ಸೊರಬ:ತಾಲೂಕು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಫೆಬ್ರವರಿ 18ರ ಭಾನುವಾರ ಬೆಳಗ್ಗೆ 9:30ಕ್ಕೆ ಸೊರಬ ಪಟ್ಟಣದ ನಾಮದೇವ ಸಭಾಭವನದಲ್ಲಿ ಎಂಟನೇ ವರ್ಷದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ತಾಲೂಕು ಅಧ್ಯಕ್ಷ ಉಮಾಕಾಂತ ಬಿ ಗೌಡ ನೆಲ್ಲೂರು ತಿಳಿಸಿದ್ದಾರೆ.
ಪಟ್ಟಣದಲ್ಲಿ ಕರುನಾಡ ಕಂದ ನ್ಯೂಸ್ ನೊಂದಿಗೆ ಮಾತನಾಡಿದ ಅವರು,ಮಿರ್ಜಾನ ಆದಿಚುಂಚನಗಿರಿ ಶಾಖಾ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದ್ದು,ಮುಖ್ಯ ಅತಿಥಿಗಳಾಗಿ ಸಚಿವ ಮಧು ಬಂಗಾರಪ್ಪ,ಧರ್ಮದರ್ಶಿ ಗೋವಿಂದ ಪಿ ಗೌಡ,ಪತ್ರಕರ್ತ ಕೆ.ಎಸ್ ಭಾಸ್ಕರ್ ಶೆಟ್ಟಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಧರ್ಮೇಶ್ ಸಿರಿಬೈಲ್ ಸೇರಿದಂತೆ ಶಿವಮೊಗ್ಗ, ಭದ್ರಾವತಿ,ತೀರ್ಥಹಳ್ಳಿ,ಹೊಸನಗರ,ಸಾಗರ,ರಿಪ್ಪನಪೇಟೆ,ಶಿಕಾರಿಪುರ,ಸಿರಸಿ,ಸಿದ್ದಾಪುರ,ಯಲ್ಲಾಪುರ, ಕುಮಟಾ ತಾಲೂಕುಗಳ ಒಕ್ಕಲಿಗರ ಸಂಘದ ಅಧ್ಯಕ್ಷರು ಹಾಗೂ ಉಪನ್ಯಾಸಕ ಡಾಕ್ಟರ್ ಉಮೇಶ್ ಭದ್ರಾಪುರ ಹಾಗೂ ಪ್ರಾಂಶುಪಾಲ ಘನಶಾಮ್ ಹಿರೇಚೌಟಿ ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.
ವಿಶ್ರಾಂತ ಮುಖ್ಯ ಅಧ್ಯಾಪಕ ಎಂ.ಟಿ ಗೌಡ ಕುಮಟಾ ಅವರಿಂದ ಸಮುದಾಯ ಸಂಘಟನೆಯಲ್ಲಿ ಸಮಾಜ ಬಾಂಧವರ ಪಾಲ್ಗೊಳ್ಳುವಿಕೆ ಕುರಿತು ಉಪನ್ಯಾಸ ನಡೆಯಲಿದ್ದು,ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಮತ್ತು ನೂತನ ಸರ್ಕಾರಿ ನೌಕರರಿಗೆ ಹಾಗೂ ಪ್ರಗತಿಪರ ಕೃಷಿಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮಕ್ಕೆ ಸಮಾಜ ಬಾಂಧವರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿಕೊಡುವಂತೆ ಕೋರಿದ್ದಾರೆ.
ವರದಿ-ಸಂದೀಪ ಯು.ಎಲ್,ಕರುನಾಡ ಕಂದ ನ್ಯೂಸ್, ಸೊರಬ