ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ
ಸವಿತಾ ಮಹಾಋಷಿ ಜಯಂತಿಯನ್ನು ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ತಾಲೂಕು ಹಬ್ಬಗಳ ಆಚರಣೆ ಸಮಿತಿಯ ಅಧ್ಯಕ್ಷರು ಆಡಳಿತ ತಾಲೂಕು ದಂಡಾಧಿಕಾರಿಗಳು ಶ್ರೀಸವಿತಾ ಮಹಾಋಷಿ ಜಯಂತಿಯನ್ನು ಸವಿತಾ ಮಹರ್ಷಿ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ ಪೂಜಾ ವಿಧಿವಿಧಾನಗಳನ್ನು ನಡೆಸಿಕೊಟ್ಟರು.ಸ್ವಾಗತ ಭಾಷಣವನ್ನು ರವಿ ಕುಮಾರ್ ನೆರವೇರಿಸಿದರು ಉಪನ್ಯಾಸವನ್ನು ಸರ್ಕಾರಿ ಕಾಲೇಜಿನ ಉಪನ್ಯಾಸಕರಾದ ಶ್ರೀನಿವಾಸ್ ಎನ್ ಉಪನ್ಯಾಸ ನಡೆಸಿಕೊಟ್ಟರು,ಶ್ರೀ ಸವಿತಾ ಮಹಾಋಷಿಗಳು ನಡೆದು ಬಂದ ದಾರಿ ಅವರ ಕುರಿತಾಗಿ ಇವರ ಬಗ್ಗೆ ಜಯಂತಿಯನ್ನು ರಥಸಪ್ತಸಪ್ತಮಿ ಎಂದು ಏಕೆ ಆಚರಿಸುತ್ತೇವೆ ಸವಿತಾ ಮಹಾಋಷಿ ಎಂದು ಏಕೆ ಕರೆಯುತ್ತಾರೆ ಎನ್ನುವ ಬಗ್ಗೆ ಉಪನ್ಯಾಸ ನೀಡಿದರು.ಶಿವನು ಬ್ರಹ್ಮ ನಿಂದ ವರಪಡೆಯಲು ತಪಸ್ಸು ಯಜ್ಞಾದಿ ಮಾಡುವ ಸಮಯದಲ್ಲಿ ಕೆಲವು ವರ್ಷಗಳಾದವು ಸಮಯದಲ್ಲಿ ಶಿವನ ಗಡ್ಡ ಮತ್ತು ಮೀಸೆ ಅಗ್ನಿಗೆ ಸ್ಪರ್ಶ ಆಗುವುದನ್ನು ನೋಡಿದ ಪಾರ್ವತಿ ದೇವಿಯು ಶಿವನ ತಪಸ್ಸು ಭಂಗವಾಗುತ್ತದೆ ಎಂದು ತಿಳಿದು ಶಿವನ ಪಕ್ಕದಲ್ಲಿ ಕುಳಿತಿದ್ದ ಪಾರ್ವತಿ ದೇವಿಯು ಶಿವನ ಬಲಗಣ್ಣಿನ ರೆಪ್ಪೆಯ ಒಂದು ಕೂದಲನ್ನು ತೆಗೆದುಕೊಂಡು ಒಬ್ಬ ಮಹಾ ಜ್ಞಾನಿಗೆ ಜನ್ಮ ಕೊಟ್ಟಳು ತಪಸ್ಸು ಮುಗಿದ ನಂತರ ಶಿವನ ಮೀಸೆ,ಗಡ್ಡ ಶುಚಿಗೊಳಿಸಿದವರು ಯಾರು ಎಂದು ಕೇಳಿದಾಗ ಪಾರ್ವತಿ ದೇವಿಯು ಶಿವನಿಗೆ ವಿವರವನ್ನು ತಿಳಿಸುತ್ತಾಳೆ ಇದನ್ನು ಕೇಳಿದ ಶಿವನು ಸವಿತಾ ಮಹರ್ಷಿಯನ್ನು ನೋಡಿ ಇವರಿಗೆ ವರವನ್ನು ದಯಪಾಲಿಸಿದರನ್ನು ಅದು ಏನೆಂದರೆ ಕೂದಲು ಶುಚಿಗೊಳಿಸುವ ಸಮಾಜಕ್ಕೆ ಸವಿತಾ ಸಮಾಜ ಇದರ ಮೂಲಪುರುಷ ನೀನೇ ಆಗಬೇಕು ನಿನಗೆ ಐದು ವರಗಳನ್ನು ಕೊಡುತ್ತೇನೆ ನಾಗಸ್ವರ,ಡೊಳ್ಳು,ಬ್ರಹ್ಮ ಜ್ಞಾನವನ್ನು,ಯಜುರ್ವೇದ,ಸಾಮವೇದ,ಗಿಡಮೂಲಿಕೆಯ ಪಾಂಡಿತ್ಯ ಹೊಂದಲಿ ಅಂದು ಸಪ್ತಮಿಯಂದು ಪ್ರತಿ ವರ್ಷ ರಥಸಪ್ತಮಿ ಎಂದು ನಾಡು ಆಚರಿಸಲಿ ಅದೇ ರೀತಿ ನಿನ್ನ ಬಳಿ ಐದು ವಸ್ತುಗಳು ಇರಲಿ ಸವಿತಾ ಮಹಾಋಷಿ ಕೈಯಲ್ಲಿ ವೇದ ವೀಣೆ ಇನ್ನೊಂದು ಕೈಯಲ್ಲಿ ಜಪಮಾಲೆ ಮತ್ತೊಂದು ಕೈಯಲ್ಲಿ ಅಮೃತದ ಕುಂಡ ಇನ್ನೊಂದು ಕೈಯಲ್ಲಿ ಪದ್ಮ ಕಮಲ ಮುಂದೆ ಹಂಸ ಮತ್ತೊಂದು ನಾದಸ್ವರ ಡೋಲು ಇವರ ಪರಿಕರಿಗಳು ಇಂಥ ಒಂದು ಜಾತಿಯಲ್ಲಿ ಹುಟ್ಟಿದ ನಾವುಗಳು ನಿಜಕ್ಕೂ ಪರಮಾತ್ಮನಿಗೆ ಪ್ರಿಯವಾದ ಸಮಾಜವೆಂದರೆ ಅದು ಸವಿತಾ ಸಮಾಜ ಎಂದು ಹೆಮ್ಮೆಯಿಂದ ಹೇಳುತ್ತೇವೆ ಸವಿತಾ ಮಹಾಋಷಿಯ ಬಗ್ಗೆ ಉಪನ್ಯಾಸ ನೀಡಿರುವುದು ಅದು ನನ್ನ ಭಾಗ್ಯ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು ತಹಸೀಲ್ದಾರ್ ಪಟ್ಟರಾಜ್ ಗೌಡ್ರು ಮಾತನಾಡಿ ನಾವು ಇಷ್ಟು ಚಂದವಾಗಿ ಕಾಣಲು ಸವಿತಾ ಸಮಾಜದವರೇ ಕಾರಣ ಅವರ ಸೇವೆ ಅನನ್ಯ ಇಲ್ಲವಾದರೆ ನಾವು ಕುರೂಪಿಗಳಾಗುತ್ತಿದ್ದೆವು ಎಂದು ಡಿಸಿಸಿ ಬ್ಯಾಂಕ್ ನ ನಿರ್ದೇಶಕರು ಮತ್ತು ಶಾಸಕರ ಪುತ್ರರಾದ ಸುರೇಂದ್ರಗೋಡು ಮಾತನಾಡಿ ತಂದೆಯವರು ಬೆಂಗಳೂರು ಅಧಿವೇಶನದಲ್ಲಿರುವ ಪ್ರಯುಕ್ತ ನಮಗೆ ಕರೆ ಮಾಡಿದ್ದರು ಅವರ ಬದಲು ನಾನು ಬಂದಿದ್ದೇನೆ ನಿಮ್ಮ ಸಮಾಜದ ಏಳಿಗೆಗೆ ನಾವು ಎಂದಿಗೂ ಭದ್ರವಾಗಿರುತ್ತೇವೆ ಇನ್ನೊಬ್ಬರು ಕಾಂಗ್ರೆಸ್ ಮುಖಂಡರಾದ ಬಿ ಸಿದ್ದಪ್ಪ ಮಾತನಾಡಿ ಒಗ್ಗಟ್ಟು ಪ್ರದರ್ಶನ ಮಾಡಬೇಕೆಂದರೆ ಅದು ಸವಿತಾ ಸಮಾಜ ಬಿಟ್ಟರೆ ಯಾವುದು ಇನ್ನೊಂದು ಇಲ್ಲ ಯಾವುದೇ ಶುಭ ಅಶುಭ ಸಮಾರಂಭಗಳಾಗಲಿ,ಸಾಮೂಹಿಕವಾಗಿ ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಕಾರ್ಯಕ್ರಮ ಯಶಸ್ವಿ ಮಾಡುವದರಲ್ಲಿ ಮೊದಲನೆಯ ಪಾತ್ರ ಇದೆ ಮತ್ತು ನಿಮ್ಮ ಮಕ್ಕಳನ್ನು ಅಜ್ಜ ಮಾಡಿದ ಆಲದಮರ ಅಂದಹಾಗೆ ನಿಮ್ಮ ವೃತ್ತಿ ಜೊತೆಗೆ ಶಿಕ್ಷಣ,ರಾಜಕೀಯ ಇನ್ನು ಅನೇಕ ವ್ಯವಹಾರ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿ ಸವಿತಾ ಸಮಾಜದವರು ಕಷ್ಟಜೀವಿಗಳು ಕಸುಬು ಅದನ್ನೇ ಅವಲಂಬಿತರಾಗಿದ್ದಾರೆ ಎಂದರು.ವಿಭಾಗ ಅಧಿಕಾರಿ ಮಾತನಾಡಿ ದೊಡ್ಡ ದೊಡ್ಡ ಪಟ್ಟಣದಲ್ಲಿ ಸಲೂನ್ ಗಳಿಗೆ ಹೋದರೆ ಯಾವುದೋ ದೇಶಕ್ಕೆ ಹೋದಾಗ ಆಗುತ್ತದೆ ಆ ರೀತಿ ನವೀನ ರೀತಿಯಲ್ಲಿ ಅಲಂಕರಿಸಿದ್ದಾರೆ ಅವರೇ ಇಲ್ಲವಾದರೆ ನಾವುಗಳು ಹುಟ್ಟಿನಿಂದಲೂ ಶುಭ ಸಮಾರಂಭದಿಂದ ಹಿಡಿದು ಇನ್ನು ಇತರೆ ಸಮಾರಂಭಕ್ಕೂ ಸವಿತಾ ಸಮಾಜದವರು ಬೇಕೇ ಬೇಕಾಗುತ್ತದೆ ಎನ್ನುತ್ತಾರೆ ಜಯಂತಿಯ ಅಧ್ಯಕ್ಷತೆ ವಹಿಸಿದ್ದ ಉಪ ವಿಭಾಗಾಧಿಕಾರಿ ತಿಮ್ಮಣ್ಣ ಹುಲ್ಮನಿ.ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ನಾಗರಾಜ್ ಟೌನ್ ಅಧ್ಯಕ್ಷರಾದ ಗೋವಿಂದರಾಜ್ ಇನ್ನೂ ಅನೇಕ ಮುಖಂಡರು ಭಾಗಿಯಾಗಿದ್ದರು.
ವರದಿ ಪ್ರಭಾಕರ ಡಿ ಎಂ ಹೊನ್ನಾಳಿ