ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಬಂಜಾರ ತಾಯ್ನುಡಿ

ಬಂಜಾರ ಭಾಷಿಕರು ಜಗತ್ತಿನೆಲ್ಲೆಡೆ ನೆಲೆಸಿದ್ದಾರೆ. ಬಂಜಾರ ಭಾಷೆ ಸಾಹಿತ್ಯ ಸಂಸ್ಕೃತಿ ಎಲ್ಲವೂ ಬೆಳವಣಿಗೆ ಹಂತದತ್ತ ಸಾಗುತ್ತಿವೆ.ಆದರೂ ಬಂಜಾರ ಭಾಷೆಯ ಲಿಪಿ ವಿಷಯದಲ್ಲಿ ಅಷ್ಟು ಬೆಳವಣಿಗೆ ಕಾಣುತ್ತಿಲ್ಲ.ಕೆಲವು ವರ್ಷಗಳ ಹಿಂದೆ ಬಂಜಾರ ಭಾಷಿಕರೊಬ್ಬರು ಬಂಜಾರ ಲಿಪಿಯನ್ನು ಪರಿಚಯಿಸಿದ ಸುದ್ದಿ ಪತ್ರಿಕೆಗಳಲ್ಲಿ ಸುದ್ದಿಮಾಡಿ ಈಗ ಸದ್ದಿಲ್ಲದಂತಾಗಿದೆ.ಭಾಷೆಯೊಳಗಿನ ಸಂಪತ್ತನ್ನು ಹೊರಹಾಕಲು ಇಲ್ಲವೇ ಸಂಗೋಪನೆ ಮಾಡಿ ಮುಂದಿನ ಪೀಳಿಗೆಗೆ ಪರಿಚಯಿಸಲು ಲಿಪಿಯೂ ಒಂದು ಸಾಧನ.ಆದ ಕಾರಣ ಬಂಜಾರ ಭಾಷೆಗಾಗಿ ಪ್ರತ್ಯೇಕ ಲಿಪಿಯನ್ನು ಪರಿಚಯಿಸುವ ಇಲ್ಲವೆ ಇಂಡೋ ಆರ್ಯನ್ ಭಾಷೆಗಳ ಲಿಪಿಯನ್ನು ಹೊಂದಿಸುವ ಪ್ರಯತ್ನ ಇಲ್ಲವೇ ಅಗತ್ಯ ಕೆಲಸವನ್ನು ಮಾಡಬೇಕಿದೆ.

ಲಿಪಿಯ ವಿಚಾರಕ್ಕೆ ಬಂದಾಗ ಭಿನ್ನ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತವೆ.ಕೆಲವರು ಹೊಸದಾಗಿ ಬಂಜಾರ ಭಾಷೆಯ ಸ್ವರೂಪಕ್ಕೆ ಅನುಗುಣವಾಗಿ ಲಿಪಿಯನ್ನು ಸೃಷ್ಟಿಸಬೇಕು ಎಂದರೆ, ಇನ್ನು ಕೆಲವರು ಇಂಡೋ ಆರ್ಯನ್ ಭಾಷೆಯಾದ ಕಾರಣ ದೇವನಾಗರಿ ಲಿಪಿಯನ್ನೆ ಬಳಸಿದರೆ ಸೂಕ್ತ ಎನ್ನುವವರಿದ್ದಾರೆ.ಮತ್ತೊಂದು ವರ್ಗ ಭಾಷಿಕರ ಹಿತಕ್ಕಾಗಿ ಅವರು ನೆಲೆಸಿರುವ ರಾಜ್ಯಗಳಲ್ಲಿ ಇರುವ ತಾಯ್ನುಡಿ ಇಲ್ಲವೇ ಪ್ರಧಾನ ಭಾಷೆ ಹೊಂದಿರುವ ಲಿಪಿಯನ್ನೇ ಬಳಸಿದರೆ ಉಪಯುಕ್ತವಾಗುತ್ತದೆ. ಇಲ್ಲವಾದಲ್ಲಿ ಭಾಷಿಕರು ಸಮಸ್ಯೆ ಇಲ್ಲವೇ ಗೊಂದಲಕ್ಕೆ ಒಳಗಾಗಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.
ಕೇಳುತ್ತಾ ಹೋದರೆ ಇಂತಹ ಅನೇಕ ಅಭಿಪ್ರಾಯಗಳು ನಮ್ಮೆದುರಿಗೆ ಇರುತ್ತವೆ.ಆದಕಾರಣ ಬಂಜಾರ ಭಾಷೆ ಸಮಾಜ ಸಂಸ್ಕೃತಿ ಸಾಹಿತ್ಯದ ಸಂಗೋಪನೆಗಾಗಿ ಯೋಜನೆಯೊಂದನ್ನು ರೂಪಿಸಿ ಕೆಲಸ ಮಾಡಬೇಕಾದ ಅಗತ್ಯವಿದೆ…
ಎಲ್ಲರಿಗೂ ಲೋಕ ತಾಯ್ನುಡಿ ದಿನದ ಶುಭಾಷಯಗಳು…

—-ಲೋಹಿತೇಶ್ವರಿ ಎಸ್ ಪಿ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ