ಶಿರಾಳಕೊಪ್ಪ ಪಟ್ಟಣದ ಬಸ್ ನಿಲ್ದಾಣದ ಬಳಿಯಲ್ಲಿ ಸ್ಪೋಟ ಸಂಭವಿಸಿದ ಪ್ರಕರಣದಲ್ಲಿ ಒಬ್ಬ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು,ಅಪಾಯದಿಂದ ಪಾರಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಹೇಳಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಮಾಹಿತಿ ಬಿಡುಗಡೆ ಮಾಡಿರುವ ಅವರು,ಸ್ಪೋಟ ಯಾವುದರಿಂದ ಸಂಭವಿಸಿದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಸುದ್ದಿ ಹಬ್ಬಿರುವಂತೆ ಅಲ್ಲಿ ದೊರೆತ ಬ್ಯಾಗ್’ನಲ್ಲಿ ಯಾವುದೇ ರೀತಿಯ ಒಲೆ ದೊರೆತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಉಮೇಶ್ ಹಾಗೂ ಅವರ ಪತ್ನಿ ರೂಪಾ ಎನ್ನುವವರು ಸಂತೆಗಾಗಿ ಪಟ್ಟಣಕ್ಕೆ ಬಂದಿದ್ದಾರೆ.ಈ ದಂಪತಿ ಅಲ್ಲಿ ರಸ್ತೆ ಬದಿಯಲ್ಲಿ ಬ್ಲಾಂಕೆಟ್/ಕಂಬಳಿಯೊಂದನ್ನು ಖರೀದಿಸಿದ್ದಾರೆ.ಮಾರಾಟ ಮಾಡಿದ ವ್ಯಕ್ತಿ ಆಂಟೋನಿ ಹಾಗೂ ಈ ದಂಪತಿ ಪರಿಚಯದವರಾಗಿದ್ದಾರೆ ಸಂತೆಯಲ್ಲಿ ಖರೀದಿ ಮಾಡಿ ಬರುತ್ತೇವೆ,ಅರ್ಧ ಗಂಟೆ ಬ್ಯಾಗ್ ಇಲ್ಲೇ ಇರಲಿ ಎಂದು ಹೇಳಿ ಬ್ಯಾಗ್ ಇಟ್ಟು ತೆರಳಿದ್ದಾರೆ.ಅಲ್ಲಿಟ್ಟಿದ್ದ ಬ್ಯಾಗ್’ನಿಂದ ಕೆಲ ಸಮಯದ ನಂತರ ಸ್ಪೋಟ ಸಂಭವಿಸಿದೆ ಎಂದು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಂತೆ ಕಾಡು ಹಂದಿಗಳಿಗೆ ಸಿಡಿಸುವ ಸಿಡಿ ಮದ್ದನ್ನು ಆ ಬ್ಯಾಗ್’ನಲ್ಲಿ ಇಟ್ಟಿದ್ದರು ಎಂದು ತಿಳಿದುಬಂದಿದೆ ಪ್ರಕರಣದ ಆರೋಪಿಯನ್ನು ಗುರುತಿಸಿದ್ದು,ಶೀಘ್ರದಲ್ಲೇ ಅವರನ್ನು ವಶಕ್ಕೆ ಪಡೆಯಲಾಗುವುದು ತನಿಖೆ ಪ್ರಗತಿಯಲ್ಲಿದೆ ಎಂದಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.