ಏನೆಂದು ಬಣ್ಣಿಸಲಿ ನಾನು ನಿನ್ನನು
ಸಮುದ್ರದ ತೊರೆ ಅಲೆಯಂತೆ ನೀನು
ಮೌನವಾಗಿ ನೀನು ಬರುವ ಹಾದಿಯನ್ನೇ ನೋಡುತ್ತಾ
ಕುಳಿತಿರುವ ದಡವು ನಾನು (೧)
ನಿನ್ನ ಬಗ್ಗೆ ಏಷ್ಟು ಹೇಳಿದರು ಸಾಲದು ಈ ಪದಗಳಲಿ ನಾನು
ಸಾಗರದ ಆಳದಲ್ಲಿ ಅಡಗಿ ಕುಳಿತಿರುವ ಕಪ್ಪೆ ಚಿಪ್ಪಿನಲ್ಲಿರುವ ಬೆಲೆ ಬಾಳುವ ಮುತ್ತು ನೀನು(೨)
ಸೂರ್ಯನ ಕಿರಣಗಳು ಭೂಮಿಗೆ ಚುಂಬಿಸಿದಂತೆ ನೀನು ನನ್ನನ್ನು ಒಲವು ಎಂಬ ಕಿರಣಗಳಲ್ಲಿ ಚುಂಬಿಸಿದೆ ಕ್ಷಣಮಾತ್ರದಲ್ಲಿ ಓಡಿಸಿದೆ ಬಾಳಲ್ಲಿರುವ ಅಂದಕಾರದ ಕತ್ತಲೆಯನ್ನ (೩)
ಅನುದಿನವೂ ನಿನ್ನ ಜೊತೆ ಇದ್ದರೆ ಸಾಕು
ಮನವು ಹಿಗ್ಗಿ ಕುಣಿದು ಕುಪ್ಪಳಿಸಿ ಸಂಭ್ರಮಿಸಲು ನನಗೆ ನೀನೂ ಬೇಕು
ಈ ಜಗದಲ್ಲಿ ಸ್ವರ್ಗವನ್ನು ಇನ್ನೆತಕೆ ಬೇರೆ ಎಲ್ಲಿ ಅಂತ ಹುಡುಕಲಿ ನಾನು
ಸಿಕ್ಕಂತಾಯಿತು ನಿನ್ನ ಹೃದಯ ಎಂಬ ಮಂದಿರದಲ್ಲಿ ಅಡಗಿ ಕುಳಿತಿರುವೆ ಅಲ್ಲೆ ನಾನು (೪)
ಏನೆಂದು ಬಣ್ಣಿಸಲಿ ನಾನು ನಿನ್ನನು
ಸಮುದ್ರದ ತೊರೆ ಅಲೆಯಂತೆ ನೀನು
ಮೌನವಾಗಿ ನೀನು ಬರುವ ಹಾದಿಯನ್ನೇ ನೋಡುತ್ತಾ
ಕುಳಿತಿರುವ ದಡವು ನಾನು.
:ಪ್ರದೀಪ್ ಕುಮಾರ್