ್ರ ಬಸವಾದಿ ಶರಣರ ಪುಣ್ಯ ಕ್ಷೇತ್ರ.
12ನೆಯ ಶತಮಾನ ಹಲವು ಮನ್ವಂತರಗಳಿಗೆ ಸಾಕ್ಷಿ ರೂಪದ ಸಂದರ್ಭ ಮೇಲ್ವರ್ಗದವರ ಅಟ್ಟಹಾಸ ಉಚ್ಛ್ರಾಯ ಸ್ಥಿತಗೇರಿದ ಕಾಲಘಟ್ಟ,ಉಳ್ಳವರು ಇಲ್ಲದವರ ಮೇಲೆ ನಡೆಸುವ ದೌರ್ಜನ್ಯ ಮಾನವೀಯತೆಯ ಆತ್ಯಂತಿಕ ಕ್ರೂರತನದ ಸಮಯ. ಇಂತಹ ಸಂದರ್ಭದಲ್ಲಿ ಸಮಾಜದಲ್ಲಿ ಮಡುಗಟ್ಟಿದ ಕಾರ್ತಿಕದ ಕತ್ತಲೆಯನ್ನು ಸೀಳಿ ಅವತರಿಸಿದ ಮಾಹಾ ಕ್ರಾಂತಿಪುರುಷರೇ ಅಣ್ಣ ಬಸವಣ್ಣನವರು.
ಅಂದು ಅಣ್ಣ ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಕ್ರಾಂತಿಕಾರಿ ಪರಿವರ್ತನೆಯ ಪಲ್ಲಟಗಳು ಅನೇಕರನ್ನು ತಲ್ಲಣಗೊಳಿಸಿದವು.
ಸಮಾಜದ ಅತ್ಯಂತ ಕಟ್ಟ ಕಡೆಯ ವ್ಯಕ್ತಿಯಿಂದ ಹಿಡಿದು ಮೇಲ್ಬರ್ಗದ ತುಟ್ಟತುದಿಯ ವರೆಗಿನ ವ್ಯಕ್ತಿಯವರೆಗೂ ಕಲ್ಯಾಣ ನಾಡು ಪರಿವರ್ತನೆಯ ಹಸನಾದ ಬೀಡಾದದ್ದು ಇತಿಹಾಸ ಮರೆಯುವಂತಿಲ್ಲ.
ಅಂತೆಯ ಜನಪದರು ಹೇಳುವಂತೆ ಬಸವ ಭಕ್ತಿಯ ಬೀಜ ಬಸವ ಮುಕ್ತಿಯ ತೇಜ ಬಸವ ಕಾಯಕದ ಗುರು ಬೀಜ ಶಿವಮತಕ್ಕೆ ಬಸವನೇ ಸಗ್ಗ ಸೋಪಾನ ಇಲ್ಲದ ಸ್ವರ್ಗ ನರಕಗಳ ಸರಪಳಿ ಹೆಣೆದು ಸ್ವತಂತ್ರ ವಿಚಾರಧಾರೆಗಳನ್ನು ಮೊಟಕುಗೊಳಿಸಿದ ಸಂದರ್ಭದಲ್ಲಿ ಆಚಾರವೇ ಸ್ವರ್ಗ ಅನಾಚಾರವೇ ನರಕಗಳ ವೈಚಾರಿಕತೆಯ ಹರಿಕಾರರಾದುದು ಎಂದೆಂದಿಗೂ ಪ್ರಸ್ತುತ.
ಕಾಯಕ ದಾಸೋಹ ಎನ್ನುವ ಅಸ್ತ್ರವನ್ನು ಹಿಡಿದು ಸಮಾಜದಲ್ಲಿ ನೀಡುವವರುಂಟು ಬೇಡುವವರಿಲ್ಲದಂತೆ ಮಾಡಿದ ಅತ್ಯಂತ ನಿಪುಣ ಆರ್ಥಿಕ ತಜ್ಞ ಪರಿವರ್ತನೆಯ ಪ್ರಭುದ್ಧ ರಾಜಕಾರಣಿ ಬಸವಣ್ಣ.
ಜಾತೀಯತೆ ಎನ್ನುವ ನಿಕೃಷ್ಟ ನೀತಿಯಿಂದ ಸಮಾಜ ಹಾಗೂ ಮಾನವೀಯತೆಯನ್ನು ಸೀಳಿ ಅದರ ಎದೆಯ ಮೇಲೆ ಐಷಾರಾಮಿ ಜೀವನ ಸಾಗಿಸು ಕೆಲವು ವ್ಯಕ್ತಿಗಳು ಹಲವರ ದುಡಿಮೆ ಕೆಲವರಿಗೆ ಪಾಲಾಗುವ ಸಂದರ್ಭವದು.ಜಾತಿಯತೆಯೆಂಬ ಕಾಳ್ಗತ್ತಲೆಯನ್ನು ಸೀಳಿ ಸರ್ವರ ಹಸನಾದ ಬದುಕಿಗೆ ಬೆಳಕಾದ ಬಸವಣ್ಣ ಮಾನವೀಯತೆಯ ಬುನಾದಿಯ‌ ಮೇಲೆ ಸಮಾನವಾದ ಅವಕಾಶ ಕಲ್ಪಿಸಿ ದೇಗುಲ ಸಂಸ್ಕೃತಿ ಶೋಷಣೆಯ ಮಾರ್ಗ,ಅದು ಶೋಷಣೆಯ ಮಾರ್ಗ ಅದರಿಂದ ಯಾರಿಗೂ ಏನೂ ಲಾಭ ಇಲ್ಲ ಎನ್ನುವ ವೈಚಾರಿಕ ವೈಜ್ಞಾನಿಕ ಸತ್ಯ ಸಂಶೋಧಕ ಬಸವಣ್ಣ. ಜನರನ್ನು ಮೌಢ್ಯದ ಕೂಪದಿಂದ ಹೊರತಂದು ಸರ್ವ ಸಮಾನತೆ ಸಾರುವ ಆಧ್ಯಾತ್ಮಿಕತೆಯ ನೆಲೆಯನ್ನು ನಿಜವಾಗಿ ಕಂಡುಕೊಳ್ಳುವ ಅಂಗವನ್ನೇ ಲಿಂಗವನ್ನಾಗಿಸುವ ಇಷ್ಟ ಲಿಂಗವನ್ನು ಸರ್ವರಿಗೂ ಧರಿಸುವ ಮೂಲಕ ಸಮಾನತೆಯ ಸಮಾಜವನ್ನು ಕಟ್ಟಿದವರು.ಈ ಮೂಲಕ ವ್ಯಕ್ತಿ ಹಾಗೂ ಸಮಷ್ಠಿಯ ನಡುವಿನ ಅಂತರವನ್ನು ಕಡಿಮೆಗೊಳಿಸಿದವರು.
ಹೆಣ್ಣು ಅಸ್ಪೃಶ್ಯಗಳು ಅವಳು ಕೇವಲ ಗಂಡನ ಮಕ್ಕಳ ಓಲೈಕೆಗೆ ಮಾತ್ರ ಇರುವ ಸಾಧನ ಎಂಬ ಪರಿಕಲ್ಪನೆ ಹೊತ್ತ ಭ್ರಾಂತಿ ಕವಿದ ಸಮಾಜದಿಂದ ಹೊರ ತಂದು ಗಂಡಿಗೂ ಹೆಣ್ಣಿಗೂ ಸಮಾನ ಅವಕಾಶ ಕಲ್ಪಿಸಿದ ಸ್ತ್ರೀ ಕುಲೋದ್ಧಾರಕ ಬಸವಣ್ಣನವರು.
ಏಕಕಾಲಕ್ಕೆ 770 ಅಮರ ಗಣಂಗಳು ಲಕ್ಷದ 96,000 ಚರ ಜಂಗಮರನ್ನು ರೂಪಿಸಿ ಇತಿಹಾಸವೇ ನಿಬ್ಬೆರಗಾಗುವಂತೆ ವೈಚಾರಿಕವಾದ ವೈಜ್ಞಾನಿಕವಾದ ಲಿಂಗಾಯತ ಧರ್ಮದ ಸ್ಥಾಪಿಸಿದರು.
ನಡೆದಂತೆ ನುಡಿದ ಹಸನಾದ ಬದುಕಿಗೆ ಉತ್ತಮ ಸಮಾಜಕ್ಕೆ ಸಮಾನತೆ ಹಾಗೂ ಶಾಂತಿಯ ಸೂತ್ರಗಳನ್ನು ಹೊತ್ತು ನಿಂತ ಅಮೂಲ್ಯವಾದ ರತ್ನಗಳ ಖಣಿಯೇ ವಚನ ಸಾಹಿತ್ಯ.
ಇಂತಹ ವಚನಗಳು 280 ಕೋಟಿ ಎನ್ನುವ ದಾಖಲೆಯ ಒಂದು ವಚನವಿದೆ.ಆದರೆ ನಮಗೀಗ ದೊರೆತಿರುವುದು ಮೂವತ್ತು ಸಾವಿರದ ಆಸು ಪಾಸಿನಲ್ಲಿ.
ಇಂದಿನ ತಲ್ಲಣಗೊಂಡ ವಿಶ್ವಕ್ಕೆ ಸಾರ್ವಕಾಲಿಕವಾದ ಎಂದೆಂದಿಗೂ ಪ್ರಸ್ತುತವಾದ ಅಂಶಗಳನ್ನು ಹೊತ್ತು ನಿಂತ,ಹಸನಾದ ಬದುಕಿಗೆ ಬೇಕಾದ ಸರ್ವಾಂಗೀಣ ತಲೆಯನ್ನು ಗರ್ಭಿಕರಿಸಿಕೊಂಡ ವಚನಗಳಿಗೆ ಸರಿಸಾಟಿಯಾದ ಸಾಹಿತ್ಯ ಇನ್ನೊಂದಿಲ್ಲ ಎಂದರೆ ಅತಿಶಯೋಕ್ತಿಯೇನಲ್ಲ.
ಏಕಕಾಲಕ್ಕೆ ಕನ್ನಡದ ಅಕ್ಷರ ಕ್ರಾಂತಿಯನ್ನು ಗೈಯ್ದು ಕಸಗುಡಿಸುವ ವ್ಯಕ್ತಿಯಿಂದ ಹಿಡಿದು ಶಾಸ್ತ್ರ ಪಾರಂಗತ ವಿದ್ವತ್ ಪೂರ್ಣ ವ್ಯಕ್ತಿಗಳ ವರೆಗೆ,ಎಲ್ಲರೂ ಅಚ್ಚ ಕನ್ನಡದಲ್ಲಿ ಯಾವ ಕವಿ ಇತಿಹಾಸಕಾರನು ಬಳಸದ ವಿಶೇಷ ಪದ ಪ್ರಯೋಗಗಳ ಮೂಲಕ ಕನ್ನಡಸಾಹಿತ್ಯಕ್ಕೆ ವಚನವೆಂಬ ವಿಶೇಷವಾದ ಕೊಡುಗೆ ನೀಡುವ ಮೂಲಕ ಮುಕುಟ ಮಣಿಯಾದವರು 12ನೆಯ ಶತಮಾನದ ವಚನಕಾರರು..
ಇಂತಹ ಹಲವು ವಿಶೇಷತೆಗಳಿಂದ ಸಮಾಜದಲ್ಲಿ ವಿಭಿನ್ನರಾಗಿ ರೂಪುಗೊಂಡ ಶರಣಸಂಕುಲಕ್ಕೆ ಮಾದರಿಪುರುಷ ಮುಂದಾಳು ವಿಶ್ವಗುರು ಬಸವಣ್ಣ.
ಇಂಥ ಮಹಾನ್ ಪುರುಷನ ವ್ಯಕ್ತಿತ್ವ ಎಂದೋ ಅನಾವರಣಗೊಳ್ಳಬೇಕಿತ್ತು ತಡವಾದರೂ ಸರಿ ಇಂದಿನ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ಕನ್ನಡದ ಜನತೆಗೆ,ಬಸವ ತತ್ವ ನಿಷ್ಠರಿಗೆ, ಬಸವಾಭಿಮಾನಿಗಳಿಗೆ ಅತ್ಯಂತ ಹರ್ಷವನ್ನುಂಟು ಮಾಡಿದೆ ಎಂದು ಹೆಮ್ಮೆಯಿಂದ ಹೇಳುತ್ತೇವೆ.ಇನ್ನು
ಬಸವಣ್ಣನವರ ಭಾವಚಿತ್ರದ ಅಡಿಬರಹ ಕನ್ನಡ ಸಾಂಸ್ಕೃತಿಕ ನಾಯಕ ಎಂಬ ಅಡಿಬರಹ ಹಾಕಿಸುವ ವಿಶೇಷ ಆದೇಶ ನೀಡಿ,ಐತಿಹಾಸಿಕ ಸಾರ್ಥಕ ಕಾರ್ಯವನ್ನು ಕೈಗೊಂಡ ಘನ ಕರ್ನಾಟಕ ಸರ್ಕಾರಕ್ಕೆ ಹೃದಯಸ್ಪರ್ಶಿ ಅಭಿನಂದಿಸುತ್ತೇವೆ.
ಶರಣು ಶರಣಾರ್ಥಿ

-ಸಂಗಮೇಶ ಎನ್ ಜವಾದಿ.
ಬಸವಾಭಿಮಾನಿ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ