ಚಿಟಗುಪ್ಪ:ಬಸವಣ್ಣನವರು ಸಮಾಜದಲ್ಲಿ ಇರುವ ಅಂಕುಡೊಂಕು ತಿದ್ದಿ,ಆದರ್ಶ ಸಮಾಜ ನಿರ್ಮಾಣ ಮಾಡಲು ಹಗಲಿರುಳು ಶ್ರಮಿಸಿದ್ದಾರೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸಂಗಮೇಶ ಎನ್ ಜವಾದಿ ನುಡಿದರು.
ತಾಲೂಕು ಶರಣ ಸಾಹಿತ್ಯ ಪರಿಷತ್ತು ಕಾರ್ಯಾಲಯದಲ್ಲಿ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನೆಂದು ಘೋಷಿಸಿರುವ ಕರ್ನಾಟಕ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲು ಆಯೋಜಿಸಿದ್ದ
ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು ಅಸಮಾನತೆಯನ್ನು ಹೋಗಲಾಡಿಸಲು ಶರಣರು ಜೀವನ ಪೂರ್ತಿ ಹೋರಾಟ ಮಾಡಿದ್ದಾರೆ.ಪ್ರತಿಯೊಬ್ಬರೂ ಸ್ವಾಭಿಮಾನದಿಂದ ಬದುಕುವ ವ್ಯವಸ್ಥೆ ನಿರ್ಮಾಣ ಆಗಬೇಕು ಎಂದು ಬಸವಣ್ಣನವರು ಕನಸು ಕಂಡಿದ್ದವರು.ಅದರಂತೆಯೇ ಬಸವಣ್ಣನವರು ನಡೆದುಕೊಂಡಿದ್ದರು.ಆಡು ಮಾತಿನಲ್ಲೇ ಬಸವಣ್ಣನವರು ವಚನ ರೂಪಿಸಿದ್ದವರು ಜನರಿಗೆ ಅರ್ಥವಾಗುವ ರೀತಿಯಲ್ಲಿ ವಚನಗಳನ್ನು ರಚನೆ ಮಾಡಿ,ಕನ್ನಡ ಭಾಷೆಯನ್ನು ದೇವ ಭಾಷೆಯನ್ನಾಗಿ ಮಾಡಿದವರು.ಕರ್ನಾಟಕ ರಾಜ್ಯದ ಸಾಂಸ್ಕೃತಿಕ ನಾಯಕನೆಂದು ಬಸವಣ್ಣನವರನ್ನು ಘೋಷಣೆ ಮಾಡಿರುವ ಸರ್ಕಾರಕ್ಕೆ ತುಂಬು ಹೃದಯದ ಅಭಿನಂದನೆಗಳು ಸಲ್ಲಿಸುತ್ತೇವೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ
ಸವಿತಾ ಶಿವಪೂಜೆ,ಭಾರತಿ ಪಾಟೀಲ,
ರೇಷ್ಮಾ ಮಾಸೂಲ್ದಾರ್ ಅಭಿನಂದನಾ
ಸಮಾರಂಭದ ಕುರಿತು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶರಣೆ ದೇವಕಿ ಮಾಲಿ ಪಾಟೀಲ್ ವಹಿಸಿದ್ದರು.
ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶರಣೆ ಇಂದುಮತಿ ಗಾರಂಪಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾರಂಭದಲ್ಲಿ ಪುರಸಭೆ ಸದಸ್ಯರು ಲಕ್ಷ್ಮೀ ಗಡಮಿ, ಗಣ್ಯರಾದ ರೇಣುಕಾ ಗಾದಾ,ಸುಮಿತ್ರಾ ರೆಡ್ಡಿ,ಜ್ಯೋತಿ ಶಿವಪೂಜೆ,ಕವಿತಾ ಶಿವಪೂಜೆ,ಸರಸ್ವತಿ ಬಿಡಪ್ಪ,ಶಾಂತಾ ಬಿಡಪ್ಪ,ಸುನೀತಾ ಶಿವಪೂಜೆ,ಗಾಯತ್ರಿ ಬುದ್ಧಾ,ಪ್ರೀತಿ ಮದರಗಾಂವ,ಬಸಮ್ಮ ಹಸರಗುಂಡಿಗಿ,ಸರಸ್ವತಿ ಮದರಗಾಂವ,ಸುವರ್ಣ ಮದರಗಾಂವ,ಮಲ್ಲಣ್ಣಾ ಮದರಗಾಂವ ಸೇರಿದಂತೆ
ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು,ಗಣ್ಯರು,ಬಸವಾಭಿಮಾನಿಗಳು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.