ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಸಮಾಜದ ಶ್ರೇಷ್ಠತೆಗೆ ಶ್ರಮಿಸಿದ ಮಹಾನ್ ಯುಗಪುರುಷ ಸವಿತಾ ಮಹರ್ಷಿ-ಸತೀಶ್

ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದ ತಾಲೂಕ ಕಛೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಸವಿತಾ ಮಹರ್ಷಿಯವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.ಶ್ರೀಮತಿ ಲೀಲಾ ಎಸ್ ತಹಶೀಲ್ದಾರ್ ಗ್ರೇಡ್-2 ಇವರು ಪುಪ್ಪಾರ್ಚನೆ ಮಾಡಿ ಚಾಲನೆ ನೀಡಿದರು.
ಸಮಾಜದ ಮುಖಂಡರಾದ ಸತೀಶ್ ಇವರು ಮಾತನಾಡಿ ಸವಿತಾ ಮಹರ್ಷಿಯವರು ನಮ್ಮ ಕ್ಷೌರಿಕ ಸಮಾಜದ ಮೂಲ ಪುರುಷರು.ರಥ ಸಪ್ತಮಿಯ ದಿನ ಮಾಘ ಮಾಸದ ಶುಕ್ಲಪಕ್ಷದಲ್ಲಿ ಜನಿಸಿದರು.ಎರಡು ಸಾವಿರ ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಸವಿತಾ ಸಮಾಜ ತನ್ನ ಸೇವಾ ಕಾರ್ಯದಿಂದಲೇ ಹೆಸರುವಾಸಿಯಾಗಿದೆ.ಅನೇಕ ಶಾಸನಗಳಲ್ಲಿ ಸವಿತಾ ಸಮಾಜದವರು ಉಪಯೋಗಿಸುವ ಸಾಧನಗಳಾದ ಕತ್ತಿ,ಕನ್ನಡಿ ಹಾಗೂ ಕತ್ತರಿಗಳನ್ನು ಕೆತ್ತಲಾಗಿದೆ.
ಪುರಾಣ ಐತಿಹ್ಯಗಳ ಪ್ರಕಾರ ಶಿವನ ಬಲಗಣ್ಣಿನಿಂದ ಸವಿತಾ ಮಹರ್ಷಿಯವರು ಜನಿಸಿದರು.ಇವರು ಅಪಾರ ಜ್ಞಾನಭಂಡಾರ ಹೊಂದಿದ್ದು ಚತುರ್ವೇದಗಳಲ್ಲಿ ಸಾಮವೇಧವನ್ನು ಬರೆದಿದ್ದಾರೆ. ಜಗತ್ತು ರಕ್ಷಿಸಿ ನಡೆಸುವವನೇ ಸವಿತಾ ಎಂದು ಪುರಾಣಗಳಲ್ಲಿದೆ.ಆಯುರ್ವೇದ ಪಂಡಿತರು ಸಹಾ ಆಗಿದ್ದು,ಸಮಾಜದ ಅನಾರೋಗ್ಯ ಪೀಡಿತ ರೋಗಿಗಳಿಗೆ ಔಷದೋಪಚಾರ ನೀಡಿ ರಕ್ಷಿಸಿದ್ದಾರೆ. ಸಂಗೀತ ಜ್ಞಾನವನ್ನು ಹೊಂದಿದ್ದು,ಅವರ ಮಾರ್ಗದರ್ಶನದಂತೆ ಇಂದಿಗೂ ಕೂಡಲ ಸವಿತಾ ಸಮಾಜದವರು ಮದುವೆ,ಮುಂಜಿ ಮುಂತಾದ ಮಂಗಳ ಕಾರ್ಯಗಳಲ್ಲಿ ಸಂಗೀತ ವಾದ್ಯಗಳನ್ನು ನುಡಿಸುವುದನ್ನು ಮುಂದುವರಿಸಿದ್ದಾರೆ.ಜನಿಸಿದ ಮಗುವಿನ ಕರ್ಮವನ್ನು ಜವಳ ತೆಗೆಯುವ ಮೂಲಕ ಕಳೆಯುತ್ತೇವೆ.ಹೀಗಾಗಿ ವ್ಯಕ್ತಿಯ ಹುಟ್ಟಿನಿಂದ ಅವನಿರುವವರೆಗೂ ನಮ್ಮ ಕಾಯಕದ ಮೂಲಕ ಜಾತಿರಹಿತವಾಗಿ ಕಾರ್ಯ ನಿರ್ವಹಿಸುತ್ತೇವೆ ಎಂದರು.
ಈ ಸಮಯದಲ್ಲಿ ಕಛೇರಿಯ ಉಪತಹಶೀಲ್ದಾರರಾದ ಅನ್ನದಾನೇಶ ಬಿ ಪತ್ತಾರ,ಸಿರಾಜ್ ವುದ್ದೀನ್, ದೇವರಾಜ ಅರಸು,ಸುಧಾ ಜೈನರ್,ವಿಷಯ ನಿರ್ವಾಹಕ ವಿಜಯಕುಮಾರ ಪುಟಾಣಿ ಹಾಗೂ ಸಿಬ್ಬಂದಿಯವರು ಸವಿತಾ ಸವಿತಾ ಸಮಾಜದ ಅಧ್ಯಕ್ಷರಾದ ರಮೇಶ.ಬಿ,ಮುಖಂಡರಾದ ಹರ್ಷವರ್ಧನ,ಸುಧೀರ, ಶ್ರೀನಿವಾಸ,ಪ್ರಶಾಂತ, ಹನುಮಂತ ಹೆಚ್,ಸತೀಶ್,ಅಂಜಿನಪ್ಪ,ಮಹೇಂದ್ರ ಮೆಜಸ್ಟಿಕ್ ಭಾಗವಹಿಸಿದ್ದರು.ಸಿ ಮ ಗುರುಬಸವರಾಜ ಸ್ವಾಗತಿಸಿ ನಿರೂಪಿಸಿದರು.

ವರದಿ:ವೈ.ಮಹೇಶ್ ಕುಮಾರ್,ಕೊಟ್ಟೂರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ