ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ವ್ಯಾಪ್ತಿಯ ಯಕ್ತಾಪೂರ ಗ್ರಾಮದ ಶ್ರೀ ಗುತ್ತಿ ಬಸವೇಶ್ವರ ದೇವಸ್ಥಾನವು ಮುಜರಾಯಿ ಇಲಾಖೆಗೆ ಸಂಬಂಧಪಟ್ಟಿರುತ್ತದೆ ಆದರೂ ದೇವಸ್ಥಾನದ ಗರ್ಭಗುಡಿಯ ಸುತ್ತ ಮುತ್ತಲಿನ ಹಳೇ ಕಟ್ಟದ ಮೇಲ್ಚಾವಣಿಯು ಶಿಥಿಲಾವಸ್ಥೆಯಲ್ಲಿದೆ.
ಸ್ಥಾನಿಕ ಸ್ಥಳ ತನಿಖೆ ಕೈಗೊಂಡು ಸರದಿ ಮೇಲ್ಚಾವಣಿಯನ್ನು ತೆರವುಗೊಳಿಸಲು ಸ್ಪಷ್ಟವಾದ ವರದಿ ಸಲ್ಲಿಸಲು ಕೋರಲಾಗಿದೆ ಎಂದು ತಾಲೂಕ ದಂಡಾಧಿಕಾರಿಗಳಿಗೆ ಮನವಿ ನೀಡಿದ್ದಾರೆ ಎಂದು ಯಕ್ತಾಪೂರದ ಮುಖಂಡರ ಹೇಳಿಕೆಯಾಗಿದೆ
ಆದರೆ ಕೆಲವು ಪ್ರಭಾವಿ ಮುಖಂಡರು ಮಾನ್ಯ ತಾಲೂಕ ದಂಡಾಧಿಕಾರಿಗಳ ದಾರಿ ತಪ್ಪಿಸಿ ಕಾನೂನು ವಿರುದ್ಧವಾಗಿ ದೇಣಿಗೆ ರಶೀದಿಗಳನ್ನು ಮಾನ್ಯ ದಂಡಾಧಿಕಾರಿಗಳಿಗೆ ಗೊತ್ತಿರದ ಹಾಗೆ ಸೃಷ್ಟಿ ಮಾಡಿಕೊಂಡು ಕೆಲವು ದೇಣಿಗೆ ರಸೀದಿ ಮುಖಾಂತರ ಹಣವನ್ನು ಕೊಳ್ಳೆ ಹೊಡೆದಿದ್ದಾರೆಂದು ಮಾನ್ಯ ತಹಸಿಲ್ದಾರರಿಗೆ ದೂರು ಸಲ್ಲಿಕೆಯಾಗಿದೆ.
ಕಾನೂನು ವಿರುದ್ಧವಾಗಿ ದೇಣಿಗೆ ಎತ್ತಿರುವ ಮುಖಂಡರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿರುವುದು ಯಾವ ನ್ಯಾಯ ಮತ್ತೆ ಕಾನೂನು ರೀತಿಯಲ್ಲಿ ಅವರಿಗೆ ಶಿಕ್ಷೆ ಆಗಬೇಕು ಮತ್ತು ಅವರು ಕೊಳ್ಳೆ ಹೊಡೆದ ಹಣವನ್ನು ಮಾನ್ಯ ದಂಡಾಧಿಕಾರಿಗಳಿಗೆ ಮರುಪಾವತಿಸಿ ಅವರಿಗೆ ಶಿಕ್ಷೆ ವಿಧಿಸಬೇಕೆಂದು ಊರಿನ ಮುಖಂಡರಾದ ನಿಂಗಪ್ಪ, ಪರಶುರಾಮ ಇವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ ರಾಜಶೇಖರ ಮಾಲಿ ಪಾಟೀಲ್