ಹನೂರು:ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ರವರ ಪಂಚಲೋಹದ ಪುತ್ಥಳಿ ನಿರ್ಮಾಣಕ್ಕೆ ಶಾಸಕ ಎಂ.ಆರ್.ಮಂಜುನಾಥ್ ಜೊತೆಗೂಡಿ ಭೂಮಿ ಪೂಜೆ ನೆರವೇರಿಸಿ ಬಳಿಕ ಮಾತನಾಡಿದ ಶಾಸಕರು ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ಸಲ್ಲಿಸಿರುವುದು ಪುಣ್ಯದ ಕೆಲಸವಾಗಿದೆ.ಈ ದಿನ ಹನೂರಿನ ಪಾಲಿಗೆ ಐತಿಹಾಸಿಕ ದಿನವಾಗಿದೆ ಎಂಬುದು ನನ್ನ ಭಾವನೆ.ಡಾ.ಅಂಬೇಡ್ಕರ್ ಪಂಚಲೋಹದ ಪುತ್ಥಳಿ ಕಾರ್ಯ ಮುಂಬರುವ ಏ.14ರಕ್ಕೆ ಲೋಕಾರ್ಪಣೆಗೊಳಿಸಿ ನಿಟ್ಟಿನಲ್ಲಿ ಕಾರ್ಯಮಗ್ನರಾಗೋಣ ಈ ಪ್ರತಿಮೆ ನಿರ್ಮಾಣ ರಾಜ್ಯಕ್ಕೆ ಮಾದರಿಯಾಗಲಿ ಎಂದರು.
ಈ ಸಂದರ್ಭದಲ್ಲಿ ಶ್ರೀಗಳಾದ ಹರಳಯ್ಯ, ಡಿ.ವೈ.ಎಸ್.ಪಿ.ಮಹಾನಂದ್,ಜಿ.ಪಂ.ಮಾಜಿ ಸದಸ್ಯ ಕಂಠಿ,ಛಲವಾದಿ ಮಹಾಸಭಾ ಬಸವರಾಜು, ಡಿಎಸ್ಎಸ್ ಸಂಚಾಲಕ ಸಿದ್ದರಾಜು,ಮಾಜಿ ಪಟ್ಟಣ ಪಂಚಾಯಿತಿ ಸದಸ್ಯ ಬಸವರಾಜು,ಪಟ್ಟಣ ಪಂಚಾಯತಿ ಸದಸ್ಯರು,ಪಟ್ಟಣದ ಯಜಮಾನರುಗಳು,ವಿವಿಧ ಗ್ರಾಮಗಳ ಮುಖಂಡರುಗಳು,ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ:ಉಸ್ಮಾನ್ ಖಾನ್